Exit Poll 2024: ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಮೇಲುಗೈ ಎಂದ ಎಕ್ಸಿಟ್ ಪೋಲ್
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಇಂದು ಪೂರ್ಣಗೊಂಡಿರುವ ಹಿನ್ನೆಲೆ ಪೀಪಲ್ ಪಲ್ಸ್ ಸಂಸ್ಥೆಯು ಚುನಾವಣೋತ್ತರ ಚುನಾವಣೋತ್ತರ ಫಲಿತಾಂಶ (Exit poll) ಪ್ರಕಟಿಸಿದೆ. ಇದರಂತೆ ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.
ಪೀಪಲ್ ಪಲ್ಸ್ ಹೇಳುವಂತೆ ಬಿಜೆಪಿ 102-120 ಸ್ಥಾನ ಪಡೆಯಲಿದೆ. ಶಿವಸೇನೆ (ಇಎಸ್) 42-61 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಈಗಾಗಲೇ ಬಿಜೆಪಿ ಜೊತೆಗೆ ಶಿವಸೇನೆ ಕೈಜೋಡಿಸಿದ್ದು, ಈ ಎರಡೂ ಸಂಖ್ಯೆಗಳು ಸೇರಿದರೆ ಮೈತ್ರಿ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದೆ.

ಇನ್ನುಳಿದಂತೆ ಎನ್‌ಸಿಪಿ (ಎಪಿ) 14-25 ಸ್ಥಾನ, ಐಎನ್‌ಸಿ (ಕಾಂಗ್ರೆಸ್) 24-44, ಶಿವಸೇನಾ (ಯುಬಿಟಿ) 21-36, ಎನ್‌ಸಿಪಿ (ಎಸ್‌ಪಿ) 28-41 ಹಾಗೂ ಇತರೆ 6-12 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ 145 ಮ್ಯಾಜಿಕ್ ನಂಬರ್ ಆಗಲಿದೆ. ಶಿವಸೇನಾ, ಬಿಜೆಪಿ ಹಾಗೂ ಎನ್‌ಸಿಪಿ (ಎಪಿ) ಒಳಗೊಂಡ ಮಹಾಯುತಿ ಒಕ್ಕೂಟವು 175ರಿಂದ 195 ಸ್ಥಾನಗಳನ್ನು ಪಡೆಯಲಿದ್ದು, ಮಹಾ ವಿಕಾಸ್ ಅಘಾಡಿಯು 85ರಿಂದ 112 ಸ್ಥಾನಗಳನ್ನು ಪಡೆಯಲಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಇಂದು ಮುಕ್ತಾಯಗೊಂಡ ಬೆನ್ನಲ್ಲೇ ವಿವಿಧ ಸಂಸ್ಥೆಗಳು ಚುನಾವಣೋತ್ತರ ಫಲಿತಾಂಶ (Exit poll) ಪ್ರಕಟಿಸಿವೆ. ಅದರಂತೆ ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ಬಹುತೇಕ ಪಕ್ಕಾ ಎಂದು ಭವಿಷ್ಯ ನುಡಿದಿವೆ.
ಎಲೆಕ್ಟೋರಲ್ ಎಡ್ಜ್ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ 78 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 60, ಎನ್‌ಸಿಪಿ-ಎಸ್‌ಪಿ 46, ಶಿವಸೇನಾ (ಯುಬಿಟಿ) 44, ಎಸ್‌ಎಚ್‌ಎಸ್ 26, ಎನ್‌ಸಿಪಿ-ಎಪಿ 14 ಹಾಗೂ ಇತರೆ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಏರ್ಪಡಲಿದ್ದು, ಮೈತ್ರಿ ಸರ್ಕಾರ ರಚನೆಯಾಗುವ ಸುಳಿವನ್ನು ಈ ಸಮೀಕ್ಷೆ ಹೇಳುತ್ತಿದೆ. ಇನ್ನು ಮತ ಹಂಚಿಕೆ ನೋಡುವುದಾದರೆ.. ಬಿಜೆಪಿಗೆ ಶೇ 24ರಷ್ಟಿದ್ದರೆ, ಕಾಂಗ್ರೆಸ್ (ಶೇ 17), ಎಸ್‌ಎಸ್‌ಯುಬಿಟಿ (ಶೇ 15), ಎನ್‌ಸಿಪಿ-ಎಸ್‌ಪಿ (ಶೇ 14), ಇತರೆ (ಶೇ 14), ಎಸ್‌ಎಚ್‌ಎಸ್ (ಶೇ 10), ಎನ್‌ಸಿಪಿ-ಎಪಿ (ಶೇ 6) ಪಾಲಾಗಿವೆ ಎಂದು ಹೇಳಿದೆ.
ಎಬಿಪಿ-ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ ಮಹಾರಾಷ್ಟ್ರದಲ್ಲಿ ಈ ಬಾರಿ ಬಿಜೆಪಿ-ಮಹಾಯುತಿಗೆ 150-170 ಸ್ಥಾನಗಳು, ಕಾಂಗ್ರೆಸ್-ಎಂವಿಎಗೆ 110-130 ಸ್ಥಾನಗಳು ಮತ್ತು ಇತರರಿಗೆ 8-10 ಸ್ಥಾನಗಳು ಸಿಗಲಿವೆ ಎಂದು ಹೇಳಿದೆ.












Click it and Unblock the Notifications