ಭಾರತದಲ್ಲಿ ಶಿವರಾತ್ರಿ ಸಂಭ್ರಮವನ್ನು ಸಾರಿ ಹೇಳುವ ಚಿತ್ರಗಳು ನಿಮಗಾಗಿ
ನವದೆಹಲಿ,
ಫೆಬ್ರವರಿ.21: ದೇಶಾದ್ಯಂತ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಷ್ಟಾರ್ಥ ಸಿದ್ಧಿಸುವ ಆದಿಶಂಕರನ ಹೆಸರಿನಲ್ಲಿ ಭಕ್ತಾದಿಗಳು ಬೆಳಗಿನಿಂದ ಉಪವಾಸ ವ್ರತವನ್ನು ಮಾಡುತ್ತಾ ದೇವರನ್ನು ಸ್ಮರಿಸುತ್ತಾರೆ. ಸೂರ್ಯಾಸ್ತವಾಗುತ್ತಿದ್ದಂತೆ ಈಶ್ವರನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.ಶಿವನ ದೇವಸ್ಥಾನಗಳಿಗೆ ತೆರಳಿ ಹೂವು ಬಿಲ್ವಪತ್ರೆಯನ್ನು ಅರ್ಪಿಸುವ ಭಕ್ತರು, ನೇವದ್ಯೆಯ ಬಳಿಕ ತಮ್ಮ ಉಪವಾಸವನ್ನು ಬಿಟ್ಟು ಹಣ್ಣು ಹಂಪಲುಗಳನ್ನು ಸೇವಿಸುತ್ತಾರೆ. ಇನ್ನು, ಇಡೀರಾತ್ರಿ ಶಿವನಾಮ ಸ್ಪುತಿಸುತ್ತಾ ಭಜನೆಯನ್ನು ಮಾಡುವ ಆಚರಣೆಯೂ ಇದೆ. id="toptextpromo"> id='are-slot-1' class='oiad oi-axt oiadv'> ವಿವಿಧ ತೀರ್ಥಕ್ಷೇತ್ರಗಳಲ್ಲಿ ಜಗದೀಶ್ವರನಿಗೆ ವಿಶೇಷ ಪೂಜೆ ಪುನಸ್ಕಾರ ಮತ್ತು ಆಚರಣೆಗಳನ್ನು ನಡೆಸಲಾಗುತ್ತಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಹೇಗೆ ಶಿವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದಾರೆ ಎಂಬುದನ್ನು ಈ ಚಿತ್ರಗಳೇ ಸಾಕ್ಷೀಕರಿಸುತ್ತವೆ. id='are-slot-2' class='oiad oi-axt oiadv'>

ಶಿವಲಿಂಗಕ್ಕೆ ಹಾಲಿನ ಅಭಿಷೇಕ
ತೆಲಂಗಾಣದ ಕೀಸರ್ ಘಟ್ಟದಲ್ಲಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಿದ ಭಕ್ತಾದಿಗಳು.

ದೇವರ ಮೂರ್ತಿ ಹೊತ್ತು ಸಾಗಿದ ಭಕ್ತರು
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಕುಲ್ಲು ಎಂಬಲ್ಲಿ ದೇವರ ರಥವನ್ನು ಹೊತ್ತು ಸಾಗುತ್ತಿರುವ ಭಕ್ತರು.

ಹೋಮ-ಹವನ ನಡೆಸಿದ ಭಕ್ತರು
ಕೋಲ್ಕತ್ತಾದಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳಿಂದ ಹೋಮ-ಹವನ.

ಕೋಲ್ಕತ್ತಾದಲ್ಲಿ ನಂದಿ ವಿಗ್ರಹಕ್ಕೆ ಅಭಿಷೇಕ
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಇರುವ ನಂದಿ ವಿಗ್ರಹಕ್ಕೆ ಭಕ್ತರು ಅಭಿಷೇಕವನ್ನು ನೆರವೇರಿಸಿದರು.

ಜಬಲ್ ಪುರ್ ನಲ್ಲಿ ಶಿವನ ಎದುರು ಭಕ್ತರ ಪ್ರಾರ್ಥನೆ
ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ಬೃಹತ್ ಶಿವನ ಮೂರ್ತಿಯ ಎದುರಿನಲ್ಲಿ ನೆರೆದು ಪ್ರಾರ್ಥಿಸುತ್ತಿರುವ ಭಕ್ತರು.

ಮಿರ್ಜಾಪುರ್ ನಲ್ಲಿ ಕಾಣಿಸಿಕೊಂಡ ನಾಗಾಸಾಧುಗಳು
ಮಹಾಶಿವರಾತ್ರಿ ಹಿನ್ನೆಲೆ ಉತ್ತರ ಪ್ರದೇಶದ ಮಿರ್ಜಾಪುರ್ ನಲ್ಲಿ ನಾಗಾಸಾಧುಗಳು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಶ್ರೀನಗರದ ಶಂಕರಾಚಾರ್ಯ ದೇವಸ್ಥಾನಕ್ಕೆ ಕಂದನೊಂದಿಗೆ ತಾಯಿ
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇರುವ ಶಂಕರಾಚಾರ್ಯ ದೇವಸ್ಥಾನಕ್ಕೆ ಪುಟ್ಟ ಮಗುವಿನೊಂದಿಗೆ ಆಗಮಿಸಿದ ತಾಯಿ.

ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ವಿಜಯವಾಡದ ಬಳಿಯ ಕೃಷ್ಣಾ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು.

ಶಿವಲಿಂಗಕ್ಕೆ ಅಭಿಷೇಕ ಮಾಡಿದ ಭಕ್ತರು
ಸೂರತ್ ನಲ್ಲಿ ಮಹಾಶಿವರಾತ್ರಿ ಹಿನ್ನೆಲೆಯ ಶಿವನ ದೇವಸ್ಥಾನದಲ್ಲಿ ನೆರೆದ ಭಕ್ತರು ವಿಶೇಷ ಅಭಿಷೇಕ ನೆರವೇರಿಸಿದರು.












Click it and Unblock the Notifications