ಮಕರ ಜ್ಯೋತಿ ಕಂಡು ಪುನೀತರಾದ ಭಕ್ತರು
ತಿರುವನಂತಪುರಂ, ಜ.15: ದೇವರನಾಡು ಕೇರಳದಲ್ಲಿ ಲಕ್ಷಾಂತರ ಭಕ್ತರು 'ಮಕರ ಜ್ಯೋತಿ' ದರ್ಶನವಾಗುತ್ತಿದ್ದಂತೆ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಉದ್ಗರಿಸುತ್ತಾ ಭಕ್ತಿ ಪರವಶರಾಗಿಬಿಟ್ಟರು. ಮಕರ ಸಂಕ್ರಾಂತಿ ಅಂಗವಾಗಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಸಾಂಗವಾಗಿ ನೆರವೇರಿತು.
ಇರುಮುಡಿ ಹೊತ್ತು ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿಕೊಂಡು ಭಕ್ತಾದಿಗಳು ಶಬರಿಮಲೆ ಏರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಪವಿತ್ರ ಮಂಡಲಕಾಲ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಾರತದ ವಿವಿಧ ಕಡೆಗಳಿಂದ ಮತ್ತು ವಿದೇಶಗಳಿಂದಲೂ ಭಕ್ತರ ದಂಡು ಶಬರಿಮಲೆಯತ್ತ ಧಾವಿಸಿ ಬಂದು ಜ.14ರಂದು ಮಕರ ಜ್ಯೋತಿ ದರ್ಶನ ಪಡೆದಿದ್ದಾರೆ. [ಶಬರಿಮಲೆ ಮಕರ ಜ್ಯೋತಿ ಮಾನವ ನಿರ್ಮಿತ!]
ನವೆಂಬರ್ 15ರಂದು ಆರಂಭಗೊಂಡ ಮಂಡಲಪೂಜೆ ಮಹೋತ್ಸವ ಡಿ.26ರಂದು ಕೊನೆಗೊಂಡಿತ್ತು. ಮಕರವಿಲಿಕ್ಕು ಸಂಭ್ರಮ ಡಿ. 30 ರಂದು ಆರಂಭಗೊಂಡು ಜನವರಿ 20 ರಂದು ಕೊನೆಗೊಳ್ಳಲಿದೆ. ಮಕರ ಜ್ಯೋತಿ ದರ್ಶನ ಜನವರಿ 14ರಂದು ನಡೆದಿದೆ. [ಶಬರಿಮಲೆ ಚಿತ್ರಗಳ ಗ್ಯಾಲರಿ]
ಶಬರಿಮಲೆ ದರ್ಶನಾರ್ಥಿಗಳ ಉತ್ಸವ, ಪಾರಂಪರಿಕ ಸೇವೆಗಳು, ಸಂಪ್ರದಾಯಿಕ ಕ್ರಿಯೆ ಬಗ್ಗೆ ಶಬರಿಮಲೆ ವೆಬ್ ತಾಣದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿತ್ತು. ಸಂಕ್ರಾಂತಿ ಪೂಜಾ ಕೈಂಕರ್ಯವನ್ನು ಶ್ರೀಶಂಕರ ಟಿವಿಯಲ್ಲಿ ಲೈವ್ ಆಗಿ ಪ್ರಸಾರ ಮಾಡಲಾಯಿತು. ಪವಿತ್ರ ಚಿನ್ನದ ಆಭರಣ ವಸ್ತ್ರಗಳನ್ನು ಸ್ವಾಮಿ ದರ್ಶನದ ಚಿತ್ರಗಳನ್ನು ನೋಡಿ...[ 'ಮಕರ ಜ್ಯೋತಿ' ಎಂದರೇನು? ]

ಮಂಡಲಪೂಜೆ ಮಹೋತ್ಸವ ವಿವರ
ನವೆಂಬರ್ 15ರಂದು ಆರಂಭಗೊಂಡ ಮಂಡಲಪೂಜೆ ಮಹೋತ್ಸವ ಡಿ.26ರಂದು ಕೊನೆಗೊಂಡಿತ್ತು. ಮಕರವಿಲಿಕ್ಕು ಸಂಭಮ ಡಿ. 30 ರಂದು ಆರಂಭಗೊಂಡು ಜನವರಿ 20 ರಂದು ಕೊನೆಗೊಳ್ಳಲಿದೆ. ಮಕರ ಜ್ಯೋತಿ ದರ್ಶನ ಜನವರಿ 14ರಂದು ನಡೆದಿದೆ.

