• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆರಡು ರಾಜ್ಯದಲ್ಲಿ ಮಹಾಘಟಬಂಧನ್, ಎಸ್ಪಿ, ಬಿಎಸ್ಪಿ ಮೈತ್ರಿ

|

ನವದೆಹಲಿ, ಫೆಬ್ರವರಿ 25 : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ವಿರೋಧಿ ಮೈತ್ರಿಕೂಟ ಮತ್ತೆರಡು ರಾಜ್ಯದಲ್ಲಿ ರಚನೆಯಾಗಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯಲಿವೆ.

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿ ವಿರೋಧಿ ಮೈತ್ರಿಕೂಟ ಮತ್ತೆರಡು ರಾಜ್ಯಕ್ಕೆ ವಿಸ್ತರಣೆಯಾಗಿದೆ.

ಕಾಂಗ್ರೆಸ್ಸಿಗೆ ಭಾರೀ ಆಘಾತ ನೀಡಿದ ಮಾಯಾವತಿ-ಅಖಿಲೇಶ್ ನಡೆ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಹಾಘಟಬಂಧನ್ ರಚನೆಯಾಗುತ್ತಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಮೈತ್ರಿಕೂಟ ರಚನೆಯಾಗಿದೆ.

ಮಹಾಘಟಬಂಧನದ ವಿರಾಟರೂಪ ದರ್ಶನಕ್ಕೆ ದೀದಿ ರೆಡಿ! ಯಾರೆಲ್ಲ ಹಾಜರು?

2014ರ ಚುನಾವಣೆಯಲ್ಲಿ ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸೀಟುಗಳು ಸಿಕ್ಕಿದ್ದವು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ....

ಫೆ.27ಕ್ಕೆ ಮಹಾಘಟಬಂಧನ್ ನಾಯಕರ ಸಭೆ, ಮೋದಿ ಕಟ್ಟಿಹಾಕಲು ತಂತ್ರ

ಎಷ್ಟು ಸೀಟುಗಳ ಹಂಚಿಕೆ

ಎಷ್ಟು ಸೀಟುಗಳ ಹಂಚಿಕೆ

ಉತ್ತರ ಪ್ರದೇಶದ ಬಳಿಕ ಬಿಎಸ್ಪಿ ಮತ್ತು ಎಸ್‌ಪಿ ಉತ್ತರಾಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಕ್ಕೂ ಮೈತ್ರಿಯನ್ನು ವಿಸ್ತರಣೆ ಮಾಡಿಕೊಂಡಿವೆ. ಸೀಟುಗಳ ಹಂಚಿಕೆ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಈ ಮೂಲಕ ಮಹಾಘಟಬಂಧನ್ ಅನ್ನು ಮತ್ತೆರಡು ರಾಜ್ಯಗಳಿಗೆ ವಿಸ್ತರಣೆಯಾಗಿದೆ.

ಯಾರಿಗೆ ಎಷ್ಟು ಸೀಟು

ಯಾರಿಗೆ ಎಷ್ಟು ಸೀಟು

ಮಧ್ಯಪ್ರದೇಶದಲ್ಲಿ 29 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧೆ ಮಾಡಲಿದೆ. ಉಳಿದ 3 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಕಣಕ್ಕಿಳಿಯಲಿದೆ. ಡಿಸೆಂಬರ್‌ನಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.

ಉತ್ತರಾಖಂಡ್ ರಾಜ್ಯ

ಉತ್ತರಾಖಂಡ್ ರಾಜ್ಯ

ಉತ್ತರಾಖಂಡ್ ರಾಜ್ಯದಲ್ಲಿ ಬಿಎಸ್‌ಪಿ 4 ಕ್ಷೇತ್ರ ಮತ್ತು ಸಮಾಜವಾದಿ ಪಕ್ಷ 1 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 5 ಕ್ಷೇತ್ರಗಳಲ್ಲೂ ಜಯಗಳಿಸಿತ್ತು. ಈ ಬಾರಿ ಮೈತ್ರಿ ಮಾಡಿಕೊಂಡು ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಹಾಕಲು ಉಭಯ ಪಕ್ಷಗಳು ತಂತ್ರ ರೂಪಿಸಿವೆ.

ಉತ್ತರ ಪ್ರದೇಶ ಮೈತ್ರಿ

ಉತ್ತರ ಪ್ರದೇಶ ಮೈತ್ರಿ

ಎಸ್‌ಪಿ ಮತ್ತು ಬಿಎಸ್‌ಪಿ ಕಾಂಗ್ರೆಸ್‌ ಜೊತೆ ಕೈ ಜೋಡಿಸಿಲ್ಲ. ಉತ್ತರ ಪ್ರದೇಶದಲ್ಲಿ ಈ ಜೋಡಿ ಈಗಾಗಲೇ ಮೈತ್ರಿ ಮಾಡಿಕೊಂಡಿವೆ. ಬಿಎಸ್‌ಪಿ 38 ಕ್ಷೇತ್ರಗಳಲ್ಲಿ, ಸಮಾಜವಾದಿ ಪಕ್ಷ 37 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.

English summary
Mayawati and Akhilesh Yadav have extended their alliance to Madhya Pradesh and Uttarakhand. Mahagathbandhan extended to two more states against the ruling BJP ahead of the national election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X