ಮಹಾರಾಷ್ಟ್ರ, ಹರ್ಯಾಣದಲ್ಲಿ ಅತಂತ್ರ ಫಲಿತಾಂಶ
ನವದೆಹಲಿ, ಅಕ್ಟೋಬರ್ 24: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು(ಅಕ್ಟೋಬರ್ 24) ಪ್ರಕಟಗೊಳ್ಳಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ.
ಅಕ್ಟೋಬರ್ 21 ರಂದು ಮತದಾನ ನಡೆದಿದ್ದು, ಕಳೆದ ಏಪ್ರಿಲ್ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿವೆ. ಎರಡೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದೆ.

ಬೆಳಿಗ್ಗೆ 8 ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಎರಡು ರಾಜ್ಯಗಳಲ್ಲೂ ಬಿಜೆಪಿಯೇ ಬಹುಮತ ಗಳಿಸಲಿದೆ ಎಂದಿವೆ.
ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಲೈವ್ ಅಪ್ಡೇಟ್ಸ್ ಗಳ ಮೂಲಕ ನೀಡಲಿದೆ.
ಹರ್ಯಾಣ ಫಲಿತಾಂಶ : ಬಿಜೆಪಿ 39 (1 ಲೀಡ್), ಹೆಚ್‌ಎಲ್‌ಪಿ 1, ಪಕ್ಷೇತರ 7, ಕಾಂಗ್ರೆಸ್ 31, ಐಎನ್‌ಎಲ್‌ಡಿ 1, ಜೆಜೆಪಿ 10.
90 ವಿಧಾನಸಭಾ ಕ್ಷೇತ್ರದ ಹರ್ಯಾಣದಲ್ಲಿ ಬಹುಮತ ಪಡೆಯಲು ಮ್ಯಾಜಿಕ್ ನಂಬರ್ 46. ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಅತಂತ್ರ ಫಲಿತಾಂಶ ಬಂದಿದೆ.
"ಕಳೆದ 9 ವರ್ಷಗಳಂತೆಯೇ ನಾನು ಇದ್ದೇನೆ. ಈಗಲೂ ಹಾಗೆಯೇ ನೋಡಿಕೊಳ್ಳಿ. ನನ್ನಲ್ಲಿ ಏನೂ ಬದಲಾಗಿಲ್ಲ" ಎಂದು ಆದಿತ್ಯ ಠಾಕ್ರೆ ಹೇಳಿದರು. ವರ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಆದಿತ್ಯ ಠಾಕ್ರೆ 70 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
"ನಮಗೆ ಇನ್ನಷ್ಟು ಸಮಯ ಸಿಕ್ಕಿದ್ದರೆ ಸಂಪೂರ್ಣ ಬಹುಮತ ಸಾಧಿಸುತ್ತಿದ್ದೆವು. ರಾಜ್ಯದಲ್ಲಿ ನಮಗೆ ಪೂರಕವಾದ ವಾತಾವರಣ ನಿರ್ಮಾಣವಾಗಿತ್ತು. ಜನರು ಕಾಂಗ್ರೆಸ್ ಜೊತೆ ಸೇರಿ ಸ್ಥಿರ ಸರ್ಕಾರ ರಚನೆಯಾಗುವುದನ್ನು ಬಯಸಿದ್ದಾರೆ" ಎಂದು ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಭೂಪಿಂದರ್ ಸಿಂಗ್ ಹೂಡಾ ಹೇಳಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ
Union Home Minister & BJP President Amit Shah: In Maharashtra, BJP-Shiv Sena is going to form the govt once again with majority. In Haryana have seen a 3% increase in our vote share since the last time and we have emerged as the largest party there, I thank the people for this. pic.twitter.com/2LFLXtwEiW
— ANI (@ANI) October 24, 2019
ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, "ಮುಂದಿನ 5 ವರ್ಷಗಳಲ್ಲಿ ಎರಡು ರಾಜ್ಯಗಳು ಹೊಸ ಮಾದರಿಯ ಅಭಿವೃದ್ಧಿ ಪರ್ವಕ್ಕೆ ಸಾಕ್ಷಿಯಾಗಲಿವೆ" ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭೆ : ಬಿಜೆಪಿ 84 (21 ಲೀಡ್), ಕಾಂಗ್ರೆಸ್ 35 (9 ಲೀಡ್), ಶಿವಸೇನೆ 53 (3), ಎನ್‌ಸಿಪಿ 46 (ಲೀಡ್ 8).
ಹರ್ಯಾಣದಲ್ಲಿ ಬಿಜೆಪಿ 36 (4 ಮುನ್ನಡೆ), ಕಾಂಗ್ರೆಸ್ 31, ಜೆಪಿಪಿ 10, ಐಎನ್‌ಎಲ್‌ಡಿ 1, ಪಕ್ಷೇತರ 7, ಹೆಚ್‌ಎಲ್‌ಪಿ 1
ಶಿವಸೇನೆ ಸುದ್ದಿಗೋಷ್ಠಿ
ಸಂಜೆ 5 ಗಂಟೆಗೆ ಶಿವಸೇನೆಯಿಂದ ಸುದ್ದಿಗೋಷ್ಠಿ, ಸಂಪೂರ್ಣ ಫಲಿತಾಂಶಕ್ಕೂ ಮುನ್ನವೇ ಸುದ್ದಿಗೋಷ್ಠಿ ನಡೆಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಜನರು ನನಗೆ ಬೆಂಬಲ ನೀಡಿದ್ದಾರೆ ಎಂದು ಭಾವಿಸಿದ್ದೇನೆ, ಜನರ ಬೆಂಬಲಕ್ಕೆ ನಾನು ಋಣಿಯಾಗಿರುತ್ತೇನೆ , ಬಿಜೆಪಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನರ ನನಗೆ ಮತ ಹಾಕಿದ್ದಾರೆ- ಬಬಿತಾ ಫೋಗಟ್ , ದಾದ್ರಿ-ಬಿಜೆಪಿ ಅಭ್ಯರ್ಥಿ
ನಾನು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಲ್ಲಾ ಸುಳ್ಳುಸುದ್ದಿ ಎಂದು ಹರ್ಯಾಣಾ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ತಿಳಿಸಿದ್ದಾರೆ.
