Maharashtra Election 2024: 'ಮಹಾ ವಿಕಾಸ್ ಆಘಾಡಿ' ವಿರುದ್ಧ ಮಾತಿನುದ್ದಕ್ಕೂ ಪ್ರಧಾನಿ ಮೋದಿ ಚಾಟಿ
ಮಹಾರಾಷ್ಟ್ರ, ನವೆಂಬರ್ 12: ಕಾಂಗ್ರೆಸ್ ರಾಜಮನೆತನದವರು ದೇಶವನ್ನು ಆಳಲೆಂದೆ ಹುಟ್ಟಿದವರು ಎಂಬ ಭಾವನೆ ಆ ನಾಯಕರಲ್ಲಿದೆ. ಅವರು ಅಧಿಕಾರ ಪಡೆದಾಗಿನಿಂದ ದೀನ ದಲಿತರನ್ನು, ಬುಡಕಟ್ಟು ಸಮುದಾಯ ಹಿಂದುಳಿದವರನ್ನು ಪ್ರಗತಿಗೆ ಅವಕಾಶ ನೀಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಉಪ ಚುನಾವಣೆಗೆ ನಾಳೆ ನವೆಂಬರ್ 13 ರಂದು ನಡೆಯಲಿದೆ. ಒಂದು ದಿನಾ ಮುನ್ನ ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿಗಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಪ್ರಧಾನಿ ಅವರು ಈ ಹಿಂದೆ ಹರಿಯಾಣದಲ್ಲಿ ಕರ್ನಾಟಕ ಸಿಎಂ ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಿದ್ದರು. ಇದೀಗ ಕಾಂಗ್ರೆಸ್ ನಾಯಕರು ಕೆಳ ಸಮುದಾಯಗಳಿಗೆ ಅವಕಾಶ ನೀಡಿಲ್ಲ. ಬುಡಕಟ್ಟ ಸಮುದಾಯ ಜಾತಿಗಳನ್ನು ವಿಭಜಿಸುವ, ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಚಿಮೂರ್ ಸಾರ್ವಜನಿಕ ಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು.

ಕಳೆದ 2.5 ವರ್ಷಗಳಲ್ಲಿ ರಾಜ್ಯವು ಅಭಿವೃದ್ಧಿಯ ದ್ವಿಗುಣ ವೇಗವನ್ನು ಕಂಡಿದೆ. ಅತಿ ಹೆಚ್ಚು ವಿದೇಶಿ ಹೂಡಿಕೆಯು ರಾಜ್ಯಕ್ಕೆ ಹರಿದು ಬಂದಿದೆ. ಹೀಗಾಗಿ ಮಹಾರಾಷ್ಟ್ರ ನಮ್ಮ ಹೊಂದಾಣಿಕೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. ಅಲ್ಲದೇ ಹೊಸ ವಿಮಾನ ನಿಲ್ದಾಣಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು (ಎಕ್ಸ್‌ಪ್ರೆಸ್‌ವೇ) ನಿರ್ಮಾಣಗೊಂಡಿವೆ.
ಈ ಭಾಗದಲ್ಲಿ ಒಂದು ಡಜನ್ ವಂದೇ ಭಾರತ್ ರೈಲುಗಳು ಕಾರ್ಯಾಚರಣೆಗೆ ಅವಕಾಶ ನೀಡಿದ್ದೇವೆ. ರಾಜ್ಯ ಸೇರಿ ದೇಶದಲ್ಲಿ 100 ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಮೇಲ್ದರ್ಜೆಗೆ ಏರುತ್ತಿವೆ. ಇಲ್ಲಿನ ಚಂದ್ರಾಪುರದ ಜನರು ರೈಲು ಸಂಪರ್ಕಕ್ಕಾಗಿ ವರ್ಷಗಳ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ. ಇಷ್ಟು ವರ್ಷ ಆಡಳಿತ ನೀಡಿದ್ದ ಕಾಂಗ್ರೆಸ್ ಮತ್ತು ಅಘಾಡಿ ಅಭಿವೃದ್ಧಿ ಪರ ಇರಲಿಲ್ಲ ಎಂದು ಮಾತಿನುದ್ದಕ್ಕೂ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ಕ್ಷಿಪ್ರ ಅಭಿವೃದ್ಧಿಯು ಅಘಾಡಿ ಮೈತ್ರಿಗೆ ನಿಲುಕದಂತಾಗಿದೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸಮೇತ ಅವರೆಲ್ಲರು ಮುಳುಗಿದ್ದಾರೆ. ಅವರಿಗೆ ಅಭಿವೃದ್ಧಿ ಬೇಡ. ಮಹಾರಾಷ್ಟ್ರ ಅಭಿವೃದ್ಧಿಗೆ ಇಲ್ಲಿ ಎಲ್ಲ ಸಮುದಾಯದವರು ಹಾಗೂ ರೈತರ ಏಳಿಗೆ ಆಗಬೇಕು ಎಂದು ಅವರು ಪ್ರತಿಪಾದಿಸಿದರು.

ನವೆಂಬರ್ 20ಕ್ಕೆ ಒಂದೇ ಹಂತದಲ್ಲಿ ಮತದಾನ
ಮಹಾರಾಷ್ಟ್ರದಲ್ಲಿ ಇದೇ ನವೆಂಬರ್ 20ರಂದು ಒಟ್ಟು 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದ್ದು, ಅಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ರಚನೆ ಆಗಿದೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಕೈ ಜೋಡಿಸಿದೆ. ಅದರಲ್ಲಿ ಶರದ್ ಪವಾರ್ ಬಣ, ಹಾಗೂ ಉದ್ಧವ್ ಠಾಕ್ರೆ ಬಣ ಇದೆ. ಇವರಿಗೆ ಎದುರಾಗಿ ಬಿಜೆಪಿ ನೇತೃತ್ವದಲ್ಲಿ ಮಹಾಯುತಿ ಮೈತ್ರಿಕೂಟ ರಚನೆ ಆಗಿದ್ದು, ಇದರಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮತ್ತು ಶಿವಸೇನಾ ನಾಯಕರು ಕೈ ಜೋಡಿಸಿದ್ದಾರೆ. ಅದರಲ್ಲಿ ಅಜಿತ್ ಪವಾರ್ ಬಣ, ಏಕ್‌ನಾತ್ ಶಿಂಧೆ ಬಣ ಇದೆ.












Click it and Unblock the Notifications