ಕರ್ನಾಟಕದಲ್ಲಿ ಗ್ಯಾರಂಟಿ ಘೋಷಣೆ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲೂ ಗ್ಯಾರಂಟಿ ಸ್ಕೀಂ : ಮಲ್ಲಿಕಾರ್ಜುನ್‌ ಖರ್ಗೆ ಘೋಷಣೆ

ಮಧ್ಯಪ್ರದೇಶ, ಆಗಸ್ಟ್‌ 23: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನ ಘೋಷಿಸುವ ಮೂಲಕ ರಾಜ್ಯದಲ್ಲಿಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌, ಇದೀಗ ಮಧ್ಯ ಪ್ರದೇಶ ಚುನಾವಣೆ ಹಿನ್ನಲೆ ಸಾಲು ಸಾಲು ಗ್ಯಾರಂಟಿಗಳನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಘೋಷಿಸಿದ್ದಾರೆ.

ಈ ವರ್ಷಾಂತ್ಯಕ್ಕೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಬುಂದೇಲ್‌ಖಂಡ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರೈತರು, ಮಹಿಳೆಯರು, ಹಿಂದುಳಿದ ಸಮುದಾಯಗಳನ್ನು ಸೆಳೆಯುವ ಹಲವು ಉಚಿತ ಯೋಜನೆಗಳನ್ನು ಘೋಷಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಮಧ್ಯಪ್ರದೇಶದಲ್ಲಿ ಜಾತಿವಾರು ಜನಗಣತಿ ನಡೆಸಿಸಲಾವುದು ಎಂದು ಹೇಳಿದ್ದಾರೆ.

Mallikarjun Kharge Promises Caste Census If Congress Wins MP Election

ರೈತರ ಸಾಲಮನ್ನಾ, ಮಹಿಳಾ ಸಬಲೀಕರಣಕ್ಕಾಗಿ ಪ್ರತಿ ಮಹಿಳೆಗೂ ತಿಂಗಳಿಗೆ 1500 ರು. ಸಹಾಯಧನ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ಅನಿವಾರ್ಯವಾಗಿರುವ ಗ್ಯಾಸ್‌ ಸಿಲಿಂಡರ್‌ಗಳನ್ನು 500 ರು.ಗೆ ನೀಡಲಾಗುವುದು. 100 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಸಹ ನೀಡಲಾಗುವುದು ಎಂದು ಮಲ್ಲಿಕಾರ್ಜುನ್‌ ಖರ್ಗೆ ಗ್ಯಾರಂಟಿ ಭರವಸೆಯನ್ನ ನೀಡಿದ್ದಾರೆ.

ಕಾಂಗ್ರೆಸ್ ದೇಶಕ್ಕೆ ಸಂವಿಧಾನವನ್ನು ನೀಡಿ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಕಾರಣದಿಂದ ಇಂದು ಮಧ್ಯಪ್ರದೇಶದ ನರೇಂದ್ರ ಮೋದಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಪ್ರಧಾನಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಗರ ಜಿಲ್ಲೆಯಲ್ಲಿ ಸಂತ ರವಿದಾಸ್ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತದೆ. ದಲಿತರ ಹೋರಾಟಗಳನ್ನು ಎತ್ತಿ ಹಿಡಿದ ಮತ್ತು ಕಾವ್ಯ ಮತ್ತು ಅಧ್ಯಾತ್ಮದ ಮೂಲಕ ತುಳಿತಕ್ಕೊಳಗಾದವರ ಕಾರಣಗಳನ್ನು ಪ್ರತಿಪಾದಿಸಿದ ಪ್ರಮುಖ ಭಕ್ತಿ ಚಳವಳಿಯ ಸಂತರಾದ ಸಂತ ರವಿದಾಸ್ ಅವರನ್ನು ಆಡಳಿತಾರೂಢ ಬಿಜೆಪಿ ನೆನಪಿಸಿಕೊಳ್ಳುತ್ತದೆ ಎಂದು ಖರ್ಗೆ ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+