ಶೀಘ್ರದಲ್ಲೇ ಸಿಎಂ ಶಿಂಧೆ ಜಾಗಕ್ಕೆ ಅಜಿತ್ ಪವಾರ್ ಎಂದು ಭವಿಷ್ಯ ನುಡಿದಿದ್ದೇಕೆ ಶಿವಸೇನಾ ನಾಯಕ ಸಂಜಯ್ ರಾವತ್?
ಮುಂಬೈ, ಜುಲೈ. 03: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ಅವರನ್ನು ಶೀಘ್ರದಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿ ತಾವು ಸಿಎಂ ಆಗಲಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಸೋಮವಾರ ಹೇಳಿಕೊಂಡಿದೆ.
ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುವುದು ಮತ್ತು ಶಿವಸೇನೆಯ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸಲಾಗುವುದು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಮಾಹಿತಿ ನೀಡಿದ್ದಾರೆ. "ಇಂದು ನಾನು ಇದನ್ನು ಕ್ಯಾಮೆರಾ ಮುಂದೆ ಹೇಳುತ್ತಿದ್ದೇನೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಬದಲಾಗಲಿದ್ದಾರೆ. ಏಕನಾಥ್ ಶಿಂಧೆ ಅವರನ್ನು ತೆಗೆದುಹಾಕಲಾಗುತ್ತಿದೆ. ಏಕನಾಥ್ ಶಿಂಧೆ ಮತ್ತು 16 ಶಾಸಕರನ್ನು ಅನರ್ಹಗೊಳ್ಳಲಿದ್ದಾರೆ" ಎಂದು ಸಂಜಯ್ ರಾವುತ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

"ಬಿಜೆಪಿಯು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಒಡೆಯುತ್ತಿದೆ. ಆದರೆ ಇದರಿಂದ ಅವರಿಗೆ (ಬಿಜೆಪಿ) ಯಾವುದೇ ಪ್ರಯೋಜನವಾಗುವುದಿಲ್ಲ. ಮಹಾರಾಷ್ಟ್ರದಲ್ಲಿ ನಾವು 2024 ರ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುತ್ತೇವೆ. ಎನ್‌ಸಿಪಿಯ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಆದರೆ, ಈಗ ಆ ನಾಯಕರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಆಘಾತಕಾರಿಯಾಗಿದೆ" ಎಂದು ಲೇವಡಿ ಮಾಡಿದ್ದಾರೆ.
#WATCH | Uddhav Thackeray faction leader and MP Sanjay Raut, says "Today I am saying this in front of the camera, the Chief Minister of Maharashtra is going to change. Eknath Shinde is being removed. Eknath Shinde and the 16 MLAs are going to be disqualified" pic.twitter.com/R0YI0MwQwR
— ANI (@ANI) July 3, 2023
ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ನಾಯಕ ನಾರಾಯಣ ರಾಣೆ ಅವರು "ಸರ್ಕಾರವು ದೃಢವಾಗಿ ಉಳಿಯುತ್ತದೆ ಮತ್ತು 2024 ರವರೆಗೆ ಶಿವಸೇನೆಯ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

24 ವರ್ಷಗಳ ಹಿಂದೆ ಪಕ್ಷವನ್ನು ಸ್ಥಾಪಿಸಿದ ಶರದ್ ಪವಾರ್ ಅವರನ್ನು ಆಘಾತಗೊಳಿಸಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಲು ಎನ್‌ಸಿಪಿಯನ್ನು ವಿಭಜನೆ ಮಾಡಿದ್ದಾರೆ. ಏಕನಾಥ್ ಶಿಂಧೆ ಮತ್ತು ಬಿಜೆಪಿ ಸರ್ಕಾರದಲ್ಲಿ ಎಂಟು ಎನ್‌ಸಿಪಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಹುದ್ದೆಗಾಗಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಲಿಲ್ಲ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಉದ್ಧವ್ ಠಾಕ್ರೆ ಬಣ ಹೇಳಿಕೊಂಡಿದೆ. "ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನೆಯ ಬಂಡಾಯ ಶಾಸಕರನ್ನು ಶೀಘ್ರದಲ್ಲೇ ಅನರ್ಹಗೊಳಿಸಲಾಗುವುದು ಮತ್ತು ಅಜಿತ್ ಪವಾರ್ ಅವರಿಗೆ ಪಟ್ಟಾಭಿಷೇಕ ಮಾಡಲಾಗುವುದು. ಈ ಹೊಸ ಬೆಳವಣಿಗೆಯು ರಾಜ್ಯದ ಜನರಿಗೆ ಸರಿ ಹೋಗುವುದಿಲ್ಲ. ರಾಜ್ಯವು ಅಂತಹ ರಾಜಕೀಯ ಸಂಪ್ರದಾಯವನ್ನು ಹೊಂದಿರಲಿಲ್ಲ ಮತ್ತು ಅದನ್ನು ಎಂದಿಗೂ ಜನರು ಬೆಂಬಲಿಸುವುದಿಲ್ಲ" ಎಂದು ಸಾಮ್ನಾ ಹೇಳಿಕೊಂಡಿದೆ.

ಏಕನಾಥ್ ಶಿಂಧೆ ಮತ್ತು ಇತರ ಶಾಸಕರು ಕಳೆದ ವರ್ಷ ಶಿವಸೇನೆ ತೊರೆದಾಗ, ನಿಧಿ ವಿತರಣೆ ಮತ್ತು ಕೆಲಸದ ಆದೇಶಗಳನ್ನು ಮಂಜೂರು ಮಾಡುವಲ್ಲಿ ಅಪಾರ ನಿಯಂತ್ರಣವನ್ನು ಹೊಂದಿದ್ದ ಅಂದಿನ ಹಣಕಾಸು ಸಚಿವ ಅಜಿತ್ ಪವಾರ್ ಅವರನ್ನು ನಿಯಂತ್ರಿಸದಿದ್ದಕ್ಕಾಗಿ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ದೂಷಿಸಿದ್ದರು. ಈಗ ಅವರನ್ನೇ ಸೇರಿಸಿಕೊಂಡಿದೆ. ಬಂಡಾಯ ಶಾಸಕರ ಪ್ರಕಾರ, ಎನ್‌ಸಿಪಿಯಿಂದಾಗಿಯೇ ಅವರು ಶಿವಸೇನೆ ತೊರೆದಿರುವುದು ಪ್ರಾಥಮಿಕ ಕಾರಣ ಎಂದು ಸಂಪಾದಕೀಯ ಹೇಳಿದೆ.












Click it and Unblock the Notifications