• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Chandra Grahan 2022 Live: ಗ್ರಹಣ ಕಾಲದಲ್ಲಿ ದೇಗುಲ ಬಂದ್

|
Google Oneindia Kannada News

2022ರಲ್ಲಿ ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ ಬಂದಿದೆ. ನವೆಂಬರ್ 8ರಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಸಾಕ್ಷಿಯಾಗಲಿವೆ. ಖಗೋಳ ಕೌತುಕ ನೋಡಲು ಅನೇಕರು ಕಾತುರರಾಗಿದ್ದರೆ, ಭಕ್ತಾದಿಗಳು ತಮ್ಮ ರಾಶಿಯ ಮೇಲೆ ಏನು ಪ್ರಭಾವ ಬೀರಲಿದೆ? ಯಾವ ರೀತಿ ಜಪ ತಪ ಆಚರಿಸಬೇಕು? ಎಂಬುದರದಲ್ಲಿ ನಿರತರಾಗಿದ್ದಾರೆ. ಚಂದ್ರ ಗ್ರಹಣದ ಅಪ್ಡೇಟ್ಸ್ ಇಲ್ಲಿದೆ.

ಸಂಪೂರ್ಣ ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುತ್ತದೆ. ಈ ಬಾರಿ ಬ್ಲಡ್ ಮೂನ್ ಅಥವಾ ರಕ್ತ ಚಂದ್ರ ದರ್ಶನ ಭಾಗ್ಯ ಸಿಗಲಿದೆ. ಇದಕ್ಕಾಗಿ ನಾಸಾ ಸೇರಿದಂತೆ ಹಲವು ಬಾಹ್ಯಾಕಾಶ ಸಂಸ್ಥೆಗಳು ವಿವಿಧ ಟೆಲಿಸ್ಕೋಪ್ ಬಳಸಿ ವೀಕ್ಷಣೆಗೆ ಸಜ್ಜಾಗಿವೆ. ಆದರೆ, ಸಂಪೂರ್ಣ ಚಂದ್ರಗ್ರಹಣವು ಪೂರ್ವ ಭಾಗಗಳಿಂದ ಮಾತ್ರ ಗೋಚರಿಸುತ್ತದೆ ಆದರೆ ಭಾಗಶಃ ಗ್ರಹಣವು ಭಾರತದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ.

Lunar Eclipse 2022 : ವರ್ಷದ ಕೊನೆಯ ಚಂದ್ರಗ್ರಹಣ, ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ!Lunar Eclipse 2022 : ವರ್ಷದ ಕೊನೆಯ ಚಂದ್ರಗ್ರಹಣ, ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ!

ಭಾರತ ಮತ್ತು ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾದ ಕೆಲವು ಭಾಗಗಳಲ್ಲದೆ, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಸಾಗರದ ಇತರ ಭಾಗಗಳ ನಿವಾಸಿಗಳು ಖಗೋಳ ಘಟನೆಯನ್ನು ವೀಕ್ಷಿಸಬಹುದಾಗಿದೆ.

Lunar Eclipse 2022 Live Updates in Kannada: India Timings, Latest News & Highlights

ಚಂದ್ರಗ್ರಹಣ ಆರಂಭ -ಅಂತ್ಯ

ಭಾಗಶಃ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 2.39ಕ್ಕೆ
ಪೂರ್ಣ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 3.46
ಗರಿಷ್ಠ ಪೂರ್ಣ ಚಂದ್ರಗ್ರಹಣ - ಮಧ್ಯಾಹ್ನ 4:29
ಪೂರ್ಣ ಚಂದ್ರಗ್ರಹಣ ಕೊನೆಗೊಳ್ಳುವ ಸಮಯ - ಸಂಜೆ 5:11

ಕೋಲ್ಕತ್ತಾ: ಸಂಜೆ 4:54
ಕೊಹಿಮಾ: ಸಂಜೆ 4:29
ದೆಹಲಿ: ಸಂಜೆ 5:31
ಬೆಂಗಳೂರು: ಸಂಜೆ 5:57
ಮುಂಬೈ: ಸಂಜೆ 6:03
ನಾಗ್ಪುರ: ಸಂಜೆ 5:32
ಶ್ರೀನಗರ: ಸಂಜೆ 5:31

ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳ ನಂತರ ಮಾರ್ಚ್ 14, 2025 ರಂದು ಸಂಭವಿಸುತ್ತದೆ.. ಚಂದ್ರಗ್ರಹಣ ಕುರಿತ ಇನ್ನಷ್ಟು ವಿವರ ಮುಂದಿದೆ..

