ಗುಂಡುಹಾರಿಸಿಕೊಂಡು ಮಧ್ಯಪ್ರದೇಶದ ಬಯ್ಯುಜಿ ಮಹಾರಾಜ್ ಆತ್ಮಹತ್ಯೆ
ಇಂದೋರ್, ಜೂನ್ 12: ಮಧ್ಯಪ್ರದೇಶದ ಪ್ರಸಿದ್ಧ ಅಧ್ಯಾತ್ಮ ಮುಖಂಡ ಬಯ್ಯುಜಿ ಮಹಾರಾಜ್(49) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಅವರನ್ನು ತಕ್ಷಣವೇ ಇಂದೋರ್ ನಲ್ಲಿರುವ ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತರಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಬಯ್ಯಾಜಿ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮಧ್ಯಪ್ರದೇಶ ಸರ್ಕಾರ ಬಯ್ಯುಜಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಮುಂದೆಬಂದಿತ್ತಾದರೂ ಅವರು, 'ಸಂತರಿಗೆ ಹುದ್ದೆಗಳು ಬೇಕಿಲ್ಲ' ಎಂದು ಈ ಹುದ್ದೆಯನ್ನು ನಿರಾಕರಿಸಿದ್ದರು.












Click it and Unblock the Notifications