ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆಗೆ ಆಸಕ್ತಿ ತೋರಿಸದ ಕಾಂಗ್ರೆಸ್: ಕರ್ನಾಟಕ ಗೆಲುವಿನಿಂದ ಕೈ ಪಾಳಯದಲ್ಲಿ ರಣೋತ್ಸಾಹ?
ಮುಂಬೈ, ಜೂನ್ 06: 2024 ರ ಲೋಕಸಭೆ ಚುನಾವಣೆಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ತಯಾರಿ ನಡೆಸಿದೆ. ಸೀಟು ಹಂಚಿಕೆ ವಿಚಾರವಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್‌ಸಿಪಿ) ಆಸಕ್ತಿ ತೋರಿಸುತ್ತಿದೆ. ಸೀಟು ಹಂಚಿಕೆ ನಿರ್ಧಾರವನ್ನು ಇತ್ಯರ್ಥಗೊಳಿಸಬೇಕೆಂದು ಎನ್‌ಸಿಪಿಯ ಅಜಿತ್ ಪವಾರ ಒತ್ತಾಯಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಇದಕ್ಕೆ ಆಸಕ್ತಿಯನ್ನು ತೋರಸುತ್ತಿಲ್ಲ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಘಟಕವು ಎಲ್ಲಾ 48 ಲೋಕಸಭಾ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸುವ ಸಿದ್ಧತೆಗಳನ್ನು ಮಾಡಿಕೊಳ್ಳುವ ಕಸರತ್ತು ನಡೆಸಿದೆ ಎಂದೂ ವರಿಯಾಗಿದೆ. ಅದರ ಆಧಾರದ ಮೇಲೆ ಸೀಟು ಹಂಚಿಕೆಗಾಗಿ ಎಂವಿಎ ನಾಯಕರ ಮುಂದಿನ ಸಭೆಯಲ್ಲಿ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದು ಹೇಳಲಾಗುತ್ತಿದೆ.

ಯಾವ್ಯಾವ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುವುದಿಲ್ಲ, ಆದರೆ ಎಲ್ಲ 48 ಸ್ಥಾನಗಳ ಪರಿಶೀಲನೆ ಮಾತ್ರ ನಡೆಯಲಿದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕರು ಖಡಾಖಂಡಿತವಾಗಿ ಹೇಳಿದ್ದಾರೆ.
ಈ ಹಂತದಲ್ಲಿ ಸೀಟು ಹಂಚಿಕೆ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
'ಸೀಟು ಹಂಚಿಕೆ ಕುರಿತು ಚರ್ಚಿಸಲು ಎಂವಿಎ ನಾಯಕರ ಸಭೆಯು ಒಂದು ತಿಂಗಳಲ್ಲಿ ಅಸಂಭವವಾಗಿದೆ. ರಾಜ್ಯದಲ್ಲಿ ವಾಸ್ತವವನ್ನು ಅಳೆಯಲು ಸಮೀಕ್ಷೆ ನಡೆಸುತ್ತಿರುವುದರಿಂದ ಸೀಟು ಹಂಚಿಕೆಗೆ ಆತುರಪಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ರಾಜ್ಯ ಘಟಕವು ಸಾರ್ವಜನಿಕ ಸಂಪರ್ಕ ಪ್ರವಾಸವನ್ನು ಕೈಗೊಳ್ಳುತ್ತದೆ, ಅಲ್ಲಿ ಅದರ ನಾಯಕರು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ, ಅಲ್ಲಿ ಸಾರ್ವಜನಿಕ ಸಭೆಗಳು ಮತ್ತು ರ್ಯಾಲಿಗಳನ್ನು ಆಯೋಜಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಎನ್‌ಸಿಪಿಯ ಅಜಿತ್ ಪವಾರ್ ಮತ್ತು ಅವರ ಆಪ್ತ ನಾಯಕರು ಲೋಕಸಭೆಗೆ ಸೀಟು ಹಂಚಿಕೆಯನ್ನು ಮೊದಲೇ ಘೋಷಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ರಾಯಗಡದ ಪಕ್ಷದ ಸಂಸದ, ಅಜಿತ್ ಪವಾರ್ ಅವರ ಆಪ್ತ ಸಹಾಯಕ ಎಂದು ಕರೆಯಲ್ಪಡುವ ಸುನೀಲ್ ತಟ್ಕರೆ ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಟೌನ್ ಹಾಲ್‌ನಲ್ಲಿ ಸೀಟು ಹಂಚಿಕೆಯನ್ನು ಶೀಘ್ರವಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ.

ಇದು ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸಲು ಹೆಚ್ಚಿನ ಸಮಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ ಮೂಲಗಳು ಈ ವಿಚಾರವನ್ನು ತಳ್ಳಿಹಾಕಿವೆ.
'ಮೊದಲು, ಇದು ಎರಡು ಪಕ್ಷದ ವ್ಯವಹಾರವಾಗಿತ್ತು ಮತ್ತು ಈಗ ನಾವು ಮೂವರಾಗಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಹೊಂದಾಣಿಕೆಗಳನ್ನು ಮಾಡಬೇಕಾಗಿರುವುದರಿಂದ ಇದು ಸುಗಮ ಪ್ರಕ್ರಿಯೆಯಾಗುವುದಿಲ್ಲ ಮತ್ತು ಕಾರ್ಯಕರ್ತರ ನಿರ್ಧಾರವನ್ನು ಒಪ್ಪಿಕೊಳ್ಳಬೇಕು' ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಅವರ ಪ್ರಕಾರ, ಸೀಟು ಹಂಚಿಕೆಯನ್ನು ಇಷ್ಟು ಬೇಗ ಘೋಷಿಸುವುದು ಎಂದರೆ ಆಂತರಿಕ ಕಲಹವನ್ನು ಪ್ರಚೋದಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಉತ್ತೇಜಿಸಲು ಸಮಯವನ್ನು ನೀಡುವುದು ಎಂದರ್ಥವಾಗಿದೆ.












Click it and Unblock the Notifications