LPG Gas Cylinder: ಆಗಸ್ಟ್‌ 16ರ ಒಳಗೆ ಈ ಕೆಲಸ ಮಾಡದಿದ್ದರೆ ಗ್ಯಾಸ್ ಸಿಲಿಂಡರ್ ಸಿಗಲ್ಲ, ಸಬ್ಸಿಡಿಗೂ ಬ್ರೇಕ್!

LPG Gas Cylinder: ಇನ್ನು ಎರಡು ವಾರಗಳ ಅವಧಿಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಈ ಕೆಲಸವನ್ನು ನೀವು ಮಾಡದೆ ಇದ್ದರೆ, ನಿಮ್ಮಗೆ ಇನ್ಮುಂದೆ ಗ್ಯಾಸ್ ಸಿಲಿಂಡರ್ ಸಿಗದೆ ಇರಬಹುದು. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಲ್‌ಪಿಜಿ ಸಿಲಿಂಡರ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ಗೆ ಹೊಸ ಗಡುವು ನೀಡಲಾಗಿದೆ. ಆಧಾರ್ ಆಧಾರಿತ ಇ-ಕೆವೈಸಿ (e-KYC) ಪರಿಶೀಲನೆ ಇನ್ನೂ ಪೂರ್ಣಗೊಳಿಸದೆ ಇರುವ ದೇಶೀಯ ಎಲ್‌ಪಿಜಿ (LPG) ಗ್ರಾಹಕರಿಗೆ ಹೊಸ ಗಡುವು ನೀಡಲಾಗಿದೆ. ಎಲ್‌ಪಿಜಿ ಸಿಲಿಂಡರ್ ಗ್ಯಾಸ್‌ಗೆ ಸಂಬಂಧಿಸಿದಂತೆ ಇ - ಕೆವೈಸಿಯನ್ನು ಪೂರ್ಣಗೊಳಿಸಲು ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಸಾರ್ವಜನಿಕ ವಲಯದ ತೈಲ ಕಂಪನಿಗಳು ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಅಂತಿಮ SMS ಗಳನ್ನು ಕಳುಹಿಸಲಾಗುತ್ತಿದೆ.

LPG Gas Cylinder

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರು ಆಗಸ್ಟ್‌16ರ ಒಳಗೆ ಇ-ಕೆವೈಸಿಯನ್ನು ಪೂರ್ಣಗೊಳಿಸಲು ವಿಫಲರಾದವರು ಸರ್ಕಾರ ನಿಗದಿಪಡಿಸಿದ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಖರೀದಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಇ-ಕೆವೈಸಿ ಪೂರ್ಣಗೊಳ್ಳುವವರೆಗೆ ಎಲ್‌ಪಿಜಿ ಸಬ್ಸಡಿಯೂ ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

ಇನ್ಮುಂದೆ ಇ-ಕೆವೈಸಿ ಬಾಕಿ ಉಳಿಸಿಕೊಂಡಿರುವವರು ಸರ್ಕಾರ ನಿಗದಿಪಡಿಸಿದ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಖರೀದಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಇ-ಕೆವೈಸಿ ಪೂರ್ಣಗೊಳ್ಳುವವರೆಗೆ ಎಲ್‌ಪಿಜಿ ಸಬ್ಸಿಡಿಯೂ ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. Indane Cooking Gasನಿಂದ ಗ್ರಾಹಕರಿಗೆ ಕಳುಹಿಸಲಾದ ಮೆಸೇಜ್‌ನಲ್ಲಿ ದೇಶೀಯ ದರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಖರೀದಿಸುವುದನ್ನು ಮುಂದುವರಿಸಲು ಗ್ರಾಹಕರು ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕು ಎಂದು ಹೇಳಲಾಗಿದೆ. ಗಡುವಿನ ಅವಧಿಯ ಒಳಗೆ ಗ್ರಾಹಕರು ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸದೆ ಇದ್ದರೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

ಮೆಸೇಜ್‌ನಲ್ಲಿ ಏನಿದೆ ?