Newest First Oldest First
6:17 PM, 8 Nov
ಬಿಹಾರದಲ್ಲಿ ಸೆರೆ ಸಿಕ್ಕ ಚಂದ್ರಗ್ರಹಣದ ಚಿತ್ರಣ ಟೈಮ್ ಲ್ಯಾಪ್ಸ್ ಚಿತ್ರ
5:12 PM, 8 Nov
ಒಂದು ಟೇಕ್‌ನಲ್ಲಿ ಚಂದ್ರಗ್ರಹಣದ ಟೈಮ್‌ಲ್ಯಾಪ್ಸ್ ಚಿತ್ರ ಸೆರೆ ಹಿಡಿಯಲು ಯತ್ನಿಸಿದೆ ಆದರೆ, ಸಾಧ್ಯವಾಗಲಿಲ್ಲ ಆದರೆ ಇನ್ನೂ ಚೆನ್ನಾಗಿದೆ ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.
4:35 PM, 8 Nov
ಲೈವ್ ವೀಕ್ಷಣೆ
ಸಂಪೂರ್ಣ ಚಂದ್ರಗ್ರಹಣ #BloodMoon ಮಂಗಳವಾರ, ನವೆಂಬರ್ 8 ರಂದು 5:17am ET (1017 UTC) ಕ್ಕೆ ಉತ್ತುಂಗ ತಲುಪಲಿದೆ. ಲೈವ್ ವೀಕ್ಷಣೆಗಾಗಿ ನಾಸಾ ವೆಬ್ ತಾಣ, ಯೂಟ್ಯೂಬ್ ವೀಕ್ಷಿಸಿ
4:21 PM, 8 Nov
ವೀಕ್ಷಕರ ಕಣ್ಣಲ್ಲಿ ಚಂದ್ರಗ್ರಹಣ
ವೀಕ್ಷಕರ ಕಣ್ಣಲ್ಲಿ ಚಂದ್ರಗ್ರಹಣ ಕಂಡಿದ್ದು ಹೇಗೆ? ಆಸಕ್ತರು ತಮ್ಮ ಲಭ್ಯ ಸಾಧನಗಳ ಮೂಲಕ ಗ್ರಹಣವನ್ನು ಸೆರೆ ಹಿಡಿದಿದ್ದಾರೆ.
2:36 PM, 8 Nov
ಗ್ರಹಣದ ನೇರ ಪ್ರಸಾರ ಲೋವೆಲ್ ಅಬ್ಸರ್ವೇಟರಿಯ (Lowell Observatory lunar eclipse) ಯೂಟ್ಯೂಬ್ ಪುಟದಲ್ಲಿ ಲಭ್ಯವಿರುತ್ತದೆ.
1:57 PM, 8 Nov
ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜಾ, ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಹಾಗೆಯೇ ಹುಬ್ಬಳ್ಳಿ ನಗರದ ಸಾಯಿ ಮಂದಿರ, ಚಂದ್ರಮೌಳೇಶ್ವರ ದೇವಸ್ಥಾನಗಳು ಸೇರಿದಂತೆ ಹಲವು ದೇವಸ್ಥಾನಗಳನ್ನು ಬಂದ್ ಮಾಡಿ ಭಕ್ತರಿಗೆ ದರ್ಶನವನ್ನು ನಿಷೇಧಿಸಲಾಗಿದೆ.
1:13 PM, 8 Nov
ಚಂದ್ರಗ್ರಹಣದ ಸಮಯದಲ್ಲಿ ಮೇಷ ರಾಶಿಯ ಜನರು ಜಾಗರೂಕರಾಗಿರಬೇಕು. ಏಕೆಂದರೆ ಗ್ರಹಣದಿಂದಾಗಿ ಈ ರಾಶಿಯವರಿಗೆ ಆರ್ಥಿಕವಾಗಿ ಮತ್ತು ದೈಹಿಕವಾಗಿ ತೊಂದರೆಯಾಗಬಹುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ.
12:28 PM, 8 Nov
ಚಂದ್ರಗ್ರಹಣದ ವೇಳೆ ಮಲೆಮಹದೇಶ್ಚರ ಬೆಟ್ಟದಲ್ಲಿ ದೇಗುಲ ಬಂದ್ ಮಾಡುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಭಕ್ತರಿಗೆ ಎಂದಿನಂತೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಎಂದಿನಂತೆ ಪ್ರಸಾದ ವ್ಯವಸ್ಥೆಯು ಇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
11:35 AM, 8 Nov
