ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: ಮನೆ ಕುಸಿದು 6 ಸಾವು- ದೆಹಲಿಯಲ್ಲಿ ಕಂಪನದ ಅನುಭವ

|
Google Oneindia Kannada News

ನವದೆಹಲಿ, ನವೆಂಬರ್‌ 9: ಬುಧವಾರ ನಸುಕಿನ ವೇಳೆ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಬುಧವಾರ ನಸುಕಿನ 1.57ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಪ್ರಕಾರ ನೇಪಾಳ ಭೂಕಂಪದ ಕೇಂದ್ರಬಿಂದುವಾಗಿದೆ.

ಕಳೆದ ಐದು ಗಂಟೆಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ. ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಮಾಹಿತಿಯ ಪ್ರಕಾರ, ನೇಪಾಳದಲ್ಲಿ ಮಂಗಳವಾರ ರಾತ್ರಿ 8.52 ಕ್ಕೆ 4.9 ತೀವ್ರತೆಯ ಮೊದಲ ಭೂಕಂಪ, ನಂತರ 9.41 ಕ್ಕೆ 3.5 ತೀವ್ರತೆಯ ಭೂಕಂಪ ದಾಖಲಾಗಿದೆ. ಬುಧವಾರ ಮುಂಜಾನೆ 1.57 ಕ್ಕೆ 6.3 ತೀವ್ರತೆಯ ಮೂರನೇ ಭೂಕಂಪನ ಸಂಭವಿಸಿದೆ. ಇದರ ಕಂಪನ ದೆಹಲಿಯಲ್ಲಿ ಅನುಭವವಾಗಿದೆ.

Breaking: ಸ್ಯಾಂಡ್‌ವಿಚ್‌ ದ್ವೀಪಗಳಲ್ಲಿ ಮತ್ತೊಮ್ಮೆ ಭೂಕಂಪ Breaking: ಸ್ಯಾಂಡ್‌ವಿಚ್‌ ದ್ವೀಪಗಳಲ್ಲಿ ಮತ್ತೊಮ್ಮೆ ಭೂಕಂಪ

ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಪ್ರಬಲ ಕಂಪನದ ಅನುಭವವಾಗಿದೆ. ಭೂಕಂಪದ ಅನುಭವವಾದ ಕ್ಷಣದಿಂದ ಯುಪಿಯ ಮೊರಾದಾಬಾದ್‌ನಲ್ಲಿರುವ ಕಚೇರಿಯ ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ.

Magnitude 6.3 Earthquake in Nepal: Tremors felt in Delhi-NCR

ಕೆಲವು ಸೆಕೆಂಡುಗಳ ಕಾಲ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ನಡುಕವನ್ನು ಅನುಭವಿಸಿವೆ. ಭೂಕಂಪ ಸಂಭವಿಸಿದ ಅರ್ಧ ಗಂಟೆಯೊಳಗೆ 20,000ಕ್ಕೂ ಹೆಚ್ಚು ಟ್ವೀಟ್‌ಗಳು ಭೂಕಂಪದ ಬಗ್ಗೆ ಬಂದಿವೆ. ಕೆಲವರು ಈ ರೀತಿಯ ಪ್ರಬಲ ಭೂಕಂಪವನ್ನು ಅನುಭವಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿಯನಲ್ಲಿ ಭೂಕಂಪ: -

ಬುಧವಾರ ನಸುಕಿನ 2 ಗಂಟೆ ಸುಮಾರಿಗೆ ಭೂ ಕಂಪಿಸಿದೆ.

ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ.

ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿಯೂ ಕಂಪನಗಳು ವರದಿಯಾಗಿವೆ.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಆಳವು ಸುಮಾರು 10 ಕಿ.ಮೀ.

ಭೂಕಂಪದ ಕೇಂದ್ರಬಿಂದು ನೇಪಾಳ

ಐದು ಗಂಟೆಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಮೂರು ಭೂಕಂಪ ಸಂಭವಿಸಿದೆ.

ನೇಪಾಳದಲ್ಲಿ ಭೂಕಂಪನದಿಂದ ಮನೆ ಕುಸಿದು 6 ಸಾವು

ನೇಪಾಳದಲ್ಲಿ ಭೂಕಂಪನದಿಂದ ಮನೆ ಕುಸಿದು 6 ಸಾವು ಸಂಭವಿಸಿರುವುದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನ ತಮ್ಮ ಕಂಪನದ ಅನುಭವವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ದೆಹಲಿಯ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಹೈರೈಸ್ ನ ನಿವಾಸಿಗಳು ಸೀಲಿಂಗ್ ಫ್ಯಾನ್ ನಡುಗುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ನೇಪಾಳದಲ್ಲಿ ಇತ್ತೀಚಿನ ಭೂಕಂಪಗಳು

ಈ ಹಿಂದೆ ವಿನಾಶಕಾರಿ ಭೂಕಂಪಗಳಿಂದ ಹಿಮಾಲಯ ರಾಜ್ಯವು ದೊಡ್ಡ ನಷ್ಟವನ್ನು ಅನುಭವಿಸಿತು. 2015 ರಲ್ಲಿ, 7.8 ತೀವ್ರತೆಯ ತೀವ್ರತೆಯ ಭೂಕಂಪವು ಮಧ್ಯ ನೇಪಾಳಕ್ಕೆ ಸಂಭವಿಸಿ 8,964 ಜನರನ್ನು ಕೊಂದಿತು ಮತ್ತು 22,000 ಜನರು ಗಾಯಗೊಂಡರು. ಈ ವರ್ಷ ಅಕ್ಟೋಬರ್ 19 ರಂದು ಕಠ್ಮಂಡುವಿನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಜುಲೈ 31 ರಂದೂ ಕಠ್ಮಂಡುವಿನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರಣಾಪಾಯಗಳು ಆಗಿಲ್ಲ.

English summary
Earthquake of magnitude 6.3 struck Nepal, tremors felt in Delhi-NCR. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X