ಇನ್ನು ಇಂಡಿಯನ್ ಗ್ಯಾಸ್ ಸಿಲಿಂಡರ್‌ನಿಂದ ಕಳುಹಿಸಲಾಗಿದೆ ಎನ್ನಲಾದ ಮೆಸೇಜ್‌ನಲ್ಲಿ "ಪ್ರಿಯ ಗ್ರಾಹಕರೇ, ದೇಶೀಯ ದರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪಡೆಯಲು ನೀವು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಹಿಂದಿನ ಸೂಚನೆಗಳ ಹೊರತಾಗಿಯೂ, ನೀವು ಇಲ್ಲಿಯವರೆಗೆ ನಿಮ್ಮ ಇ-ಕೆವೈಸಿ ಮಾಡಿಸಿಲ್ಲ. ನೀವು ಇಂಡಿಯನ್ ಆಯಿಲ್ ಒನ್ ಅಪ್ಲಿಕೇಶನ್ ಮೂಲಕ ಅಥವಾ ನಿಮ್ಮ ವಿತರಕರಲ್ಲಿ ಅಥವಾ ವಿತರಣಾ ಸಿಬ್ಬಂದಿ ಮೂಲಕ ನಿಮ್ಮ ಇ-ಕೆವೈಸಿ ಮಾಡಿಸಿಕೊಳ್ಳಬಹುದು. 16.08.26ರ ಒಳಗೆ ಇ-ಕೆವೈಸಿ ಮಾಡದಿದ್ದರೆ ಇ-ಕೆವೈಸಿ ಪೂರ್ಣಗೊಳ್ಳುವವರೆಗೆ ನೀವು ದೇಶೀಯ ದರಗಳಲ್ಲಿ ಸಿಲಿಂಡರ್‌ಗಳಿಗೆ ಅನರ್ಹರಾಗುತ್ತೀರಿ. ದಯವಿಟ್ಟು ನಿಮ್ಮ ಇ-ಕೆವೈಸಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ" ಎಂದು ಮೆಸೇಜ್‌ನಲ್ಲಿ ತಿಳಿಸಲಾಗಿದೆ.

LPG e-KYC ಮಾಡಿಸುವುದು ಹೇಗೆ ?

ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದ ಇ - ಕೆವೈಸಿ ಮಾಡಿಸಿಕೊಳ್ಳಬಹುದು.

IndianOil ONE ಅಪ್ಲಿಕೇಶನ್ ಮೂಲಕ (ಅರ್ಹ ಗ್ರಾಹಕರಿಗೆ).

ನಿಮ್ಮ LPG ವಿತರಕರನ್ನು ಭೇಟಿ ಮಾಡುವ ಮೂಲಕ.

ಸಿಲಿಂಡರ್ ವಿತರಿಸುವ ವಿತರಣಾ ವ್ಯಕ್ತಿಯ ಮೂಲಕ.

ಕಡ್ಡಾಯ e-KYC ಜೊತೆಗೆ LPG ಗ್ರಾಹಕರಿಗೆ ಹಲವಾರು ಹೊಸ ನಿಯಮಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಸರ್ಕಾರ ಸಬ್ಸಿಡಿ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಅರ್ಹ ಫಲಾನುಭವಿಗಳು ಈಗ ಹಿಂದಿನ ಒಂಬತ್ತು ಸಿಲಿಂಡರ್‌ಗಳ ಬದಲಿಗೆ ವರ್ಷದಲ್ಲಿ ನಾಲ್ಕು LPG ಸಿಲಿಂಡರ್‌ಗಳ ಮೇಲೆ ಸಬ್ಸಿಡಿಯನ್ನು ಪಡೆಯಲಿದ್ದಾರೆ.

ಅನಗತ್ಯ ಮೆಸೇಜ್‌ಗಳಿಗೆ ರಿಪ್ಲೈ ಕೊಡಬೇಡಿ!

ಇನ್ನು ಇದೇ ಸಮಯದಲ್ಲಿ ತೈಲ ಕಂಪನಿಗಳು ಸೈಬರ್ ವಂಚನೆಯ ವಿರುದ್ಧ ಎಚ್ಚರದಿಂದಿರಲು ಗ್ರಾಹಕರಿಗೆ ಎಚ್ಚರಿಕೆ ನೀಡಿವೆ. ಗ್ರಾಹಕರು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದ ಹೊರತು ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳದ ಹೊರತು ಅವರ ಎಲ್‌ಪಿಜಿ ಸಂಪರ್ಕ ಕಡಿತಗೊಳ್ಳುತ್ತದೆ ಅಥವಾ ಅವರ ಸಬ್ಸಿಡಿ ನಿಲ್ಲುತ್ತದೆ ಎಂದು ಹೇಳುವ ನಕಲಿ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಬಹುದು ಎಂದೂ ಹೇಳಲಾಗಿದೆ.

ಗ್ರಾಹಕರು ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ಅಥವಾ ಆಧಾರ್ ವಿವರಗಳು, ಒಟಿಪಿಗಳು ಅಥವಾ ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಅವರು ಎಚ್ಚರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+