2 ಬೃಹತ್ ಸೇತುವೆಗಳಿಗೆ 'ವಾಯಪೇಯಿ- ಸಾರ್ವರ್ಕರ್' ಹೆಸರಿಡಲು 'ಮಹಾ' ನಿರ್ಧಾರ
ಬೆಂಗಳೂರು, ಜೂನ್ 28: ಐಕಾನಿಕ್ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ಗೆ (MTHL) ಬಿಜೆಪಿ ಧೀಮಂತ ನಾಯಕ ಹಾಗೂ ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಇಡಲಾಗುವುದು. ಆದರೆ ವರ್ಸೋವಾ-ಬಾಂದ್ರಾ ಸೀ ಲಿಂಕ್ ಗೆ (VBSL) 'ಸ್ವಾತಂತ್ರ್ಯವೀರ್' ವಿನಾಯಕ್ ದಾಮೋದರ್ ಸಾವರ್ಕರ್ ಅವರು ಹೆಸರಿಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ.
ಹೆಸರು ನಾಮಕರಣ ನಿರ್ಧಾರವು ಬುಧವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು. ಈ ಕುರತು ಮಹಾಸರ್ಕಾರ ತಿಳಿಸಿದೆ.

ಐಕಾನಿಕ್ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವಾ ಶೇವಾ ಅಟಲ್ ಸೇತು ಎಂದು ಕರೆಯಲಾಗುತ್ತದೆ. ಇನ್ನೂ VBSL ಅನ್ನು ಸ್ವಾತಂತ್ರ್ಯವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಏಕ್‌ನಾಥ್ ಶಿಂಧೆ ಅವರಿಗೆ ಪತ್ರ ಬರೆದು ಮರುನಾಮಕರಣ ಬಗ್ಗೆ ಮನವಿ ಮಾಡಿದ್ದಾರೆ.
ಏಕನಾಥ್ ಶಿಂಧೆ ಭರವಸೆ
ಮುಂದಿನ ತಿಂಗಳು ಮೇ 28 ರಂದು ಬರುವ ವೀರ್ ಸಾವರ್ಕರ್ ಜಯಂತಿಯಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ವಿಬಿಎಸ್‌ಎಲ್‌ಗೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡಲಿದೆ ಎಂದು ಅವರು ಈ ವೇಳೆ ಭರವಸೆ ನೀಡಿದರು.
ತಿಂಗಳ ಹಿಂದಷ್ಟೇ ಮುಂಬೈ ಕರಾವಳಿ ರಸ್ತೆ ಯೋಜನೆಗೆ ಐತಿಹಾಸಿಕ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜ್ ಅವರ ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ರ ಹೆಸರನ್ನು ನಾಮಕರಣ ಮಾಡಲಾಯಿತು. ಅದಷ್ಟೇ ಅಲ್ಲದೇ ಅದೇ ರಸ್ತೆಯಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಸಹ ನಿರ್ಮಿಸಲಾಗಿದೆ.

ವರ್ಸೋವಾ-ಬಾಂದ್ರಾ ಸಮುದ್ರ ಸಂಪರ್ಕಿಸುವ ಸೇತುವೆಯು ಒಟ್ಟು ಸುಮಾರು 17.17 ಕಿಲೋ ಮೀಟರ್ ಉದ್ದವಿದೆ. ಇದು ಅಂಧೇರಿಯ ನೆರೆಹೊರೆಯ ವರ್ಸೊವಾವನ್ನು 5.6-ಕಿಮೀ ಉದ್ದದ ಬಾಂದ್ರಾ ವರ್ಲಿ ಸೀ ಲಿಂಕ್‌ಗೆ ಸಂಪರ್ಕ ಕಲ್ಪಿಸುತ್ತದೆ. ಸೀ ಲಿಂಕ್ ಅಂತಲೂ ಕರೆಯಲಾಗುತ್ತದೆ. ಇದು ಸುಮಾರು ಹತ್ತು ವರ್ಷಗಳ ಹಿಂದೆಯೇ ಉದ್ಘಾಟನೆಗೊಂಡಿದೆ.
ಪ್ರಮುಖ ಸಾಗರ ಸೇತುವೆ: ಸಂಪರ್ಕ ಕೊಂಡಿ
ಐಕಾನಿಕ್ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ಗೆ (MTHL) ಇದು ಕೇಬಲ್ ಗಳಿಂದ ನಿರ್ಮಾನವಾದ ಸೇತುವೆಯಾಗಿದೆ. ಇದು ಸುಮಾರು 21.8 ಕಿಮೀ ವ್ಯಾಪಿ ಹೊಂದಿದೆ. ಈ ಸೇತುವೆಯ ವೈಡಕ್ಟ್‌ಗಳ ಉದ್ದವು 16.5 ಕಿಲೋ ಮೀಟರ್ ಮತ್ತು ಅಪ್ರೋಚ್ ವಯಡಕ್ಟ್‌ಗಳ ಉದ್ದ 5.5 ಕಿಮೀ ಆಗಿದೆ. ಇವುಗಳನ್ನು ಚೀನಾದ ಸೇತುವೆಗಳಿಗೆ ಹೋಲಿಕೆ ಮಾಡಲಾಗುತ್ತದೆ.
MTHL ಸೇತುವೆಯು ಅಭಿವೃದ್ಧಿಯಾಗುತ್ತಿರುವ ಮುಂಬೈ ಮುಖ್ಯ ಭೂಭಾಗವಾದ ನವಿ ಮುಂಬೈ ಮತ್ತು ರಾಯಗಢದ ಉಪಗ್ರಹ ಟೌನ್‌ಶಿಪ್‌ಗೆ ಪೂರಕವಾಗಿದೆ. ಉದ್ದೇಶಿತ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತ್ವರಿತ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.
ಇನ್ನು MTHL ನವಿ ಮುಂಬೈ, ಉರಾನ್, ಪುಣೆ, ಕೊಂಕಣ, ಪನ್ವೆಲ್, ಅಲಿಬಾಗ್ ಮತ್ತು ಗೋವಾ ರಾಜ್ಯ ತಲುಪಲು ಇಂಧನ ಮತ್ತು ವಾಹನ ನಿರ್ವಹಣಾ ವೆಚ್ಚದಲ್ಲಿ ಕಡಿಮೆಗೊಳಿಸುವ ಉಳಿತಾಯದ ಯೋಜನೆಯಾಗಿದೆ. ಅಲ್ಲದೇ ಇಲ್ಲಿನ ಸಂಚಾರವು ಬಹುತೇಕ ವಾಹನ ದಟ್ಟಣೆ ಮುಕ್ತವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.












Click it and Unblock the Notifications