Maharashtra Election Results: ವಿಜೇತರ ಹೆಸರು, ಕ್ಷೇತ್ರಗಳ ಪಟ್ಟಿ ವಿವರ
ಮುಂಬೈ, ನವೆಂಬರ್ 23: ಮಹಾರಾಷ್ಟ್ರದಲ್ಲಿ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ 2024 ನವೆಂಬರ್ 20 ನಡೆದ ಮೂರು ದಿನದ ಬಳಿಕ ಅಂದರೆ ಶನಿವಾರ ನವೆಂಬರ್ 23ರಂದು ಫಲಿತಾಂಶ ಪ್ರಕಟಗೊಂಡಿದೆ. ಎನ್‌ಡಿಎ ನೇತೃತ್ವದ ಮೈತ್ರಿಕೂಟ ಮಹಾಯುತಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಎಲ್ಲಾ 288 ವಿಧಾನಸಭಾ ಸ್ಥಾನಗಳಲ್ಲಿ ಗೆಲುವಿಗೆ ಬೇಕಾದ ಮ್ಯಾಜಿಕ್ ನಂಬರ್ ಅನ್ನು ಬಿಜೆಪಿ ಮೈತ್ರಿ ಪಕ್ಷಗಳು ದಾಟಿವೆ.
ಇಂದು ಶನಿವಾರ ಮತ ಎಣಿಕೆ ನಡೆಯುತ್ತಿದ್ದು, ಸಂಜೆ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ 2024 ಕುರಿತು ರಾಜ್ಯ ಚುನಾವಣೆ ಆಯೋಗ ಅಧಿಕೃತ ಮಾಹಿತಿ ನೀಡಲಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಮತ್ತು ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ಚುನಾವಣಾ ಕದನ ತಾರ್ಕಿಕ ಅಂತ್ಯ ಕಂಡಿದ್ದು, ಜನರಿಗಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ಎನ್‌ಡಿಎ ನೇತೃತ್ವದಲ್ಲಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಒಪ್ಪಂದ ನಡೆಯಿತು. ಮಹಾಯುತಿ ಮೈತ್ರಿಕೂಟದಿಂದ ಸ್ಪರ್ಧಿಸಿದ ಪಕ್ಷಗಳಲ್ಲಿ ಬಿಜೆಪಿಗೆ ಅಗ್ರಸ್ಥಾನ ಸಿಕ್ಕಿದೆ. ಅಂದರೆ 148 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದರು. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು 80 ಸ್ಥಾಣಗಳಲ್ಲಿ ಸ್ಪರ್ಧೆಗೆ ಇಳಿಯಿತು. ಅಜಿತ್ ಪವಾರ್ ಅವರ ಎನ್‌ಸಿಪಿ ಯು 53 ಸ್ಥಾನಗಳಲ್ಲಿ ಸ್ಪರ್ಧಿಸಿ ಗೆದ್ದಿದೆ.
ಕಾಂಗ್ರೇಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 103ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷ ಬರೋಬ್ಬರಿ 89 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು. ಇನ್ನೂ ಶರದ್ ಪವಾರ್ ನೇತೃತ್ವದ NCP (SP) 87 ಸ್ಥಾನಗಳಲ್ಲಿ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ನೀಡಿತು.
ಮಹಾರಾಷ್ಟ್ರ ವಿಜೇತ ಹೆಸರು, ಅವರ ಕ್ಷೇತ್ರಗಳ ಪಟ್ಟಿ
* ವಡಾಲಾ : ಕಾಳಿದಾಸ್ ನಿಕ್ಲಾಂತ್ ಕೊಲಂಬ್ಕರ್ (ಬಿಜೆಪಿ)
* ಸತಾರಾ : ಶಿವೇಂದ್ರರಾಜೆ ಅಭಯಸಿಂಹರಾಜೆ ಭೋಂಸ್ಲೆ (ಬಿಜೆಪಿ)
* ನಿಫಾದ್ : ಬಣಕಾರ್ ದಿಲೀಪ್ರರಾವ್ ಶಂಕರರಾವ್ (ಎನ್‌ಸಿಪಿ)
* ಶ್ರೀವರ್ಧನ್ : ಅದಿತಿ ಸುನಿಲ್ ತಟ್ಕರೆ (ಎನ್‌ಸಿಪಿ)
* ಅನುಶಕ್ತಿ ನಗರ: ಫಹಾದ್ ಅಹ್ಮದ್ (ಎನ್‌ಸಿಪಿ)
*ಘಾಟ್ಕೋಪರ್ ಪೂರ್ವ: ಪರಾಗ್ ಶಾ (ಬಿಜೆಪಿ)
* ಮಾಧಾ ಕ್ಷೇತ್ರ: ಅಭಿಜಿತ್ ಧನಂಜಯ್ ಪಾಟೀಲ್ (ಎನ್‌ಸಿಪಿ-ಎಸ್‌ಪಿ)
* ಪಾಲ್ಘರ್ : ಗವಿತ್ ರಾಜೇಂದ್ರ ಧೇದ್ಯ (ಶಿವಸೇನೆ)
* ಭಿವಂಡಿ ಗ್ರಾಮಾಂತರ : ಸಂತರಾಮ್ ತುಕಾರಾಂ ಮೋರ್ (ಶಿವಸೇನೆ)
ಈ ಬಾರಿ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಅಂದಾಜು ಶೇಕಡಾ 65ರಷ್ಟು ಮತದಾನ ಆಗಿದೆ. ಚುನಾವಣೆ ಪೂರ್ವದಲ್ಲಿ ಎದ್ದ ಬಂಡಾಯದಿಂದಾಗಿ ಪಕ್ಷಗಳು ವಿಶೇಷವಾಗಿ ಶಿವಸೇನಾ ವಿಭಜನೆಗೊಂಡವು. ಬಣಗಳಾಗಿ ಪರಿವರ್ತನೆಯಾಗಿ ಬೇರೆ ಬೇರೆ ಪಕ್ಷಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದವು. ಅದರಂತೆ ಏಕ್‌ನಾಥ್ ಶಿಂಧೆ ಬಣ ಬಿಜೆಪಿಗೆ, ಉದ್ಧವ್ ಠಾಕ್ರೆ ಬಣ ಕಾಂಗ್ರೆಸ್‌ಗೆ ಬೆಂಬಲ ನೀಡಿ ಚುನಾವಣೆ ಎದುರಿಸಿದವರು.
ಇಂದು ಸಂಜೆ 6.30ಕ್ಕೆ ಪಕ್ಷದ ಕೇಂದ್ರ ಕಚೇರಿಗೆ ಪ್ರಮಾನಿ ಮೋದಿಯವರು ಆಗಮಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸದ್ಯ ಮುಂದಿನ ವಾರ ಹೊಸ ಸರ್ಕಾರ ರಚನೆ ಆಗಲಿದೆ. ಸದ್ಯ ಇನ್ನೂ ಎರಡು ದಿನಗಳಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆದು, ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.












Click it and Unblock the Notifications