ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಮತ್ತೆ ಅಧಿಕಾರ

|
Google Oneindia Kannada News

Recommended Video

ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಅಲೆ ಸಮೀಕ್ಷೆಯಿಂದ ಬಹಿರಂಗ | Oneindia Kannada

ಭೋಪಾಲ್, ಅಕ್ಟೋಬರ್ 16: ಲೋಕಸಭೆ ಚುನಾವಣೆ 2018ಗೆ ಮಧ್ಯಪ್ರದೇಶ ಸೇರಿದಂತೆ ಮೂರು ರಾಜ್ಯಗಳ ಚುನಾವಣೆಯನ್ನು ಸೆಮಿಫೈನಲ್ ಎಂದೇ ಕರೆಯಲಾಗುತ್ತಿದೆ. ಮುಖ್ಯವಾಗಿ ಬಿಜೆಪಿ ನೇತೃತ್ವದ ಎನ್ಡಿಎಗೆ ಇದು ದಿಕ್ಸೂಚಿಯಾಗಲಿದೆ. ಚುನಾವಣಾ ಪೂರ್ವ ಸಮೀಕ್ಷೆ, ಜನಾಭಿಪ್ರಾಯದಂತೆ ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಮಧ್ಯಪ್ರದೇಶದಲ್ಲಿ ಸತತ ಮೂರು ಅವಧಿಗಳಿಂದ ಅಧಿಕಾರದಲ್ಲಿರುವ ಬಿಜೆಪಿ, ಈ ಬಾರಿಯೂ ತನ್ನ ಹಿಡಿತ ಉಳಿಸಿಕೊಳ್ಳಲಿದೆ. 2018ರ ಅಂತ್ಯಕ್ಕೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳು ಬಾಕಿ ಇದೆ.

ಶಿವರಾಜ್ ಸಿಂಗ್ ಚೌಹಾಣ್ ಬಲವರ್ಧನೆಗೆ ಮೋದಿ, ಅಮಿತ್ಶಿವರಾಜ್ ಸಿಂಗ್ ಚೌಹಾಣ್ ಬಲವರ್ಧನೆಗೆ ಮೋದಿ, ಅಮಿತ್

ಶಿವರಾಜ್ ಸಿಂಗ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್ಸಿಗರು ನಂಬಿದ್ದಾರೆ. ಆದರೆ, ಇಲ್ಲಿ ಇನ್ನೂ ಮೋದಿ ಅಲೆ ಜೋರಾಗಿ ಬೀಸುತ್ತಿದೆ.

ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ

ಇಂಡಿಯಾ ಟುಡೇ, ಸಿ ವೋಟರ್, ಟೈಮ್ಸ್ ನೌ, ಇಂಡಿಯಾ ಟಿವಿ ಸಮೀಕ್ಷೆಗಳ ಸರಾಸರಿ ಇದನ್ನೇ ಹೇಳುತ್ತಿವೆ. ಶೇ 41ರಷ್ಟು ಮಂದಿ ಶಿವರಾಜ್ ಸಿಂಗ್ ಸರ್ಕಾರದ ಆಡಳಿತವನ್ನು ಮೆಚ್ಚಿದ್ದಾರೆ. ಶೇ 47ರಷ್ಟು ಮಂದಿ ನಿರುದ್ಯೋಗ ಸಮಸ್ಯೆ, ಶೇ 45ರಷ್ಟು ಕೃಷಿ ಈ ಬಾರಿ ಚುನಾವಣೆ ನಿರ್ಧರಿಸುವ ಅಂಶ ಎಂದಿದ್ದಾರೆ. ಇನ್ನಷ್ಟು ವಿವರ ಮುಂದಿದೆ...

#1 ಸಮೀಕ್ಷೆಗಳ ಸಮೀಕ್ಷೆ (ಸಿ ವೋಟರ್+ ಐಇಟೆಕ್+ ಟೈಮ್ಸ್ ನೌ)

#1 ಸಮೀಕ್ಷೆಗಳ ಸಮೀಕ್ಷೆ (ಸಿ ವೋಟರ್+ ಐಇಟೆಕ್+ ಟೈಮ್ಸ್ ನೌ)

ಮೂರು ಅವಧಿಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಮಧ್ಯಪ್ರದೇಶದಲ್ಲಿ ನಾಲ್ಕನೆಯ ಅವಧಿಗೂ ಆಡಳಿತದ ಚುಕ್ಕಾಣಿ ಹಿಡಿಯಲಿದೆ.

230 ಕ್ಷೇತ್ರಗಳ ಪೈಕಿ ಬಿಜೆಪಿ 126 ಸ್ಥಾನಗಳಲ್ಲಿ ಗೆಲ್ಲಲಿದೆ. ಬಹುಮತಕ್ಕೆ ಬೇಕಿರುವುದು 116 ಸೀಟುಗಳು. ಹೀಗಾಗಿ ಬಿಜೆಪಿ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎನ್ನುತ್ತವೆ ಸಮೀಕ್ಷೆಗಳು. ಆದರೆ, 2013ರಲ್ಲಿ ಬಿಜೆಪಿ 165 ಸೀಟುಗಳನ್ನು ಗೆದ್ದಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೀಟುಗಳನ್ನು ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ತನ್ನ ಶಕ್ತಿಯನ್ನು 58ರಿಂದ 97 ಸೀಟುಗಳಿಗೆ ಹೆಚ್ಚಿಸಿಕೊಳ್ಳಲಿದೆ.