ಕರ್ನಾಟಕದ ಸುಪ್ರಸಿದ್ಧ ದೇವಸ್ಥಾನಗಳು ಬಂದ್
ಧರ್ಮಸ್ಥಳ, ಕುಕ್ಕೆ ಸುಭ್ರಮಣ್ಯ, ಗೋಕರಣ ದೇವಸ್ಥಾನಗಳನ್ನು ಮಧ್ಯಾಹ್ನ ಒಂದು ಗಂಟೆಯ ನಂತರ ಮುಚ್ಚಲಾಗುತ್ತದೆ. ಧರ್ಮಸ್ಥಳದಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಊಟ ಮುಗಿಯುತ್ತದೆ. ನಂತರ ಬಂದ್ ಆಗಲಿದೆ. ಚಂದ್ರಗ್ರಹಣದ ಬಳಿಕ ದೇವಸ್ಥಾನವನ್ನು ಸ್ವಚ್ಚಗೊಳಿಸಿ ಸಂಜೆ ಏಳರಿಂದ ಒಂಬತ್ತಕ್ಕೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
11:34 AM, 8 Nov
ರಾಮನಗರದ ಬಹುತೇಕ ದೇವಸ್ಥಾನಗಳನ್ನು ಮುಚ್ಚಲಾಗಿದೆ
ರಾಮನಗರದಲ್ಲಿ ಈಗಾಗಲೇ ಪ್ರಮುಖ ದೇವಸ್ಥಾನಗಳು ಬಂದ್ ಆಗಿವೆ. ಹನ್ನೊಂದು ಗಂಟೆ ನಂತರದಲ್ಲಿ ರಾಮನಗರದ ಬಹುತೇಕ ದೇವಸ್ಥಾನಗಳು ಬಂದ್ ಆಗಿವೆ. ಕೆಂಗಲ್ ಆಜನೇಯ ಸ್ವಾಮಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಇಲ್ಲಿ ಬೆಳಿಗ್ಗೆಯಿಂದ ಪೂಜೆ ಹವನ ಮಾಡಲಾಯಿತು. ಹನ್ನೊಂದು ಗಂಟೆಗೆ ಬೀಗ ಹಾಕಲಾಗಿದೆ. ಸಂಜೆ ಗ್ರಹಣದ ನಂತರ ಸ್ವಚ್ಚಗೊಳಿಸಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದರೊಂದಿಗೆ ಕಬ್ಬಾಳಮ್ಮ ದೇವಸ್ಥಾನ ಕೂಡ ವಿಷೇಶ ಪೂಜೆ ಬಳಿಕ ಬಂದ್ ಮಾಡಲಾಗಿದೆ. ಹುಣ್ಣಿಮೆ ಹಾಗೂ ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನದ ನಂತರ ಸಂಜೆ ಏಳು ಗಂಟೆವರೆಗೆ ಬೀಗ ಹಾಕಲಾಗುತ್ತದೆ. ಬಳಿಕ ಶುದ್ಧೀರಕಣದ ನಂತರ ದೇವಸ್ಥಾನ ಬಾಗಿಲು ತೆಗೆದು ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
11:34 AM, 8 Nov
ಮೈಸೂರು ಚಾಮುಂಡಿ ದೇವಸ್ಥಾನ ಮಧ್ಯಾಹ್ನ 1ಕ್ಕೆ ಬಂದ್
ಮೈಸೂರು ಚಾಮುಂಡಿ ದೇವಸ್ಥಾನದಲ್ಲಿ ಮದ್ಯಾಹ್ನ 1ರಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇವತ್ತು ಭಕ್ತರಿಗೆ ಅವಕಾಶ ಇರುವುದಿಲ್ಲ. ಗ್ರಹಣದ ಬಳಿಕ ಸ್ವಚ್ಚತಾ ಕಾರ್ಯ ಮಾಡಲಾಗುತ್ತದೆ.
11:34 AM, 8 Nov
ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ನೋಡಬಹುದು. ಗ್ರಹಣ ಸಮಯದಲ್ಲಿ ಯಾವುದೇ ಹಾನಿಕಾರಕ ಕಿರಣಗಳು ಹೊರಬರುವುದಿಲ್ಲ ಎಂದು ನಾಸಾ ಹೇಳಿದೆ.
11:02 AM, 8 Nov
