UP School Icident: ಇದು ಬಿಜೆಪಿ-ಆರ್‌ಎಸ್‌ಎಸ್ ದ್ವೇಷ ರಾಜಕಾರಣದ ಪರಿಣಾಮ:ಖರ್ಗೆ ಖಂಡನೆ
ನವದೆಹಲಿ, ಆಗಸ್ಟ್ 27: ಉತ್ತರ ಪ್ರದೇಶದ ಶಾಲೆಯೊಂದರ ಕಪಾಳಮೋಕ್ಷದ ವಿಡಿಯೋ ವಿಡಿಯೋ ವೈರಲ್ ಆಗಿದೆ. ತಮ್ಮ ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳನ್ನು ಕೇಳಿದ ಶಾಲಾ ಶಿಕ್ಷಕಿಯೊಬ್ಬರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಶಿಕ್ಷಕಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಹ ಘಟನೆ ಸಂಬಂಧ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯು.ಪಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಘಟನೆ ಭಾರತೀಯ ಜನತಾ ಪಕ್ಷದ (BJP) ದ್ವೇಷ ತುಂಬಿದ ರಾಜಕಾರಣದ ಪರಿಣಾಮ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದರು.

ಈ ರೀತಿಯ ಘಟನೆಗಳು ದೇಶದ ಘನತೆಗೆ ಧಕ್ಕೆ ಉಂಟು ಮಾಡುತ್ತವೆ. ಘಟನೆ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಹಾಗೂ ಯಾರೂ ಇಂತಹ ಕೃತ್ಯ ಎಸಗುವ ಧೈರ್ಯ ಮಾಡಬಾರದು ಎಂದು ತಿಳಿಸಿದರು.
ಕಪಾಳಮೋಕ್ಷದ ವಿಡಿಯೋ: ರಾಜಕಾರಣಿಗಳ ಟೀಕೆ
ಉತ್ತರ ಪ್ರದೇಶ ರಾಜ್ಯದ ಮುಜಫ್ಫರ್‌ನಗರದ ಶಾಲಾ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿ ಹೋಮ್‌ವರ್ಕ್ ಮಾಡಿಲ್ಲ ಎಂದು ತಿಳಿದು ಆತನ ಸಹಪಾಠಿಗಳಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ರಾಜಕೀಯ ಪಕ್ಷಗಳ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಶಿಕ್ಷಕಿ ನಡೆಯನ್ನು ಖಂಡಿಸಿದ್ದಾರೆ.
ಶಾಲೆಯಲ್ಲಿ ಧಾರ್ಮಿಕ ತಾರತಮ್ಯದ ಕಾರಣದಿಂದ ಶಿಕ್ಷಕರು ಇತರ ಮಕ್ಕಳನ್ನು ಥಳಿಸಿದ ರೀತಿ ಬಿಜೆಪಿ -RSS ದ್ವೇಷ ತುಂಬಿದ ರಾಜಕಾರಣದ ಪರಿಣಾಮವೇ ಇದಾಗಿದೆ. ಇಂತಹ ಘಟನೆಗಳು ಭಾರತದ ಜಾಗತಿಕ ಖ್ಯಾತಿಗೆ ಕಳಂಕ ತಂದೊಡ್ಡುತ್ತದೆ. ಇದು ಸಂವಿಧಾನಕ್ಕೆ ವಿರುದ್ಧ ಆಗಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಸಾಮಾಜಿಕ ಜಾತಲಾಣ X ನಲ್ಲಿ ಟ್ವೀಟ್ ಮಾಡಿದ್ದಾರೆ.

ಶಿಕ್ಷಕಿ ಪ್ರತಿಕ್ರಿಯೆ ಏನು?
ಮುಜಾಫರ್‌ನಗರದ ನೇಹಾ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರು 7 ವರ್ಷದ ಮುಸ್ಲಿಂ ಯುವಕನಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದ್ದಾರೆ. ಇದು ಅತಿರೇಕದ ಕೃತ್ಯ ಎಂದು ಆ ವಿಡಿಯೋಗೆ ಕೋಮುವಾದಿ ಟೀಕೆಗಳು ವ್ಯಕ್ತವಾಗಿವೆ. ಇದೀಗ ಆ ಶಿಕ್ಷಕ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾನೊಬ್ಬಳು ಶಿಕ್ಷಕಿಯಾಗಿ ಈ ಗ್ರಾಮದ ಸೇವೆಗೆ ಬಂದಿದ್ದೇನೆ. ಶಿಕ್ಷಣ ಕಲಿಸುವುದ ನನ್ನ ವೃತ್ತಿ ಧರ್ಮ. ಗ್ರಾಮದವರು ನನ್ನೊಂದಿಗೆ ಇದ್ದಾರೆ ಎಂದು ಪ್ರಾಂಶುಪಾಲರೂ ಆದ ಶಿಕ್ಷಕಿ ತ್ಯಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳೇ ಹೆಚ್ಚಿದ್ದು, ಎಲ್ಲರು ಒಗ್ಗಟ್ಟಿನಿಂದ ಇದ್ದಾರೆ. ನಾನು ದುರುದ್ದೇಶದಿಂದ ಹೀಗೆ ಮಾಡಿಲ್ಲ. ಮುಸ್ಲಿಂ ಹುಡುಗ ಮೊಹಮ್ಮದ್ ವಿದ್ಯಾಭ್ಯಾಸಕ್ಕೆ ಅವರ ಪೋಷಕರಿಂದ ಒತ್ತಡವಿತ್ತು. ಅಲ್ಲದೇ ಎರಡು ತಿಂಗಳಿಂದ ಹೋಂ ವರ್ಕ್ ಮಾಡಿರಲಿಲ್ಲ. ಇತರ ವಿದ್ಯಾರ್ಥಿಗಳು ಆತನಿಗೆ ಕಪಾಳಮೋಕ್ಸ್ ಮಾಡಿದರೆ ಆತ ಸರಿಹೋಗಬಹುದು ಎಂದು ಹೊಡೆಯುವಂತೆ ಹೇಳಿದ್ದೇನೆ. ಆದರೆ ವಿಡಿಯೋವನ್ನು ಅವರಿಗೆ ಇಷ್ಟ ಬಂದಂತೆ ಕಟ್ ಮಾಡಿ ಪೋಸ್ಟ್ ಮಾಡಲಾಗಿದೆ ಎಂದು ಹೇಳಿದರು.












Click it and Unblock the Notifications