#2 ಟೈಮ್ಸ್ ನೌ ಸಮೀಕ್ಷೆಗಳ ಸಮೀಕ್ಷೆ

#2 ಟೈಮ್ಸ್ ನೌ ಸಮೀಕ್ಷೆಗಳ ಸಮೀಕ್ಷೆ

ಬಿಜೆಪಿ
ಕದನ ಕೊಠಡಿ ರಣತಂತ್ರ : 142
ಎಬಿಪಿ ಸಿ ವೋಟರ್ : 108
ಸಮೀಕ್ಷೆಗಳ ಸಮೀಕ್ಷೆ : 125

ಕಾಂಗ್ರೆಸ್
ಕದನ ಕೊಠಡಿ ರಣತಂತ್ರ :77
ಎಬಿಪಿ ಸಿ ವೋಟರ್ : 122
ಸಮೀಕ್ಷೆಗಳ ಸಮೀಕ್ಷೆ : 100

ಇತರೆ
ಕದನ ಕೊಠಡಿ ರಣತಂತ್ರ : 11
ಎಬಿಪಿ ಸಿ ವೋಟರ್ : 0

ವಿಶ್ಲೇಷಣೆ : ಮಧ್ಯಪ್ರದೇಶದಲ್ಲಿ ಮಣ್ಣುಮುಕ್ಕುವವರು ಯಾರು? ಕಾಂಗ್ರೆಸ್, ಬಿಜೆಪಿ?ವಿಶ್ಲೇಷಣೆ : ಮಧ್ಯಪ್ರದೇಶದಲ್ಲಿ ಮಣ್ಣುಮುಕ್ಕುವವರು ಯಾರು? ಕಾಂಗ್ರೆಸ್, ಬಿಜೆಪಿ?

# ಯಾರಗಲಿದ್ದಾರೆ ಮುಖ್ಯಮಂತ್ರಿ?(ಟೈಮ್ಸ್ ನೌ)

# ಯಾರಗಲಿದ್ದಾರೆ ಮುಖ್ಯಮಂತ್ರಿ?(ಟೈಮ್ಸ್ ನೌ)

ಸತತ ಮೂರನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿರುವ ಬಿಜೆಪಿಗೆ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆ ಆಧಾರವಾಗಿದೆ. ಆದರೆ, 15 ವರ್ಷಗಳ ಕಾಲ ಆಡಳಿತ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್ ನಂಬಿದೆ.
* ಶೇ 61: ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)
* ಶೇ 17 : ಜ್ಯೋತಿರಾದಿತ್ಯಾ ಸಿಂಧ್ಯಾ(ಕಾಂಗ್ರೆಸ್)
* ಶೇ 5 : ದಿಗ್ವಿಜಯ್ ಸಿಂಗ್ (ಕಾಂಗ್ರೆಸ್)
* ಶೇ 6 : ಕಮಲ್ ನಾಥ್ (ಕಾಂಗ್ರೆಸ್)
* ಇತರೆ : ಶೇ 11

#4 ಸಿಎಂ ಸಮೀಕ್ಷೆ (ಇಂಡಿಯಾ ಟುಡೇ +ಆಕ್ಸಿಸ್ ಮೈ ಇಂಡಿಯಾ)

#4 ಸಿಎಂ ಸಮೀಕ್ಷೆ (ಇಂಡಿಯಾ ಟುಡೇ +ಆಕ್ಸಿಸ್ ಮೈ ಇಂಡಿಯಾ)

* ಶೇ 46: ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)
* ಶೇ 32 : ಜ್ಯೋತಿರಾದಿತ್ಯಾ ಸಿಂಧ್ಯಾ(ಕಾಂಗ್ರೆಸ್)
* ಶೇ 8 : ಕಮಲ್ ನಾಥ್ (ಕಾಂಗ್ರೆಸ್)
* ಶೇ 2 : ದಿಗ್ವಿಜಯ್ ಸಿಂಗ್ (ಕಾಂಗ್ರೆಸ್)
* ಶೇ 1 : ಉಮಾಭಾರತಿ(ಬಿಜೆಪಿ)

ಸಮೀಕ್ಷೆ : ಮೋದಿ ಅಲೆಗೆ ಬೆಲೆ 3 ರಾಜ್ಯಗಳಲ್ಲಿ ಕಮಲಕ್ಕೆ ಮತ್ತೆ ನೆಲೆಸಮೀಕ್ಷೆ : ಮೋದಿ ಅಲೆಗೆ ಬೆಲೆ 3 ರಾಜ್ಯಗಳಲ್ಲಿ ಕಮಲಕ್ಕೆ ಮತ್ತೆ ನೆಲೆ

ಇಂಡಿಯಾ ಟಿವಿ- ಸ್ಥಾನ/ ಶೇಕಡಾವಾರು ಮತ

ಇಂಡಿಯಾ ಟಿವಿ- ಸ್ಥಾನ/ ಶೇಕಡಾವಾರು ಮತ

ಇಂಡಿಯಾ ಟಿವಿ- ಸ್ಥಾನ/ ಶೇಕಡಾವಾರು ಮತ
2018(2013) :
ಬಿಜೆಪಿ : 128 ಹಾಗೂ 43%(165 ಹಾಗೂ 45%)
ಕಾಂಗ್ರೆಸ್ : 85 ಹಾಗೂ 37% (58 ಹಾಗೂ 36%)
ಬಿಎಸ್ ಪಿ: 08 ಹಾಗೂ 07% (04 ಹಾಗೂ 06%)
ಇತರೆ : 09 ಹಾಗೂ 13% (03 ಹಾಗೂ 13%)

English summary
Opinion Poll of Polls : Madhya Pradesh Chief Minister Shivraj Singh Chouhan is likely to get a record fourth term in the state, Opinion Poll of Polls shows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X