• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲ್ಯಾಕ್‌ ಫಂಗಸ್ ಸೋಂಕಿಗೆ ಮಹಾರಾಷ್ಟ್ರದಲ್ಲಿ ಲಸಿಕೆ ಉತ್ಪಾದನೆ ಆರಂಭ

|

ನವದೆಹಲಿ, ಮೇ 27: ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಏರಿಕೆ ನಡುವೆಯೇ ಸೋಂಕಿಗೆ ನೀಡಲಾಗುವ ಆಂಫೊಟೆರಿಸಿನ್ ಬಿ ಲಸಿಕೆಗೆ ತೀವ್ರ ಅಭಾವವೂ ಸೃಷ್ಟಿಯಾಗಿದ್ದು, ಇದೀಗ ಮಹಾರಾಷ್ಟ್ರ ಮೂಲದ ಸಂಸ್ಥೆಯೊಂದು ಗುರುವಾರದಿಂದ ಈ ಲಸಿಕೆಯ ಉತ್ಪಾದನೆ ಆರಂಭಿಸಿದೆ.

ಮಹಾರಾಷ್ಟ್ರದ ವಾರ್ದಾದಲ್ಲಿನ ಜೆನೆಟಿಕ್ ಲೈಫ್ ಸೈನ್ಸಸ್ ಸಂಸ್ಥೆ ಮ್ಯೂಕರ್ ಮೈಕೋಸಿಸ್‌ಗೆ ಲಸಿಕೆ ಉತ್ಪಾದನೆ ಆರಂಭಿಸಿದ್ದು, ಒಂದು ಲಸಿಕೆಗೆ 1200 ರೂ ಬೆಲೆ ಇರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಮಾಹಿತಿ ನೀಡಿದ್ದಾರೆ.

ಸೋಮವಾರದಿಂದ ಲಸಿಕೆಗಳ ಹಂಚಿಕೆ ಆರಂಭಗೊಳ್ಳಲಿದೆ. ಇದರ ಬೆಲೆ 1200 ರೂ ಇರಲಿದೆ. ಸದ್ಯಕ್ಕೆ ಆಂಫೊಟೆರಿಸಿನ್ ಲಸಿಕೆಗಳು 7000 ರೂಪಾಯಿಗೆ ಮಾರಾಟವಾಗುತ್ತಿವೆ ಎಂದು ನಿತಿನ್ ಗಡ್ಕರಿ ಕಚೇರಿ ಮಾಹಿತಿ ಹಂಚಿಕೊಂಡಿದೆ.

"ಕೊರೊನಾ ಲಸಿಕೆ ಅಭಾವಕ್ಕೆ ರಾಜ್ಯ ಸರ್ಕಾರಗಳೇ ಹೊಣೆ"

ಹನ್ನೊಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮ್ಯೂಕರ್‌ಮೈಕೋಸಿಸ್ ಅನ್ನು ಸಾಂಕ್ರಾಮಿಕ ಸೋಂಕು ಎಂದು ಘೋಷಿಸಿವೆ. ಈ ನಡುವೆ ದೇಶದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿನ ಲಸಿಕೆಗಳ ಕೊರತೆ ಉಂಟಾಗಿದೆ. ದೆಹಲಿ, ಬಿಹಾರ, ಹರಿಯಾಣ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ಸೋಂಕು ಎಂದು ಘೋಷಿಸಿವೆ.

ಇದುವರೆಗೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 29,250 ವಯಲ್‌ ಲಸಿಕೆಗಳನ್ನು ಹಂಚಿಕೆ ಮಾಡಲಾಗಿದೆ. ರೋಗಿಗಳ ಆಧಾರದಲ್ಲಿ ಔಷಧಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಬುಧವಾರ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾಹಿತಿ ನೀಡಿದ್ದರು.

English summary
Maharashtra based Genetic Life Sciences has begun manufacturing Amphotericin B Emulsion injections, which are used for treating Mucormycosis or Black Fungus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X