Maharashtra: ಭಾರಿ ಅನಾಹುತದಿಂದ ಪಾರಾದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ!
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ ಇಂದು ಸತಾರಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್ ಸತಾರಾ ಜಿಲ್ಲೆಯ ಡೇರ್‌ನಿಂದ ಪುಣೆಗೆ ಹಾರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಪುಣೆ ಮತ್ತು ಸತಾರಾದಲ್ಲಿ ಹವಾಮಾನವು ಸ್ಪಷ್ಟವಾಗಿದೆ. ಆದರೆ ಟೇಕಾಫ್ ಆದ ನಂತರ ಇದ್ದಕ್ಕಿದ್ದಂತೆ ಕೆಲವು ಮೋಡಗಳು ರೂಪುಗೊಂಡವು. ಈ ವೇಳೆ ಪೈಲೆಟ್‌ನಿಂದಲೂ ಯಾವುದೇ ಅಡಚಣೆ ಹಾಗೂ ತುರ್ತು ಕರೆ ಇರಲಿಲ್ಲ. ಆದರೂ ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಭೂಸ್ಪರ್ಶ ಮಾಡಿದರು ಎಂದು ಸತಾರಾ ಜಿಲ್ಲಾ ಎಸ್‌ಪಿ ಸಮೀರ್ ಶೇಖ್ ಹೇಳಿದ್ದಾರೆ.

ಇಂದು ಸಂಜೆ 4 ಗಂಟೆ ಸುಮಾರಿಗೆ 5 ನಿಮಿಷಗಳಲ್ಲಿ ಹೆಲಿಕಾಪ್ಟರ್ ವಾಪಸ್ ಬಂದು ಲ್ಯಾಂಡ್ ಆಯಿತು. ನಂತರ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಪುಣೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ರಸ್ತೆ ಮಾರ್ಗವನ್ನು ಬಳಸಿದರು. ಬಳಿಕ ಪುಣೆಯ ಜಗದ್ಗುರು ಸಂತ ತುಕಾರಾಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದರು ಎನ್ನಲಾಗಿದೆ. ಶಿಂಧೆ ಅವರು ಸತಾರಾ ಜಿಲ್ಲೆಯ ಡೇರ್ ಗ್ರಾಮದಿಂದ ಪುಣೆಗೆ ಹಾರುತ್ತಿದ್ದಾಗ ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಯಿತು ಎಂದು ಅವರ ವಿಶೇಷ ಕರ್ತವ್ಯಾಧಿಕಾರಿ ಮಂಗೇಶ್ ಚಿವಾಟೆ ಹೇಳಿದ್ದಾರೆ.
ಈ ಗ್ರಾಮವು ಸಹ್ಯಾದ್ರಿ ಶ್ರೇಣಿಗಳ ಮಧ್ಯೆ ಕೊಯ್ನಾ ಅಣೆಕಟ್ಟಿನ ಹಿನ್ನೀರಿನ ದಡದಲ್ಲಿದೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ಆದರೆ ಹವಾಮಾನ ಏರಿಳಿತದ ಹಿನ್ನೆಲೆ ತಕ್ಷಣವೇ ತುರ್ತು ಭೂಸ್ಪರ್ಶ ಮಾಡಿದೆ. ಸತಾರಾ ಮತ್ತು ಪುಣೆಯಲ್ಲಿ ಹವಾಮಾನವು ಸ್ಪಷ್ಟವಾಗಿದೆ. ಆದರೆ ದೂರದಲ್ಲಿ ಮಳೆ ಮೋಡಗಳನ್ನು ಗಮನಿಸಿದ ನಂತರ ಪೈಲಟ್‌ಗಳು ಮುನ್ನೆಚ್ಚರಿಕೆಯಾಗಿ ಹೆಲಿಪ್ಯಾಡ್‌ಗೆ ಮರಳಲು ನಿರ್ಧರಿಸಿದರು. ಹಾಗಾಗಿ ಯಾವುದೇ ಅನಾಹುತಗಳು ನಡೆದಿಲ್ಲ ಎಂದು ವರದಿಯಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಒಕ್ಕೂಟವು ಭಾರಿ ಬಹುಮತ ಪಡೆಯಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹರಿಯಾಣದಲ್ಲಿ ಇತ್ತೀಚೆಗೆ ಆದ ಬಿಜೆಪಿ ಗೆಲುವನ್ನು ಮಹಾರಾಷ್ಟ್ರದ ಪೂರಕವಾದ ಸಂಕೇತ ಎಂದು ಶಿಂಧೆ ಕರೆದಿದ್ದಾರೆ.

ಇನ್ನೇನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಬಾಕಿ ಇದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಅವರನ್ನು ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣ ಒಳಗೊಂಡಿರುವ ಮಹಾಯುತಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಬಿಂಬಿಸಲು ಈಗಾಗಲೇ ತೀವ್ರ ಕಸರತ್ತು ನಡೆಸುತ್ತಿದೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಈಗಾಗಲೇ ತನ್ನ ಮುಂಬೈ ಪದಾಧಿಕಾರಿಗಳೊಂದಿಗೆ ದಾದರ್‌ನ ಶಿವಾಜಿ ಮಂದಿರದಲ್ಲಿ ಸಭೆ ಕೂಡ ನಡೆಸಿದೆ. ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು ಮತ್ತು ಮುಂಬೈನಲ್ಲಿ ಪಕ್ಷದ ಭದ್ರಕೋಟೆಯನ್ನು ಬಲಪಡಿಸುವ ಸಂಬಂಧ ಈ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಸದ್ಯ ದೆಹಲಿಗೆ ತೆರಳಿರುವ ಶಿಂಧೆ ಅಲ್ಲಿಯೂ ಮಹತ್ವದ ಚರ್ಚೆ ನಡೆಸಿ ಬರಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications