ಮಹಾರಾಷ್ಟ್ರ ಚುನಾವಣೆ: ರಾಜ್ಯದಲ್ಲಿ ಬ್ಯಾಗ್ ತಪಾಸಣೆಯಲ್ಲಿ ರಾಜಕೀಯ..ವಿಡಿಯೋ ಹಂಚಿಕೊಂಡ ಬಿಜೆಪಿ
ಮುಂಬೈ, ನವೆಂಬರ್ 13: ಶಿವಸೇನಾ (ಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಬ್ಯಾಗುಗಳನ್ನು ಸತತ ಎರಡನೇ ದಿನವು ವಾಡಿಕೆಯಂತೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಸಾಮಾನು ಸರಂಜಾಮುಗಳ ವಾಡಿಕೆಯ ತಪಾಸಣೆಯ ರಾಜಕೀಯ ಗದ್ದಲದ ಒಂದು ದಿನದ ನಂತರ, ಬಿಜೆಪಿ ಇಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬ್ಯಾಗ್‌ಗಳನ್ನು ಪರೀಕ್ಷಿಸುವ ವಿಮಾನ ನಿಲ್ದಾಣದ ಭದ್ರತಾ ವೀಡಿಯೊವನ್ನು ಪೋಸ್ಟ್ ಮಾಡಿದೆ ಮತ್ತು ಶ್ರೀ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಮಹಾವಿಕಾಸ್ ಅಘಾಡಿಯ ಮೈತ್ರಿ ನಾಯಕ ಉದ್ದವ್ ಠಾಕ್ರೆ ಅವರ ಬ್ಯಾಗಗಳ ತಪಾಸಣೆ ಮಾಡಿದ್ದ ವಿಡಿಯೋ ಹಂಚಿಕೊಳ್ಳಲಾಗಿತ್ತು. ಸ್ವತಃ ಅವರೇ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಅಧಿಕಾರಿಗಳಿಗೆ ಬಿಜೆಪಿ ನಾಯಕರ ಬ್ಯಾಗ್ ತಪಾಸಣೆ ಮಾಡುವ ಧೈರ್ಯವಿದೆಯೇ ಎಂದು ಪ್ರಶ್ನಿಸಲಾಗಿತ್ತು. ವಿಪಕ್ಷಗಳ ನಾಯಕರು ಆಡಳಿತ ಪಕ್ಷ ಬಿಜೆಪಿ ಮೈತ್ರಿಕೂಟದ ನಾಯಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದರು.

ಇದೀಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬ್ಯಾಗ್‌ಗಳನ್ನು ತಪಾಸಣೆ ಮಾಡಲಾಗಿದೆ. ಈ ಕುರಿತ ವಿಡಿಯೋ ಹಂಚಿಕೊಂಡಿರುವ ಬಿಜೆಪಿಯು ವಿಪಕ್ಷಗಳಿಗೆ ಟಾಂಗ್ ನೀಡಿದೆ. ರಾಜ್ಯದಲ್ಲಿ ಬ್ಯಾಗ್ ಚೆಕ್ಕಿಂಗ್ ರಾಜಕೀಯ ಶುರುವಾಗಿದೆ.
ಬೆಂಕಿ ಹೆಚ್ಚುವ ಹೇಳಿಕೆ ಕೊಟ್ಟಿಲ್ಲ: ಬಿಜೆಪಿ
ಕೆಲವು ನಾಯಕರಿಗೆ ನಾಟಕ ಮಾಡಲು ಇಷ್ಟ ಎಂದಿರುವ ಬಿಜೆಪಿಯು ಈ ವಿಡಿಯೋ ನೋಡಿ. ನವೆಂಬರ್ 7 ಯವತ್ಮಾಲ್ ಜಿಲ್ಲೆಯ ನಮ್ಮ ನಾಯಕ ದೇವೇಂದ್ರಜಿ ಫಡ್ನವೀಸ್ ಅವರ ಬ್ಯಾಗ್ ಗಳನ್ನು ಪರಿಶೀಲಿಸಲಾಗಿದೆ. ಆದರೆ ಅವರು ಯಾವುದನ್ನು ವಿಡಿಯೋ ಮಾಡಿಕೊಂಡಿಲ್ಲ. ಇಲ್ಲಸಲ್ಲದ ಬೆಂಕಿ ಹಚ್ಚು ಹೇಳಿಕೆ ಕೊಟ್ಟಿಲ್ಲ. ನಿಯಮಗಳು ಎಲ್ಲರಿಗೂ ಒಂದೇ ಎಂಬಂತೆ ಬಿಜೆಪಿ ವಿಪಕ್ಷಗಳಿಗೆ ಕುಟುಕಿದೆ.
VIDEO | Shiv Sena (UBT) chief Uddhav Thackeray's (@OfficeofUT) bag was checked in Ausa in Latur district earlier today. Uddhav Thackeray questioned the officials who checked the bags.
— Press Trust of India (@PTI_News) November 12, 2024
(Source: Third party)
(Full video available on PTI Videos - https://t.co/n147TvqRQz) pic.twitter.com/aoclqRQDXI
ನಾಯಕರಿಗೆ ಸಂವಿಧಾನದ ಅರಿವಿರಬೇಕು
ನವೆಂಬರ್ 5 ರಂದು ಸಹ ಕೊಲ್ಹಾಪುರ ವಿಮಾನ ನಿಲ್ದಾಣದಲ್ಲಿಯೂ ದೇವೇಂದ್ರಜಿ ಫಡ್ನವೀಸ್ ಅವರ ಬ್ಯಾಗ್ ಗಳನ್ನು ಸಿಬ್ಬಂದಿ ತಪಾಸಣೆ ನಡೆಸಿದ್ದರು. ಅದರ ವಿಡಿಯೋ ಈಗಾಗಲೇ ಹಂಚಿಕೊಳ್ಳಲಾಗಿದೆ. ಶೋಭೆಗಾಗಿ ಕೇವಲ ಸಂವಿಧಾನವನ್ನು ಅಳವಡಿಸಿಕೊಳ್ಳದೆ ಸಾಂವಿಧಾನಿಕ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಸಂವಿಧಾನದ ಅರಿವಿರಬೇಕು ಎಂದು ಬಿಜೆಪಿ ನಾಯಕರ ತಿಳಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯು ಇದೇ ನವೆಂಬರ್ 20 ರಂದು ನಡೆಯಲಿದೆ. ನೆವೆಂಬರ್ 23ರಂದು ಮತ ಎಣಿಕಗೆ ನಡೆದು ಅಂದೇ 288 ವಿಧಾನಸಭಾ ಕ್ಷೇತ್ರಗಳ ನಾಯಕರ ರಾಜಕೀಯ ಭವಿಷ್ಯ ಬಹಿರಂಗವಾಗಲಿದೆ. ಸದ್ಯ ದಿನಗಣೆ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ. ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ.












Click it and Unblock the Notifications