Maharashtra Assembly Election 2024: ಮಾಜಿ ಗೃಹ ಸಚಿವರ ಮೇಲೆ ದಾಳಿ

ಮುಂಬೈ, ನವೆಂಬರ್ 19: ಬುಧವಾರ ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಸೋಮವಾರ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ. ಪ್ರಚಾರ ಮುಗಿಸಿ ಬರುತ್ತಿದ್ದ ರಾಜ್ಯದ ಮಾಜಿ ಗೃಹ ಸಚಿವರ ಮೇಲೆ ದಾಳಿ ನಡೆದಿದೆ. ಪೊಲೀಸರು ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್ 23ರ ಶನಿವಾರ ಘೋಷಣೆಯಾಗಲಿದೆ.

ಸೋಮವಾರ ಸಂಜೆ ನಾಗ್ಪುರದಲ್ಲಿ ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಈ ದಾಳಿಯಲ್ಲಿ ಅವರು ಗಾಯಗೊಂಡಿದ್ದಾರೆ. ಪೊಲೀಸರು ಈ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಅಪರಿಚಿತ ವ್ಯಕ್ತಿಗಳ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Maharashtra Election 2024 Anil Deshmukh Injured After Stones Thrown At His Car

ಅನಿಲ್ ದೇಶಮುಖ್ ಸೋಮವಾರ ಸಂಜೆ ಚುನಾವಣಾ ಪ್ರಚಾರ ಮುಗಿಸಿ ವಾಪಸ್ ಆಗುವಾಗ ಸಂಜೆ 8 ಗಂಟೆಯ ಸುಮಾರಿಗೆ ಅವರ ಕಾರಿನ ಮೇಲೆ ದಾಳಿಯನ್ನು ನಡೆಸಲಾಗಿದೆ. ಕಲ್ಲು ತೂರಾಟದಿಂದ ಅವರ ತಲೆಗೆ ಏಟು ಬಿದ್ದಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉನ್ನತ ಮಟ್ಟದ ತನಿಖೆಗೆ ಒತ್ತಾಯ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದ ಕೊನೆಯ ದಿನ ಈ ಘಟನೆ ನಡೆದಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಎನ್‌ಸಿಪಿ ಪಕ್ಷ ಒತ್ತಾಯಿಸಿದೆ. ಅನಿಲ್ ದೇಶಮುಖ್ ಅವರು ನಾರ್ಖೆಡ್‌ ಗ್ರಾಮದಲ್ಲಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಟೋಲ್‌ಗೆ ವಾಪಸ್ ಆಗುತ್ತಿದ್ದರು. ಬೆಲ್‌ಪತ್ರ್‌ ಬಳಿ ದುಷ್ಕರ್ಮಿಗಳು ಅವರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.

ಅನಿಲ್ ದೇಶಮುಖ್ ಕಾರಿನ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರ ಗ್ರಾಮಾಂತರ ಎಸ್‌ಪಿ ಹರ್ಷ್‌ ಪೊದ್ದಾರ್‌ ಪ್ರತಿಕ್ರಿಯೆ ನೀಡಿದ್ದಾರೆ, "ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ, ಸಾಕ್ಷ್ಯಗಳನ್ನು ಸಂಗ್ರಹ ಮಾಡಿದೆ. ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.

ಬೆಂಬಲಿಗರ ಜೊತೆ ಅನಿಲ್ ದೇಶಮುಖ್ ವಾಪಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮತ್ತು ಅವರ ಬೆಂಬಲಿಗರ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಕಾರಿನ ಮುಂಭಾಗದಲ್ಲಿ ಅವರು ಕುಳಿತಿದ್ದರು, ಕಿಟಕಿ ತೆರೆದಿದ್ದ ಕಾರಣ ಕಲ್ಲು ನೇರವಾಗಿ ಅವರ ತಲೆಗೆ ಬಿದ್ದಿದೆ.

ಅನಿಲ್ ದೇಶಮುಖ್ ಮೇಲೆ ನಡೆದ ದಾಳಿಯ ಫೋಟೋ, ವಿಡಿಯೋಗಳು ವೈರಲ್ ಆಗಿದೆ. ಎನ್‌ಸಿಪಿ ಪಕ್ಷದ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ರಾಜ್ಯ ಎತ್ತ ಸಾಗುತ್ತಿದೆ, ಪ್ರಜಾಪ್ರಭುತ್ವ ನಾಶವಾಗುತ್ತಿದೆ ಎಂದು ಆರೋಪಿಸಲಾಗಿದೆ.

ಕಟೋಲ್ ಕ್ಷೇತ್ರದಲ್ಲಿ ಅನಿಲ್ ದೇಶಮುಖ್ ಪುತ್ರ ಸಲೀಲ್ ದೇಶಮುಖ್‌ ಎನ್‌ಸಿಪಿ (ಶರದ್ ಪವಾರ್) ಬಣದ ಅಭ್ಯರ್ಥಿ. ಅವರ ಪರವಾಗಿ ಚುನಾವಣಾ ಪ್ರಚಾರವನ್ನು ಮುಗಿಸಿ ವಾಪಸ್ ಆಗುವಾಗ ಈ ದಾಳಿ ನಡೆದಿದೆ. 2019ರಲ್ಲಿ ಅನಿಲ್ ದೇಶಮುಖ್‌ ಈ ಕ್ಷೇತ್ರದಲ್ಲಿ ಗೆದ್ದಿದ್ದರು.

ಬುಧವಾರ ಬೆಳಗ್ಗೆ 7 ಗಂಟೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಆರಂಭವಾಗಲಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ನಡುವೆ ನೇರ ಪೈಪೋಟಿ ಇದೆ. ಪಕ್ಷೇತರರು, ಇತರ ಪಕ್ಷದ ಅಭ್ಯರ್ಥಿಗಳು ಸೇರಿ 4,410 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+