ಕರ್ನಾಟಕದ ಅಜಿತ್ ಪವಾರ್ ಯಾರಾಗುತ್ತಾರೆ?: ಎಚ್‌ಡಿ ಕುಮಾರಸ್ವಾಮಿ ನುಡಿದ ಭವಿಷ್ಯವೇನು?
ಬೆಂಗಳೂರು, ಜುಲೈ. 03: ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟು ಕರ್ನಾಟಕ ರಾಜಕೀಯದಲ್ಲಿ ಸ್ವಲ್ಪ ಕಳವಳವನ್ನು ಉಂಟುಮಾಡಿದೆ. ಇತ್ತಿಚೆಗಷ್ಟೇ ಚುನಾವಣೆ ನಡೆದಿರುವ ರಾಜ್ಯದಲ್ಲಿಯೂ ಇದೇ ರೀತಿಯ 'ಆಘಾತಕಾರಿ ಬೆಳವಣಿಗೆ' ನಡೆಯಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಭಾನುವಾರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಬೇರಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಘೊಷಿಸಿ ಉಪಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಜಿತ್ ಪವಾರ್ ಅವರ ಈ ನಡೆಯಿಂದಾಗಿ ಚಿಕ್ಕಪ್ಪ ಶರದ್ ಪವಾರ್ ಅವರ ಎನ್‌ಸಿಪಿ ಮೇಲಿನ ಹಿಡಿತವನ್ನು ದುರ್ಬಲಗೊಳಿಸಿದೆ. ಇದೇ ಕಾರಣದಿಂದ 'ಕರ್ನಾಟಕದ ಅಜಿತ್ ಪವಾರ್ ಯಾರಾಗುತ್ತಾರೆ ಎಂದು ನಾವು ಕಾಯುತ್ತಿದ್ದೇವೆ' ಎಂದು ಮುಂದಾಗಬಹುದಾದ ಬೆಳವಣಿಗೆಗಳ ಬಗ್ಗೆ ಸುಳಿವು ನೀಡಿದ್ದಾರೆ.

"ಅಜಿತ್ ಪವಾರ್ ಅವರು ಬಿಜೆಪಿಗೆ ಬೆಂಬಲ ನೀಡುವ ನಿರ್ಧಾರದ ನಂತರ ಕರ್ನಾಟಕದಲ್ಲಿ ಏನಾಗಬಹುದು ಎಂಬ ಭಯವಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಅಜಿತ್ ಪವಾರ್ ಅನ್ನು ಯಾರು ಆಗಬಹುದು ಎಂಬುದನ್ನು ನೋಡಲು ನಾವು ಕಾಯುತ್ತಿದ್ದೇವೆ" ಎಂದು ಜಾತ್ಯಾತೀತ ಜನತಾದಳ (ಜೆಡಿಎಸ್) ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭಾ ಚುನಾಚವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಈ ವೇಳೆ ತಮ್ಮ ಪಕ್ಷ 'ಕಿಂಗ್‌ಮೇಕರ್' ಆಗುತ್ತದೆ ಎಂಬ ಕನಸನ್ನು ಎಚ್ ಡಿ ಕುಮಾರಸ್ವಾಮಿ ಕಾಣುತ್ತಿದ್ದರು. ಆದರೆ, ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸರ್ಕಾರ ರಚಿಸಿದ ನಂತರ ಮೌನಕ್ಕೆ ಜಾರಿದ್ದಾರೆ.
ಮಹಾರಾಷ್ಟ್ರದಲ್ಲಿ ಆಗಿದ್ದೇನು?
ಶನಿವಾರ ಅಜಿತ್ ಪವಾರ್ ಮತ್ತು ಮೂರು ಡಜನ್‌ಗಿಂತಲೂ ಹೆಚ್ಚು ಎನ್‌ಸಿಪಿ ಶಾಸಕರು ಶರದ್ ಪವಾರ್ ಅವರ ಪಕ್ಷದಿಂದ ಬೇರ್ಪಟ್ಟು ಬಿಜೆಪಿ ಮತ್ತು ಏಕನಾಥ್ ಶಿಂದೇಯ ಶಿವಸೇನಾ ಬಣದ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಈ ಮೂಲಕ ಅಜಿತ್ ಪವಾರ್ ಮತ್ತು ಒಂಬತ್ತು ಶಾಸಕರು ಸಿಎಂ ಏಕನಾಥ್ ಶಿಂಧೆ ಸಂಪುಟಕ್ಕೆ ಸೇರ್ಪಡೆಗೊಂಡರು.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ಕಳೆದ ವರ್ಷ ಬಿಜೆಪಿ ಮತ್ತು ಹಾಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣದಿಂದ ಹಿಂದೆ ಸರಿದಿದ್ದ ಉಪಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಉಳಿಸಿಕೊಂಡಿದ್ದಾರೆ.
ಮತ್ತೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಅಜಿತ್ ಪವಾರ್, "ರಾಜ್ಯದ ಅಭಿವೃದ್ಧಿಗಾಗಿ ನಾವು ಶಿವಸೇನೆಯೊಂದಿಗೆ ಹೋಗಬಹುದಾದರೆ, ನಾವು ಬಿಜೆಪಿಯೊಂದಿಗೂ ಸೇರಬಹುದು" ಎಂದು ಹೇಳಿದ್ದಾರೆ. 2019 ರ ಮಹಾರಾಷ್ಟ್ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಶಿವ ಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಸೇರಿ ಬಿಜೆಪಿಯನ್ನು ದೂರವಿಟ್ಟಿತ್ತು.
"ಎನ್‌ಸಿಪಿಯ ಎಲ್ಲಾ ಶಾಸಕರು, ಸಂಸದರು ಮತ್ತು ಕಾರ್ಯಕರ್ತರು ನಮ್ಮೊಂದಿಗಿದ್ದಾರೆ ಅದಕ್ಕಾಗಿಯೇ ನಾನು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಸಾರ್ವತ್ರಿಕ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಾವು ಒಟ್ಟಿಗೆ ಹೋಗುತ್ತೇವೆ" ಎಂದು ಅಜಿತ್ ಪವಾರ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
ಇನ್ನು, ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ವಿಭಜನೆಯಾದ ನಂತರ, ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರು ಬಿಹಾರವು ಶೀಘ್ರದಲ್ಲೇ ಮಧ್ಯಂತರ ಚುನಾವಣೆಗೆ ಸಾಕ್ಷಿಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಈ ಮೂಲಕ ನಿತೀಶ್ ಕುಮಾರ್ ಅವರ ಪಕ್ಷವಾದ ಜನತಾ ದಳ (ಸಂಯುಕ್ತ) ನಲ್ಲಿಯೂ ವಿಭಜನೆಯಾಗುವ ಸುಳಿವು ನೀಡಿದ್ದಾರೆ.












Click it and Unblock the Notifications