ಉತ್ತರ ಪ್ರದೇಶದಲ್ಲಿ ಮುಂದುವರೆದ ಹೆಸರು ಬದಲಾವಣೆ ರಾಜಕೀಯ

ಲಕ್ನೋ, ಆಗಸ್ಟ್‌ 06: ಉತ್ತರ ಪ್ರದೇಶ ರಾಜ್ಯದಲ್ಲಿ ಹೆಸರು ಬದಲಾವಣೆ ರಾಜಕೀಯ ಮುಂದುವರೆದಿದೆ. ಇಂದು ಲಕ್ನೋದ ಮೊಘಲ್ ಸರಾಯ್ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಿ ದೀನದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಈ ಮುಂಚೆಯೂ ಹಲವು ಸ್ಥಳ, ಕಟ್ಟಡಗಳ ಮುಸ್ಲಿಂ ಹೆಸರುಗಳನ್ನು ಹಿಂದೂ ಹೆಸರುಗಳನ್ನಾಗಿ ಮರು ನಾಮಕರಣ ಮಾಡಲಾಗಿತ್ತು. ಅದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಆದರೆ ಈಗ ಮತ್ತೆ ಹೆಸರು ಬದಲಾವಣೆ ಮುಂದುವರೆದಿದೆ.

ಲಕ್ನೋದ ಮುಘಲ್ ಸರಾಯ್ ರೈಲ್ವೆ ನಿಲ್ದಾಣವನ್ನು ದೀನ್‌ದಯಾಳ್ ಉಪಾಧ್ಯಯ್ ರೈಲ್ವೆ ನಿಲ್ದಾಣ ಎಂದು ಮರುನಾಮಕಾರಣ ಮಾಡುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ಪ್ರಸ್ತಾವನೆಗೆ ಈಗಾಗಲೇ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ.

Lucknow railway station name changed by Yogi government

ರಾಜ್ಯಪಾಲರ ಒಪ್ಪಿಗೆ ದೊರೆತ ಬೆನ್ನಲ್ಲೆ ರೈಲ್ವೆ ನಿಲ್ದಾಣಕ್ಕೆ ಕೇಸರಿ ಬಣ್ಣ ಬಳಿಯಲಾಗಿದ್ದು, ಕೆಲವೇ ದಿನಗಳಲ್ಲಿ ಮರು ನಾಮಕರಣ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ.

ಬಿಜೆಪಿಯ ಮಾತೃ ಪಕ್ಷವಾದ ಭಾರತೀಯ ಜನಸಂಘದ ಸಂಸ್ಥಾಪಕ ಆಗಿರುವ ದೀನ ದಯಾಳ್ ಉಪಾಧ್ಯಾಯ ಅವರು ಇದೇ ರೈಲ್ವೆ ನಿಲ್ದಾಣದ ಬಳಿಯೇ ಶವವಾಗಿ ಪತ್ತೆಯಾಗಿದ್ದರು. ಹಾಗಾಗಿ ಈ ನಿಲ್ದಾಣಕ್ಕೆ ಅವರ ಹೆಸರು ಇಡಲಾಗಿದೆ. ಅವರೊಬ್ಬ ಕಠಿ ಆರ್‌ಎಸ್‌ಎಸ್‌ ಚಿಂತಕರಾಗಿದ್ದರು ಹಾಗಾಗಿ ವಿರೋಧ ಪಕ್ಷಗಳು ಈ ನಿರ್ಧಾರಕ್ಕೆ ವಿರೋಧವನ್ನೂ ವ್ಯಕ್ತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+