ಹರ್ಯಾಣ: ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕರ್ನಾಲ್ ವಿಧಾನಸಭಾ ಕ್ಷೇತ್ರದಲ್ಲಿ 41,950 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಹರ್ಯಾಣ ವಿಧಾನಸಭೆ ಚುನಾವಣೆ: ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿಯು 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ಮುಂದಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಬಿಜೆಪಿ 5 ಕ್ಷೇತ್ರಗಳಲ್ಲಿ ಜಯ, 97 ಕ್ಷೇತ್ರಗಳಲ್ಲಿ ಮುಂದೆ, ಶಿವಸೇನಾ 5 ಕ್ಷೇತ್ರಗಳಲ್ಲಿ ಜಯ, 55 ಕ್ಷೇತ್ರಗಳಲ್ಲಿ ಮುನ್ನಡೆ, ಎನ್‌ಸಿಪಿ 1 ಕ್ಷೇತ್ರದಲ್ಲಿ ಜಯ ಸಾಧಿಸಿದ್ದು 54 ಕ್ಷೇತ್ರಗಳಲ್ಲಿ ಧಾಪುಗಾಲಿಟ್ಟಿದೆ. ಐಎನ್‌ಸಿಯು 44 ಕ್ಷೇತ್ರಗಳನ್ನು ಮುನ್ನಡೆ ಕಾಯ್ದುಕೊಂಡಿದೆ.
''ಬಿಜೆಪಿಯು ಕಾಂಗ್ರೆಸ್‌ಗೆ ಸೇರಲು ಬಯಸಿದ್ದ ಸಾಕಷ್ಟು ಸ್ವತಂತ್ರ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿದೆ. ನಾನು ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಸ್ವತಂತ್ರ ಅಭ್ಯರ್ಥಿಗಳು ಯಾರದ್ದೇ ಭಯ ಇಲ್ಲದೆ ತಮಗೆ ಬೇಕಾದ ಪಕ್ಷವನ್ನು ಸೇರಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು''-ಡಿ.ಎಸ್. ಹೂಡಾ
ಹರ್ಯಾಣ
ಹರ್ಯಾಣ: ಕಾಂಗ್ರೆಸ್ ವಕ್ತಾರ್ ರಣದೀಪ್ ಸುರ್ಜೇವಾಲಾಗೆ ಅಚ್ಚರಿಯ ಸೋಲು, ಕೆಲವೇ ಮತಗಳ ಅಂತರಿದಿಂದ ಸೋಲು
"ನಾನು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಹೊರಟಿದ್ದೇನೆ. ನಾವು ಬಿಜೆಪಿ ಜೊತೆ ಮೈತ್ರಿ ಮುಂದುವರಿಸುತ್ತೇವೆ" - ಸಂಜಯ್ ರಾವತ್, ಶಿವಸೇನೆ ನಾಯಕ
ಉತ್ತರ ಪ್ರದೇಶದ 11 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 6 ರಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್ 1, ಎಸ್ಪಿ 2 ಬಿಎಸ್ಪಿ, ಅಪ್ನಾದಳ್ ತಲಾ 1 ಸ್ಥಾನದಲ್ಲಿ ಮುನ್ನಡೆ
ಹರ್ಯಾಣ
ಬಿಜೆಪಿಯ ಅಭ್ಯರ್ಥಿಗಳಾದ, ಕ್ರೀಡಾಪಟು ಯೋಗೇಶ್ವರ್ ದತ್, ಸಂದೀಪ್ ಸಿಂಗ್, ಬಬಿತಾ ಫೋಗಟ್ ಮೂವರೂ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.
Top Fight - ಕೊಲಾಬಾ
ರಾಹುಲ್ ನಾರ್ವೇಕರ್
(BJP)
Leading
ಅಶೋಕ್ ಜಗ್ತಾಪ್
(CONG)
Trailing
Top Fight - ಔರಂಗಬಾದ್ ಈಸ್ಟ್
ಡಾ. ಅಬ್ದುಲ್ ಗಫಾರ್ ಖ್ಹಾದ್ರಿ ಸೈಯದ್
(AIMIM)
Leading
ಅತುಲ್ ಮೋಲೇಶ್ವರ್ ಸಾವೆ
(BJP)
Trailing
Top Fight - ಔರಂಗಬಾದ್ ವೆಸ್ಟ್
ಸಂಜಯ್ ಪಾಂಡುರಂಗ ಶಿರ್ಸತ್
(SHS)
Leading
ಅರುಣ್ ವಿಟ್ಲರಾವ್ ಬೋರ್ಡೆ
(AIMIM)
Trailing












Click it and Unblock the Notifications