ಮಂಗಳವಾರ (ನವೆಂಬರ್ 08) ಚಂದ್ರಗ್ರಹಣ ಹಿನ್ನೆಲೆ ನಾಡಿನ ಸುಪ್ರಸಿದ್ಧ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ 11ರಿಂದ 12 ಗಂಟೆವರೆಗೆ ಮಾತ್ರ ಪ್ರಸಾದದ ವ್ಯವಸ್ಥೆ ಇರಲಿದೆ. ಅದಾದ ಬಳಿಕ ಗ್ರಹಣ ಮುಗಿಯುವವರೆಗೂ ಮತ್ತೆ ಪ್ರಸಾದದ ಇರುವುದಿಲ್ಲ. ಮಧ್ಯಾಹ್ನ 1:30ಕ್ಕೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 4ಕ್ಕೆ ಅರ್ಚನೆ ಇರಲಿದೆ. ಆದರೆ ಗ್ರಹಣ ಮೋಕ್ಷ ಕಾಲದ ಬಳಿಕ ಶುದ್ದಿ ಕಾರ್ಯದ ನಂತರವೇ ಪೂಜೆ-ಪ್ರಸಾದದ ವ್ಯವಸ್ಥೆ ಇರುತ್ತದೆ. ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ ಮಾಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಇನ್ನು ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಎಂದಿನಂತೆ ಪೂಜೆ ಇರುತ್ತದೆ. ಆದರೆ ಮಧ್ಯಾಹ್ನದ ಊಟ ಇರುವುದಿಲ್ಲ. ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪೂಜೆ-ಪ್ರಸಾದ ಸೇರಿದಂತೆ ಯಾವುದೇ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಇರಲಿದೆ. ಗ್ರಹಣದ ಬಳಿಕ ಪೂಜೆ-ಪ್ರಸಾದ ಎಂದಿನಂತೆ ಇರಲಿದೆ.
10:54 AM, 8 Nov
ಕಟೀಲು ದೇವಸ್ಥಾನ
ಕಟೀಲು ದೇವಸ್ಥಾನ
ಕಟೀಲು ದೇವಸ್ಥಾನದಲ್ಲೂ ಗ್ರಹಣದ ದಿನ ದೇವರ ಪೂಜೆಯ ಸಮಯ ಬದಲಾವಣೆ ಆಗಲಿದೆ. ನವೆಂಬರ್ 8ರಂದು ಬೆಳಗ್ಗೆ 9:30ಕ್ಕೆ ದೇವರಿಗೆ ಪೂಜೆ ನಡೆಯುತ್ತದೆ. ಮಧ್ಯಾಹ್ನ ಭೋಜನ ಇರುವುದಿಲ್ಲ. ಬೆಳಗ್ಗೆ 11:30ರ ತನಕ ಮಾತ್ರ ಫಲಾಹಾರ ಇರುತ್ತದೆ. ರಾತ್ರಿ 8 ಗಂಟೆಗೆ ಪೂಜೆಗಳು ನಡೆಯಲಿದ್ದು, ಭೋಜನವೂ ಇರುತ್ತದೆ. ಗ್ರಹಣ ಕಾಲದಲ್ಲಿ‌ ದೇಗುಲ ತೆರೆದಿರುತ್ತದೆ. ಗ್ರಹಣ ಮಧ್ಯ ಕಾಲದವರೆಗೆ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಮಧ್ಯಕಾಲ ಸಂಜೆ 4:29ಕ್ಕೆ ಗ್ರಹಣದ ವಿಶೇಷ ಪೂಜೆ ಇದೆ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.
10:29 AM, 8 Nov
ರಾಶಿಗಳ ಮೇಲೆ ಇದರ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ?
ಚಂದ್ರಗ್ರಹಣ 2022: ರಾಶಿಗಳ ಮೇಲೆ ಇದರ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ? ಮೇಷ, ವೃಷಭ, ಸಿಂಹ ಮತ್ತು ಮೀನ ರಾಶಿಯವರು ನಾಲ್ಕು ರಾಶಿಯ ಜನರು ಗ್ರಹಣದ ಸಮಯದಲ್ಲಿ ನಿರಂತರವಾಗಿ ಮಂತ್ರಗಳನ್ನು ಪಠಿಸುತ್ತಿರಬೇಕು. ಗ್ರಹಣದ ಪ್ರಭಾವವನ್ನು ಕಡಿಮೆ ಮಾಡಲು ಅವರು ಗ್ರಹಣದ ನಂತರವೂ ದಾನ ಮಾಡಬಹುದು. ಗ್ರಹಣ ಕಾಲದಲ್ಲಿ ಈ ಮಂತ್ರಗಳನ್ನು ಪಠಿಸುವುದರಿಂದ ಶಾಂತಿ ಸಿಗುತ್ತದೆ. ಓಂ ಗಣಪತಯೇ ನಮಃ, ಓಂ ವಕ್ರತುಂಡಾಯ ಹುಂ, ಓಂ ಹಸ್ತಿ ಪಿಶಾಚಿ ಲಿಖೇ ಸ್ವಾಹಾ, ಗಾಂ ಕ್ಷಿಪ್ರಸಾದನಾಯ ನಮಃ
10:22 AM, 8 Nov
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ದೇಗುಲಗಳ ಬಾಗಿಲು ಮುಚ್ಚಲಾಗಿದೆ. ಬೆಳಗ್ಗೆ 11;30ರಿಂದ ದೇಗುಲಗಳ ಗರ್ಭಗುಡಿ ಬಂದ್ ಮಾಡಲಾಗಿದ್ದು, ದೇಗುಲದ ಆವರಣದಲ್ಲಿ ಭಕ್ತಾದಿಗಳು ಜಪ ಮಾಡಿಕೊಳ್ಳಲು ಕೆಲವೆಡೆ ಅವಕಾಶ ನೀಡಲಾಗಿದೆ. ಈ ಚಿತ್ರದಲ್ಲಿ ಉತ್ತರಪ್ರದೇಶದ ಕಾನ್ಪುರದಲ್ಲಿ ದೇಗುಲದ ಬಾಗಿಲು ಬಂದ್ ಆಗಿದ್ದು, ಭಕ್ತರು ಬಾಗಿಲ ಮುಂದೆ ಆರತಿ ಬೆಳಗಿ, ತಮ್ಮ ಪ್ರಾರ್ಥನೆ ಸಲ್ಲಿಸಿದ್ದಾರೆ.
10:08 AM, 8 Nov
ಭಾರತದಲ್ಲಿ ನವೆಂಬರ್ 8 ರಂದು ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣದ ಹಂತಗಳು ಭಾಗಶಃ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 2.39 ಪೂರ್ಣ ಚಂದ್ರಗ್ರಹಣ ಆರಂಭ - ಮಧ್ಯಾಹ್ನ 3.46 ಗರಿಷ್ಠ ಪೂರ್ಣ ಚಂದ್ರಗ್ರಹಣ - 4:29 pm ಪೂರ್ಣ ಚಂದ್ರಗ್ರಹಣ ಕೊನೆಗೊಳ್ಳುತ್ತದೆ - ಸಂಜೆ 5:11
9:31 AM, 8 Nov
ನವೆಂಬರ್ 8ರ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಂದ್ರಗ್ರಹಣದ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ಚಂದ್ರಗ್ರಹಣದ ನಂತರ ದೇವಾಲಯದ ಗರ್ಭ ಗುಡಿಯ ಸ್ವಚ್ಛತೆ ನಡೆಯಲಿದೆ. ಈ ಬಳಿಕ ಗ್ರಹಣದ ನಂತರ ಅಭಿಷೇಕ ಮತ್ತು ಮಹಾ ಮಂಗಳಾರತಿ ನಡೆಯಲಿದ್ದು, ಈ ಸಮಯದಲ್ಲಿ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿದೆ.
6:22 AM, 8 Nov
ಈ ಚಂದ್ರಗ್ರಹಣವು ಆಸ್ಟ್ರೇಲಿಯಾ, ಏಷ್ಯಾ, ದಕ್ಷಿಣ ಮತ್ತು ಉತ್ತರ ಅಮೆರಿಕಾ, ಈಶಾನ್ಯ ಯುರೋಪ್, ಪೆಸಿಫಿಕ್ ಮಹಾಸಾಗರ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದ ಭಾಗಗಳಲ್ಲಿ ಗೋಚರಿಸುತ್ತದೆ.
6:15 AM, 8 Nov
ಮತ್ತೊಂದು ಪೂರ್ಣ ಚಂದ್ರಗ್ರಹಣ ನೋಡಲು 2025 ರವರೆಗೆ ಕಾಯಬೇಕು.
11:56 PM, 7 Nov
