#ಮಿಟೂ ಎನ್ನುತ್ತಿರುವ ಪತ್ರಕರ್ತೆಯರು ಮುಗ್ಧರೇನಲ್ಲ: ಬಿಜೆಪಿ ನಾಯಕಿ

Recommended Video

      ಮಿಟೂ ಎನ್ನುತ್ತಿರುವ ಪತ್ರಕರ್ತೆಯರು ಮುಗ್ಧರೇನಲ್ಲ ಎಂದ ಬಿಜೆಪಿ ನಾಯಕಿ | Oneindia Kannada

      ಮಧ್ಯಪ್ರದೇಶ, ಅಕ್ಟೋಬರ್ 12: ಲೈಂಗಿಕ ಕಿರುಕುಳದ ವಿರುದ್ಧ ಧನಿ ಎತ್ತುವ #ಮಿಟೂ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿರುವ ಬೆನ್ನಲ್ಲೆ ಅಭಿಯಾನದ ಬಗ್ಗೆ ಅನುಮಾನ ವ್ಯಕ್ತಪಡಿಸುವವರು, ಕೊಂಕು ನುಡಿಯುವವರೂ ಹೆಚ್ಚಾಗಿದ್ದಾರೆ.

      ಕೇಂದ್ರ ಸಚಿವ ಎ.ಜೆ.ಅಕ್ಬರ್‌ ಅವರ ಮೇಲೆ ಹೊರಿಸಲಾಗಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡುತ್ತಾ ಮಧ್ಯ ಪ್ರದೇಶದ ಬಿಜೆಪಿ ನಾಯಕಿಯೊಬ್ಬರು, 'ಪತ್ರಕರ್ತೆಯರೇನು ಮುಗ್ಧರಲ್ಲ' ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

      ಮಧ್ಯ ಪ್ರದೇಶ ಮಹಿಳಾ ಬಿಜೆಪಿ ವಿಭಾಗದ ಮುಖ್ಯಸ್ಥೆ ಲತಾ ಕೇಲ್ಕರ್‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, 'ನನ್ನ ಪ್ರಕಾರ ಪತ್ರಕರ್ತೆಯರೇನು ಮುಗ್ಧರಲ್ಲ, ಅವರನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿಕೆ ನೀಡಿದ್ದಾರೆ.

      ಅವರ ಮಾತಿನಲ್ಲಿ ಪತ್ರಕರ್ತೆಯರ ಒಪ್ಪಿಗೆಯ ನಂತರವೇ ಲೈಂಗಿಕ 'ದೌರ್ಜನ್ಯ' ನಡೆದಿರಬಹುದು ಎಂಬ ಧನಿ ಇರುವುದು ವಿವಾದಕ್ಕೆ ಕಾರಣವಾಗಿದೆ.

      ಪಕ್ಷದ ಸಚಿವರ ಬೆಂಬಲಕ್ಕೆ ಬಿಜೆಪಿ ನಾಯಕಿ

      ಪಕ್ಷದ ಸಚಿವರ ಬೆಂಬಲಕ್ಕೆ ಬಿಜೆಪಿ ನಾಯಕಿ

      ಎಂಜೆ ಅಕ್ಬರ್‌ ಪತ್ರಕರ್ತರಾಗಿದ್ದು, ಈಗ ಅವರ ಮೇಲೆ ಆರೋಪ ಹೊರಿಸುವವರೂ ಸಹ ಪತ್ರಕರ್ತರೇ ಆಗಿರುವ ಕಾರಣ ಇಬ್ಬರಲ್ಲೂ ದೋಷ ಕಾಣುತ್ತಿದೆ ಎಂದು ಅವರು, ತಮ್ಮ ಪಕ್ಷದ ಸಚಿವರ ಪರ ಮೃದು ಧೋರಣೆ ತಳೆದಿದ್ದಾರೆ.

      ಅವರಿಗೆ ಈಗ ಜ್ಞಾನೋದಯವಾಗಿದೆಯೇ?

      ಅವರಿಗೆ ಈಗ ಜ್ಞಾನೋದಯವಾಗಿದೆಯೇ?

      ತಮ್ಮ ಹೇಳಿಕೆಯಲ್ಲಿ ಮೊದಲಿಗೆ, ನಾನೂ #ಮಿಟೂ ಅಭಿಯಾನ ಬೆಂಬಲಿಸುತ್ತೇನೆ ಎಂದಿರುವ ಅವರು, ಆ ನಂತರ 'ಅದು ಲೈಂಗಿಕ ಕಿರುಕುಳ ಎಂದು ಅವರಿಗೆ ಈಗ ಜ್ಞಾನೋದಯವಾಗಿದೆಯಾ' ಎಂದು ಕುಹುಕವಾಡಿದ್ದಾರೆ.

      ಆಗಲೇ ಏಕೆ ದೂರು ನೀಡಲಿಲ್ಲ?

      ಆಗಲೇ ಏಕೆ ದೂರು ನೀಡಲಿಲ್ಲ?

      ಜೊತೆಗೆ ಆಗಲೇ ಅವರು ದೌರ್ಜನ್ಯದ ವಿರುದ್ಧ ವರದಿ ಮಾಡದೇ ಇರುವುದು ದೌರ್ಜನ್ಯ ನಡೆದಿಲ್ಲವೆಂಬುದನ್ನು ತೋರಿಸುತ್ತದೆ ಎನ್ನುವ ಮೂಲಕ ಲೈಂಗಿಕ ದೌರ್ಜನ್ಯದ ಆರೋಪಗಳೇ ಸುಳ್ಳು ಎಂದು ಸಹ ಅವರು ಹೇಳಿದ್ದಾರೆ.

      ಎಂಜೆ ಅಕ್ಬರ್ ರಾಜೀನಾಮೆಗೆ ಪಟ್ಟು

      ಎಂಜೆ ಅಕ್ಬರ್ ರಾಜೀನಾಮೆಗೆ ಪಟ್ಟು

      ಕೇಂದ್ರ ಸಚಿವ ಎಂ.ಜೆ.ಅಕ್ಬರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಹೆಚ್ಚಾಗುತ್ತಿದ್ದು, ಕಾಂಗ್ರೆಸ್‌ ಪಕ್ಷವು ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+