ದಟ್ಟಾರಣ್ಯದಲ್ಲಿರುವ ಶಬರಿಮಲೆ ದೇಗುಲ
ಕೇರಳ ಪದನಮತಿಟ್ಟ ಜಿಲ್ಲೆಯ ಪೂರ್ವದಲ್ಲಿ ನೆಲೆ ನಿಂತಿರುವ ಶಬರಿಮಲೆ, ಕೇರಳದ ಸೌಂದರ್ಯವನ್ನು ಹೆಚ್ಚಿಸಿದ ಸಂರಕ್ಷಿತ ಪೆರಿಯಾರ್ ಹುಲಿ ಸಂರಕ್ಷಣಾ ಅರಣ್ಯದಲ್ಲಿ ಶಬರಿಮಲೆ ದೇಗುಲವಿದೆ

ಭಕ್ತರು ಕಠಿಣ ವ್ರತಾಚರಣೆ ನಡೆಸಬೇಕು
ಶಬರಿಮಲೆಯಲ್ಲಿ ಅಧಿದೇವತೆ ಸ್ವಾಮಿ ಅಯ್ಯಪ್ಪಯನ್ನು ಕಾಣಲು. ಶಬರಿಮಲೆಗೆ ತೀರ್ಥಯಾತ್ರೆಗೆ ಬರಲು ಇಚ್ಚಿಸುವ ಭಕ್ತರು ಕಡ್ಡಾಯವಾಗಿ ಮಾಂಸಾಹಾರವನ್ನು ತ್ಯಜಿಸಬೇಕು ಮತ್ತು 41 ದಿನಗಳ ಕಠಿಣ ವ್ರತಾಚರಣೆ ನಡೆಸಬೇಕು.

ಲಕ್ಷಾಂತರ ಭಕ್ತರಿಂದ ದೇಗುಲ ದರ್ಶನ
ಪ್ರತಿವರ್ಷ ಸರಿಸುಮಾರು 45-50 ದಶಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದು, ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ವಾರ್ಷಿಕ ಭಕ್ತರು ಭೇಟಿ ನೀಡುವ ತೀರ್ಥಕ್ಷೇತ್ರಗಳಲ್ಲಿ ಒಂದೆನಿಸಿದೆ.

ಅಧಿಕ ಬೆಟ್ಟಗಳ ಸಾಲು ಇಲ್ಲಿದೆ
ಶಬರಿಮಲ ದೇವಸ್ಥಾನ ಪರ್ವತಗಳ ಸಾಲು ಹಾಗೂ ದಟ್ಟ ಅರಣ್ಯಗಳಿಂದ ಸುತ್ತುವರಿದಿದ್ದು ಸಮುದ್ರ ಮಟ್ಟದಿಂದ 1535 ಅಡಿ ಎತ್ತರದಲ್ಲಿದೆ. ಸುಮಾರು 18ಕ್ಕೂ ಅಧಿಕ ಬೆಟ್ಟಗಳ ಸಾಲು ಇಲ್ಲಿದೆ.

ಸರ್ಕಾರಿ ಸ್ವಾಮ್ಯದ ತಿರುವಾಂಕೂರ್ ದೇವಸ್ಥಾನ ಮಂಡಳಿ
ಶಬರಿಮಲೆಯು ಸರ್ಕಾರಿ ಸ್ವಾಮ್ಯದ ತಿರುವಾಂಕೂರ್ ದೇವಸ್ಥಾನ ಮಂಡಳಿಯ ಆಡಳಿತದಲ್ಲಿದೆ. ಕಾರ್ತಿಕ ಮಾಸದಲ್ಲಿ ಲಕ್ಷಾಂತರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಹೆಚ್ಚಿನ ಭದ್ರತೆ ಹಾಗೂ ಮೂಲ ಸೌಕರ್ಯಕ್ಕೆ ಆಡಳಿತ ಮಂಡಳಿ ಹೆಚ್ಚಿನ ಒತ್ತು ನೀಡಿತ್ತು.

