ಮಹಾರಾಷ್ಟ್ರ ಬಂದ್‌: ಮತ್ತೋರ್ವನಿಂದ ಆತ್ಮಹತ್ಯೆಗೆ ಯತ್ನ

ಮಹಾರಾಷ್ಟ್ರ, ಜು.24: ಮರಾಠ ಜನಾಂಗಕ್ಕೆ ಸರ್ಕಾರದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಅನೇಕ ಮರಾಠ ಸಂಘಟನೆಗಳು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಗೋವಾದಿಂದ ಮಹಾರಾಷ್ಟ್ರಕ್ಕೆ ತೆರಳುವುದು ಹಾಗೆಯೇ ಮಹಾರಾಷ್ಟ್ರದಿಂದ ಬೇರೆ ಬೇರೆ ರಾಜ್ಯಗಳಿಗೆ ತೆರಳುವವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪಂಢರಪುರದಲ್ಲಿ ಆಷಾಢ ಏಕಾದಶಿಗೆಂದು ಕರ್ನಾಟಕದಿಂದ ಲಕ್ಷಾಂತರ ಮಂದಿ ಭಕ್ತರು ತೆರಳಿದ್ದರು. ಆದರೆ ಹಿಂದಿರುಗಿ ಬರಲಾರದೆ ಕಷ್ಟ ಅನುಭವಿಸುತ್ತಿದ್ದಾರೆ.

ಸೋಮವಾರ ಪ್ರತಿಭಟನಾಕಾರನೊಬ್ಬ ಔರಂಗಾಬಾದ್‌ನ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ, ಇದೀಗ ಮತ್ತೆ ಅಂಥದ್ದೇ ಘಟನೆಗೆ ನಡೆದಿದ್ದು ಅದೃಷ್ಟವಷಾತ್‌ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮರಾಠಾ ಕ್ರಾಂತಿ ಮೋರ್ಚಾ ಕಾರ್ಯಕರ್ತರು ಔರಂಗಾಬಾದ್‌ನ ಗಂಗಾಪುರದಲ್ಲಿ ಟ್ರಗ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

Maharashtra Bandh:one more person attempts suicide

ವಾರಗಟ್ಟಲೇ ವಿಠ್ಠಲ ದರ್ಶನಕ್ಕೆಂದು ವಾರಕರಿ ಸೇವೆ ಮಾಡಿಕೊಂಡು ಪಂಢರಪುರ ಸೇರಿದ ಸಹಸ್ರಾರು ಭಕ್ತರು,ಆಷಾಢ ಏಕಾದಶಿಯಂದು ತುಂಬಿ ಹರಿಯುತ್ತಿದ್ದ ಚಂದ್ರಭಾಗಾನದಿಯಲ್ಲಿ ಮಿಂದೆದ್ದರು. ಸೋಮವಾರ ಆಷಾಢ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆದಿದೆ. ಇದಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶದಿಂದ ಮತ್ತಿತರೆ ರಾಜ್ಯಗಳಿಂದ 15 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು ಆದರೆ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿರುವ ಪರಿಣಾಮ ಭಕ್ತರು ಅಂತಂತ್ರ ಸ್ಥಿತಿಗೆ ಸಿಲುಕುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+