ಚಂದ್ರಗ್ರಹಣ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 8ರಂದು ಯಾವುದೇ ಪೂಜಾ ಕಾರ್ಯಕ್ರಮ ನೆರವೇರುವುದಿಲ್ಲ. ಅಲ್ಲದೇ ಭೋಜನ ಪ್ರಸಾದ ವಿತರಣೆ ಕೂಡ ಇರುವುದಿಲ್ಲ. ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತರಿಗೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9 ರಿಂದ 11:30ರವರೆಗೆ ಭಕ್ತರಿಗೆ ದೇವರ ದರ್ಶನ ಅವಕಾಶವನ್ನು ಕಲ್ಪಿಸಲಾಗಿದೆ. ಮಧ್ನಾಹ್ನ 2:39ರಿಂದ ಸಂಜೆ 6:19 ರ ತನಕ ಮತ್ತು ರಾತ್ರಿ 7:30 ರಿಂದ 9 ರತನಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
11:55 PM, 7 Nov
ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಪೂಜಾ, ದರ್ಶನ ಸಮಯ ಹಾಗೂ ಭೋಜನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಚಂದ್ರಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಲಿದೆ. ಮಧ್ಯಾಹ್ನ 1:30ರಿಂದ ರಾತ್ರಿ 7ರತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 1:30ರ ವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7 ಗಂಟೆಯ ನಂತರ ಭೋಜನ ವ್ಯವಸ್ಥೆ ಮುಂದುವರಿಯಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.
11:54 PM, 7 Nov
ಕೆಂಪು ಬಣ್ಣಕ್ಕೆ ತಿರುಗಲು ಕಾರಣ
ರೇಲೀ ಸ್ಕ್ಯಾಟರಿಂಗ್ ಎನ್ನುವುದು ಚಂದ್ರನು ಕೆಂಪು ಬಣ್ಣಕ್ಕೆ ತಿರುಗಲು ಕಾರಣವಾಗುವ ಒಂದು ವಿದ್ಯಮಾನವಾಗಿದೆ. "ಸೂರ್ಯಾಸ್ತದ ವೇಳೆ ಸೂರ್ಯ ಹೇಗೆ ಕೆಂಪಾಗುತ್ತಾನೋ ಅದೇ ವಿದ್ಯಮಾನ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ರೇಲೀ ಸ್ಕ್ಯಾಟರಿಂಗ್ ಎಂದು ಕರೆಯಲಾಗುತ್ತದೆ. ಚಂದ್ರ ಬೆಳಕು ಅಲೆಗಳಲ್ಲಿ ಚಲಿಸುತ್ತದೆ. ಬೆಳಕಿನ ವಿವಿಧ ಬಣ್ಣಗಳು ವಿಭಿನ್ನ ಭೌತಿಕ ಗುಣಲಕ್ಷಣಗಳನ್ನು ಹೊಂದಿವೆ'' ಎಂದು ನಾಸಾ ಹೇಳಿದೆ.

English summary
Lunar Eclipse 2022 Live Updates in Kannada: Check Chandra Grahan November 2022 date, timings in india, visibility, live streaming, latest news and highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X