ಮೂರು ತಿಂಗಳ ಅವಧಿಯಲ್ಲಿ ದರ್ಶನ
ನವೆಂಬರ್ ತಿಂಗಳ ಮಧ್ಯಭಾಗದಿಂದ ಶುರುವಾಗುವ ತೀರ್ಥಯಾತ್ರೆಯ ಸಮಯ ಜನವರಿ ತಿಂಗಳ ನಾಲ್ಕನೇ ವಾರದ ತನಕ ನಡೆಯುತ್ತದೆ. ಚಿತ್ರದಲ್ಲಿ ಅಯ್ಯಪ್ಪ ಸ್ವಾಮಿಗೆ ತೊಡಿಸಿದ ಆಭರಣಗಳು ನಂಬೂದಿರಿಗಳ ಕೈ ಸೇರುತ್ತಿ

ಧಾರ್ಮಿಕ ಸಹಿಷ್ಣುತೆ ಮತ್ತು ಏಕತೆ
ಮಂಡಲಪೂಜೆ ಮತ್ತು ಮಕರವಿಳಕ್ಕು ಶಬರಿಮಲೆಯ ಪ್ರಮುಖ ಹಬ್ಬದ ಅವಧಿಗಳು. ಮುಸ್ಲಿಂ ಸಂತ ವಾವರ ಸ್ವಾಮಿಯ ಪುಣ್ಯ ಸ್ಥಳವೂ ಇಲ್ಲಿದ್ದು ಪೂಜೆ ಸಲ್ಲಿಸಲಾಗುತ್ತಿದ್ದು ಧಾರ್ಮಿಕ ಸಹಿಷ್ಣುತೆ ಮತ್ತು ಏಕತೆಗೂ ಈ ತಾಣ ಸಾಕ್ಷಿಯಾಗಿದೆ

ಪವಿತ್ರ ಜ್ಯೋತಿ ದರ್ಶನ
ಮಹೇಶ್ವರುಲು ತಂತ್ರಿ ಹಾಗೂ ಪ್ರಧಾನ ಅರ್ಚಕ ಪಿ.ಎನ್ ನಾರಾಯಣ್ ನಂಬೂದಿರಿ ಅವರು ದೀಪ ಪ್ರಧಾನ ಮಾಡಿದ ಐದು ನಿಮಿಷಕ್ಕೆ ಸರಿಯಾಗಿ ಪೂರ್ವ ದಿಗಂತದಲ್ಲಿ ಮಕರ ಜ್ಯೋತಿ ದರ್ಶನ ಭಕ್ತರಿಗೆ ಸಿಗುತ್ತದೆ

ಸ್ವಾಮಿ ಆಭರಣಗಳನ್ನು ಸ್ವೀಕರಿಸುತ್ತಿರುವುದು
ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಎಂಪಿ ಗೋವಿಂದನ್ ನಾಯರ್, ಶಬರಿಮಲೆ ದೇಗುಲ ಸಂಚಾಲಕ ಕೆ ಜಯಕುಮಾರ್, ಸದಸ್ಯ ಸುಭಾಶ್ ವಾಸು, ವಿಶೇಷ ಆಯುಕ್ತ ಕೆ ಬಾಬು ಹಾಗೂ ದೇಗುಲದ ಆಯುಕ್ತ ಪಿ ವೇಣುಗೋಪಾಲ್ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿ ಆಭರಣಗಳನ್ನು ಭದ್ರವಾಗಿ ಮಂಡಳಿಗೆ ಹಿಂತಿರುಗಿಸಲಾಗುತ್ತದೆ












Click it and Unblock the Notifications