ಮಹಾರಾಷ್ಟ್ರದಲ್ಲಿ ಮಕ್ಕಳ ಕಳ್ಳರೆಂದು ಐವರ ಭೀಕರ ಹತ್ಯೆ

ಧುಲೆ, ಜುಲೈ 01: ಮಕ್ಕಳ ಕಳ್ಳರೆಂದು ಐವರನ್ನು ಜನರೇ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ರೈನಪದ ಎಂಬ ಹಳ್ಳಿಯಲ್ಲಿ ಮಕ್ಕಳನ್ನು ಅಪಹರಣ ಮಾಡುವವರೆಂದು ಶಂಕಿಸಿ, ಐವರನ್ನು ಜನರೇ ಹೊಡೆದು ಕೊಂದಿದ್ದಾರೆ.

ಕೆಲವು ದಿನಗಳ ಹಿಂದೆ ಈ ಊರಿಗೆ ಬಂದಿದ್ದ ಪರವೂರಿನ ಐವರನ್ನು ಮಕ್ಕಳ ಕಳ್ಳರೆಂದು ಕರೆಯಲಾಗುತ್ತಿತ್ತು. ಅವರು ಮಕ್ಕಳನ್ನು ಅಪಹರಣ ಮಾಡಿದ್ದಾರೆ ಎಂಬುದಕ್ಕೆ ಇದುವರೆಗೂ ಯಾವುದೇ ಸಾಕ್ಷಿಯಾಗಲೀ, ಮಾಹಿತಿಯಾಗಲೀ ಲಭ್ಯವಿಲ್ಲ.

ಇತ್ತೀಚೆಗೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಕೆಲವರ ವಿಡಿಯೋಗಳು ಓಡಾಡುತ್ತಿದ್ದವು. ಇವರನ್ನು ಮಕ್ಕಳ ಅಪಹರಣಕಾರರರು ಎನ್ನಲಾಗುತ್ತಿತ್ತು. ಈ ವಿಡಿಯೋದಲ್ಲಿರುವ ವ್ಯಕ್ತಿಗಳು ಈ ಐವರನ್ನು ಹೋಲುತ್ತಿದ್ದರಿಂದ ಅವರನ್ನು ಹೊಡೆದು ಸಾಯಿಸಲಾಗಿದೆ ಎನ್ನಲಾಗುತ್ತಿದೆ.

Maharashtra: 5 lynched to death after child lifting rumour

ಈ ಸಂಬಂಧ ಈಗಾಗಲೇ ಇಲ್ಲಿನ ಪಿಂಪಾಲ್ನೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲೂ ಮಕ್ಕಳ ಕಳ್ಳನೆಂದು ಭಾವಿಸಿ ವ್ಯಕ್ತಿಯೋರ್ವನನ್ನು ಅಮಾನುಷವಾಗಿ ಹೊಡೆದು ಕೊಂದ ಘಟನೆ ಮೇ 23 ರಂದು ನಡೆದಿತ್ತು. ಪ್ರಕರಣಕ್ಕೆ ಸಂಬಮಧಿಸಿದಂತೆ 9 ಮಂದಿಯನ್ನು ಪೊಲಿಸರು ವಶಕ್ಕೆ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+