Renjusha Menon: ನೇಣು ಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿಯ ಮೃತದೇಹ ಪತ್ತೆ
ಬೆಂಗಳೂರು, ಅಕ್ಟೋಬರ್ 30: ಮಲಯಾಳಂ ನಟಿಯೊಬ್ಬರು ತಿರುವನಂತಪುರಂನಲ್ಲಿರುವ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲಾಟ್ ಶವವಾಗಿ ಪತ್ತೆ ಆಗಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆ ಆಗಿದೆ.
ಮಲಯಾಳಂ ನಟಿ ರೆಂಜೂಷಾ ಮೆನನ್ (35) ಅವರು ಸೋಮವಾರ ಬೆಳಗ್ಗೆ ತಿರುವನಂತಪುರದ ಫ್ಲಾಟ್ ನಲ್ಲಿ ಉಸಿರು ಚೆಲ್ಲಿದ್ದಾರೆ. ಅವರ ಪತಿ ಮನೋಜ್ ಅವರು ಸಹ ಕಲಾವಿದರಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನಟಿಯು ಆತ್ಮಹತ್ಯೆ ಮಾಡಿಕೊಂಡಂತೆ ಕಂಡು ಬರುತ್ತಿದೆ. ಸದ್ಯ ಪೊಲೀಸರು ದೊರೆತ ಸಾಕ್ಷಾಧಾರಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ, ಕೊಚ್ಚಿ ಮೂಲದ ನಟಿ ಆರಂಭದಲ್ಲಿ ಟಿವಿ ಕಿರುತೆರೆಗೆ ಬರುವ ಮೊದಲು ಟಿವಿ ಕಾರ್ಯಕ್ರಮದ ನಿರೂಪಕಿ ಆಗಿ ವೃತ್ತಿಜೀವನ ಆರಂಭಿಸಿದ್ದರು. ಅವರು 'ಸ್ತ್ರೀ' ಧಾರಾವಾಹಿ ಮೂಲಕ ಕಿರು ತೆರೆಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಮುಂದೆ ಅನೇಕ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡರು. ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಥಿರ್ಕ ಸಂಕಷ್ಟಗಳನ್ನು ಎದುರಿಸುತ್ತಿದ್ದರು ಎನ್ನಲಾಗಿದೆ.
ದೂರದರ್ಶನ ಕಾರ್ಯಕ್ರಮ, ಪೋಷಕ ಪಾತ್ರ ನಿರ್ವಹಿಸಿದ್ದ ನಟಿ
ಮೃತ ನಟಿ ರೆಂಜೂಷಾ ಮೆನನ್ ಅವರು 'ಸಿಟಿ ಆಫ್ ಗಾಡ್', 'ಮರಿಕ್ಕುಂಡೋರು ಕುಂಜಾಡು', 'ಬಾಂಬೆ ಮಾರ್ಚ್', 'ಕಾರ್ಯಸ್ಥಾನ', 'ಒನ್ ವೇ ಟಿಕೆಟ್', 'ಅತ್ಭುತ ದ್ವೀಪ' ಸೇರಿ ಅನೇಕ ದೂರದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು. ಇದರೊಂದಿಗೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೂ ಅವರು ಬಣ್ಣ ಹಚ್ಚಿದರು. ಈ ಪಾತ್ರಗಳೇ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟವು. ಕೆಲವೇ ವರ್ಷಗಳಲ್ಲಿ ಜನಪ್ರೀಯತೆ ಗಳಿಸಿದರು.

ಮೆನನ್ ಅವರು ಹಲವು ಧಾರಾವಾಹಿಗಳಲ್ಲಿ ನಿರ್ಮಾಪಕಿ ಆಗಿಯು ಕಾರ್ಯ ನಿರ್ವಹಿಸಿದ್ದಾರೆ. ನಟನೆ ಜೊತೆಗೆ ಅವರು ವೃತ್ತಿಪರ ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದಾರೆ. ಮೃತ ನಟಿಯ ತಂದೆ ಸಿಜಿ ರವೀಂದ್ರನಾಥ್ ಮತ್ತು ತಾಯಿ ಉಮಾದೇವಿ ಅವರನ್ನು ಅಗಲಿದ್ದಾರೆ.
ಸಾವಿಗೂ ಮುನ್ನ ಇನ್‌ಸ್ಟಾಗ್ರಾಮ್ ಪೋಸ್ಟ್
ಸೋಮವಾರ ಅವರು ಮರಣಕ್ಕೂ ಮುನ್ನ ನಟ 'ಆನಂದ ರಾಗಂ' ಸಹನಟಿಯಾದ ಶ್ರೀದೇವಿ ಅನಿಲ್ ಅವರೊಂದಿಗೆ ಮಾಡಿರುವ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮೆನನ್ ಅವರ ಸಾವಿನ ಸುದ್ದಿ ಅವರ ಅಭಿಮಾನಿಗಳಲ್ಲಿ ಆಘಾತ ತಂದಿದೆ. ಅದೇ ಪೋಸ್ಟ್‌ಗೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದೆಲ್ಲ ಬರೆದು ಕಂಬನಿ ಮಿಡಿದಿದ್ದಾರೆ.
ಕೆಲವು ವಾರಗಳ ಹಿಂದಷ್ಟೇ ಮಲಯಾಳಂ ನಟಿ ಅಪರ್ಣಾ ನಾಯರ್ ಅವರು ಆತ್ಮಹತ್ಯೆಗೀಡಾಗಿದ್ದರು. 33 ವರ್ಷದ ನಟ, ಕೆಲವು ಚಲನಚಿತ್ರಗಳು ಮತ್ತು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಅವರ ಮೃತದೇಹವು ಸಹ ತಮ್ಮ ನಿವಾಸದಲ್ಲಿ ಹೀಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು.
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]












Click it and Unblock the Notifications