Ajit Pawar Profile: ನೆರಳು ಕೊಟ್ಟ ಚಿಕ್ಕಪ್ಪ ಶರದ್ ಪವಾರ್‌ಗೆ ತಿರುಮಂತ್ರ ಹಾಕಿದ್ದ ಅಜಿತ್ ಪವಾರ್, ಹೀಗಿತ್ತು ಬದುಕಿನ ಹಾದಿ
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ಇಂದು ಭೀಕರ ಅಪಘಾತಕ್ಕೆ ತುತ್ತಾಗಿದೆ. ಈ ದುರಂತದಲ್ಲಿ 66 ವರ್ಷದ ಅಜಿತ್ ಪವಾರ್ ಅವರು ಮೃತಪಟ್ಟಿದ್ದಾರೆ. ಈ ಸುದ್ದಿ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದು, ವಿಮಾನ ದುರಂತದ ಬಗ್ಗೆ ಚರ್ಚೆಯು ಶುರು ಆಗಿದೆ. 21ನೇ ವಯಸ್ಸಿನಿಂದಲೇ ಮಹಾರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅಜಿತ್ ಪವಾರ್ ಅವರು ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಹಾಗಾದರೆ ಹೇಗಿತ್ತು ಅಜಿತ್ ಪವಾರ್‌ರ ಜೀವನ? ಅವರು ಓದಿದ್ದು ಏನು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಭೀಕರ ವಿಮಾನ ಅಫಘಾತದಲ್ಲಿ ಮೃತಪಟ್ಟಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪೂರ್ಣ ಹೆಸರು ಅಜಿತ್ ಅನಂತರಾವ್ ಪವಾರ್ ಎಂದು. 1959 ಜುಲೈ 22 ರಂದು ಅವರು ಮಹಾರಾಷ್ಟ್ರದ ಡಿಯೋಲಾಲಿ ಪ್ರವರ ಪ್ರದೇಶದಲ್ಲಿ ಜನಿಸಿದರು. ಇನ್ನು ಪುಣೆ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದ ಅಜಿತ್ ಪವಾರ್, ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಹೆಸರನ್ನು ಸಂಪಾದಿಸಿದ್ದರು. 1980ರ ದಶಕದಿಂದಲು ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅಜಿತ್ ಅನಂತರಾವ್ ಪವಾರ್, ಸುಮಾರು 45 ವರ್ಷಗಳಿಂದ ರಾಜಕೀಯ ಅನುಭವ ಪಡೆದಿದ್ದರು. ಆದರೆ ಇಂದು ದಿಢೀರ್ ಅವರ ವಿಮಾನ ಅಪಘಾತವಾಗಿದ್ದು, ದುರಂತದಲ್ಲಿ ಅವರು ಕೂಡ ಮೃಪಟ್ಟಿದ್ದಾರೆ. ಅಜಿತ್ ಪವಾರ್ ಅವರ ರಾಜಕೀಯ ಏಳುಬೀಳು ತಿಳಿಯೋಣ ಬನ್ನಿ.

ಚಿಕ್ಕಪ್ಪ ಶರದ್ ಪವಾರ್‌ಗೆ ಆಘಾತ ನೀಡಿದ್ದರು
ಮಹಾರಾಷ್ಟ್ರ ರಾಜಕೀಯ ಅಖಾಡದಲ್ಲಿ ಅಜಿತ್ ಪವಾರ್ ದೊಡ್ಡ ಹೆಸರು ಮಾಡಿದ್ದರು. ಇದಕ್ಕೆಲ್ಲಾ ಕಾರಣ ಅವರ ವರ್ಚಸ್ಸು, ತಮ್ಮ 21ನೇ ವಯಸ್ಸಿನಿಂದಲೇ ರಾಜಕೀಯ ಲೋಕ ಕಂಡ ಅಜಿತ್ ಪವಾರ್ ಅವರಿಗೆ ಎಲ್ಲವೂ ಅರಿವಿತ್ತು. ಹೀಗಾಗಿಯೇ ಎನ್‌ಸಿಪಿ ಮುಖ್ಯಸ್ಥ ಮತ್ತು ಅನುಭವಿ ರಾಜಕಾರಣಿಯೂ ಆಗಿರುವ ಶರದ್ ಪವಾರ್ ಅವರನ್ನೇ ಎದುರು ಹಾಕಿಕೊಂಡರು. ಮತ್ತೊಂದು ವಿಶೇಷ ಏನೆಂದರೆ ಶರದ್ ಪವಾರ್ ಅವರು ಅಜಿತ್ ಪವಾರ್‌ಗೆ ಚಿಕ್ಕಪ್ಪ ಆಗಬೇಕಿತ್ತು. ಹೀಗಿದ್ದರೂ ತಮ್ಮ ಚಿಕ್ಕಪ್ಪನ ಮಾತನ್ನು ಮೀರಿ, ಎನ್‌ಸಿಪಿ ಪಕ್ಷವನ್ನೇ ಇಬ್ಭಾಗ ಮಾಡಿ ಬಿಜೆಪಿ ಜೊತೆಗೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಅಜಿತ್ ಪವಾರ್. ಆ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದರು ಡಿಸಿಎಂ ಅಜಿತ್ ಪವಾರ್ ಅವರು.
ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತ ಅಜಿತ್ ಪವಾರ್ ಸೇರಿ ವಿಮಾನದಲ್ಲಿ ಇದ್ದ 5 ಪ್ರಯಾಣಿಕರು ಮೃತಪಟ್ಟಿದ್ದಾರೆ...
— oneindiakannada (@OneindiaKannada) January 28, 2026
#BreakingNews #AjitPawar #AjitPawarPlaneCrash #BaramatiIncident #MaharashtraNews #NewsUpdate #OIKannada #Oneindia pic.twitter.com/Sq4TCNi8pY












Click it and Unblock the Notifications