Maldives: ಮಾಲ್ಡೀವ್ಸ್ ನಲ್ಲಿನ ಭಾರತೀಯ ಮಿಲಿಟರಿ ಸಿಬ್ಬಂದಿ ಹಿಂಪಡೆಯಲು ಗಡುವು, ಆಗಿದ್ದೇನು?
ಮಾಲೆ, ಜನವರಿ 14: ಮಾಲ್ಡೀವ್ಸ್ ಮತ್ತು ಭಾರತದ ಮಧ್ಯೆದೊಂದಿಗಿನ ವಿವಾದ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರು ಮಾರ್ಚ್ 15 ರೊಳಗೆ ತನ್ನ ದೇಶದಿಂದ ತನ್ನ ಮಿಲಿಟರಿ ಸಿಬ್ಬಂದಿ ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಕೇಳಿಕೊಂಡಿದ್ದಾರೆ ಎಂದು ಮಾಲೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರ್ಕಾರದ ಮೂಲಗಳ ಪ್ರಕಾರ, ಮಾಲ್ಡೀವ್ಸ್‌ನಲ್ಲಿ ಭಾರತದ, 88 ಭಾರತೀಯ ಸೇನಾ ಸಿಬ್ಬಂದಿ ಅಷ್ಟೇ ಇದ್ದಾರೆ. ಇನ್ನು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ ಅವರು, ಮಾರ್ಚ್ 15 ರೊಳಗೆ ತನ್ನ ಮಿಲಿಟರಿ ಸಿಬ್ಬಂದಿ ಭಾರತ ಹಿಂತೆಗೆದುಕೊಳ್ಳುವಂತೆ ಅಧ್ಯಕ್ಷರು ಔಪಚಾರಿಕವಾಗಿ ಕೇಳಿಕೊಂಡಿದ್ದಾರೆ ಎಂದಿದ್ದಾರೆ ಎಂದು ಸನ್‌ಲೈನ್ ಪತ್ರಿಕೆ ವರದಿ ಮಾಡಿದೆ.

ಸೈನ್ಯ ಹಿಂತೆಗೆತಕ್ಕಾಗಿ ವಿಶೇಷ ಸಮಿತಿ ರಚನೆ
ಇದು ಮಾಲ್ಡೀವ್ಸ್ ಅಧ್ಯಕ್ಷ ಡಾ ಮೊಹಮ್ಮದ್ ಮುಯಿಜ್ಜು ಮತ್ತು ಇಲ್ಲಿನ ಆಡಳಿತ ನೀತಿ ಪ್ರಕಾರ, "ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿ ಇರುವಂತಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಮಾಲ್ಡೀವ್ಸ್ನಲ್ಲಿ ಭಾರತವು ಸೈನ್ಯವನ್ನು ಹಿಂತೆಗೆದುಕೊಳ್ಳುವ ಕುರಿತು ಮಾತುಕತೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಭಾನುವಾರ ಬೆಳಗ್ಗೆ ರಾಜಧಾನಿ ಮಾಲೆಯಲ್ಲಿನ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಈ ಸಮಿತಿ ತನ್ನ ಮೊದಲ ಸಭೆ ನಡೆಸಿದೆ. ಇದರಲ್ಲಿ ಭಾರತೀಯ ಹೈಕಮಿಷನರ್ ಮುನು ಮಹಾವರ್ ಕೂಡ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಮೊದಲು ಮೋದಿ ವಿರುದ್ಧ ಟೀಕೆ: ಈಗ ಮನವಿ
ಭಾರತ ಸರ್ಕಾರ ಈ ಸುದ್ದಿ ಕುರಿತು ಪ್ರತಿಕ್ರಿಯಿಸಿಲ್ಲ. 2023ರಲ್ಲಿ ನವೆಂಬರ್ 17 ರಂದು ಮಾಲ್ಡೀವ್ಸ್ ಅಧ್ಯಕ್ಷರಾಗಿ ಮುಯಿಝು ಪ್ರಮಾಣವಚನ ಸ್ವೀಕರಿಸಿದರು. ಮಾಲ್ಡೀವ್ಸ್ ಜನರು ತನಗೆ 'ಬಲವಾದ ಜನಾದೇಶ ಕೊಟ್ಟಿದ್ದಾರೆ. ಇದೀಗ ಅವರು ಭಾರತಕ್ಕೆ ಮಿಲಿಟರಿ ಸಿಬ್ಬಂದಿಯನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ.
ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕುರಿತು ಮೂವರು ಉಪ ಮುಖ್ಯಮಂತ್ರಿಗಳು ಪೋಸ್ಟ್ ಮಾಡಿದ ಅವಹೇಳನಕಾರಿ ಕಾಮೆಂಟ್‌ಗಳ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಗಲಾಟೆಯ ನಡುವೆ ಭಾರತೀಯ ಸೇನಾ ಸಿಬ್ಬಂದಿ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರ ಬಗ್ಗೆ ವರದಿ ಆಗಿದೆ.
ಪ್ರಧಾನಿ ಮೋದಿ ವಿರುದ್ಧ ಟೀಕೆ ಕೇಳಿ ಬರುತ್ತಿದ್ದಂತೆ ಭಾರತದಿಂದ ಮಾಲ್ಡಿವ್ಸ್ ವಿರುದ್ಧ ಸಮರ ಉಂಟಾಯಿತು. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೇ ಆರಂಭವಾಗಿತ್ತು. ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಪ್ಲಾನ್ ಕ್ಯಾನ್ಸಲ್ ಮಾಡಿದ್ದಲ್ಲದೇ, ಅನೇಕ ಮಂದಿ ಬುಕ್ ಆಗಿದ್ದ ವಿಮಾನಯಾನ ಟಿಕೆಟ್ ರದ್ದುಪಡಿಸಿದ್ದರು. ಇದೆಲ್ಲ ಬೆಳವಣಿಗೆ ನಂತರ ಸೇನೆ ಹಿಂಪಡೆಯುವಂತೆ ಮಾಲ್ಡಿವ್ಸ್ ಮನವಿ ಮಾಡಿದೆ.












Click it and Unblock the Notifications