ವಧುವಿಗೆ 12ನೇ ತರಗತಿಯಲ್ಲಿ ಕಡಿಮೆ ಅಂಕ, ಮದುವೆಯನ್ನೇ ಮುರಿದುಕೊಂಡ ವರ

12ನೇ ತರಗತಿಯ ಅಂಕಪಟ್ಟಿಯಲ್ಲಿ ಹುಡುಗಿ ಕಡಿಮೆ ಅಂಕ ಪಡೆದಿದ್ದಾಳೆ ಎಂಬ ಕಾರಣ ಇಟ್ಟುಕೊಂಡು ವರನ ಮನೆಯವರು ಸಂಬಂಧವನ್ನು ಮುರಿದುಕೊಂಡಿದ್ದಾರೆ

ಲಕ್ನೋ, ಮಾರ್ಚ್‌ 15: ವಧುವಿನ ಕುಟುಂಬವು ವರದಕ್ಷಿಣೆ ಬೇಡಿಕೆಯನ್ನು ನೀಡಲು ಸಾಧ್ಯವಾಗದಿದ್ದರೆ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸುವ ಪ್ರಕರಣಗಳನ್ನು ನಾವು ಆಗಾಗ್ಗೆ ಕೇಳಿದ್ದೇವೆ. ಇಂತಹ ಪ್ರಕರಣಗಳು ಭಾರತದಲ್ಲಿ ಹೊಸದೇನಲ್ಲ. ಆದರೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ವರನೊಬ್ಬ 12ನೇ ತರಗತಿಯಲ್ಲಿ ವಧುವಿನ ಕಡಿಮೆ ಅಂಕದ ಕಾರಣ ತನ್ನ ಮದುವೆಯನ್ನು ರದ್ದುಗೊಳಿಸಿರುವ ಘಟನೆ ನಡೆದಿದೆ.

ಕನೌಜ್‌ನ ತಿರ್ವಾ ಕೊಟ್ವಾಲಿ ಪ್ರದೇಶದಲ್ಲಿ ಇತ್ತೀಚೆಗೆ ಈ ಅಪರೂಪದ ಘಟನೆ ನಡೆದಿದೆ. ಆದರೆ ತಮ್ಮ ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ವಧುವಿನ ಕುಟುಂಬ ಆರೋಪಿಸಿದೆ ಎಂದು ಅಮರುಜಾಲ ವರದಿ ಮಾಡಿದೆ. 'ದೇವ ಭಾರೈ' ವಿಧಿ ವಿಧಾನ ನಡೆದರೂ ಮದುವೆಯನ್ನು ರದ್ದುಗೊಳಿಸಲಾಗಿತ್ತು.

Low marks in class 12 for bride, Groom broke his marriage

12ನೇ ತರಗತಿಯ ಅಂಕಪಟ್ಟಿಯಲ್ಲಿ ಹುಡುಗಿ ಕಡಿಮೆ ಅಂಕ ಪಡೆದಿದ್ದಾಳೆ ಎಂಬ ಕಾರಣ ಇಟ್ಟುಕೊಂಡು ವರನ ಮನೆಯವರು ಸಂಬಂಧವನ್ನು ಮುರಿಯಲು ಯತ್ನಿಸಿದ್ದಾರೆ ಎಂದು ವಧುವಿನ ತಂದೆ ಆರೋಪಿಸಿದ್ದಾರೆ. ಯುವತಿಯ ತಂದೆ ವರ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ವಧುವಿನ ತಂದೆ ತನ್ನ ಮಗಳು ಸೋನಿಯ ಮದುವೆಯನ್ನು ಬಾಗನ್ವಾ ಗ್ರಾಮದ ರಾಮಶಂಕರ್ ಅವರ ಮಗ ಸೋನು ಜೊತೆ ನಿಶ್ಚಯಿಸಿದ್ದರು. ಡಿಸೆಂಬರ್ 4, 2022 ರಂದು 'ಗೋಧ್ ಭಾರೈ' ಸಮಾರಂಭವನ್ನು ನಡೆಸಲಾಯಿತು. ಸಮಾರಂಭದಲ್ಲಿ ವಧುವಿನ ತಂದೆ 60,000 ರೂಪಾಯಿಗಳನ್ನು ಖರ್ಚು ಮಾಡಿದರು ಮತ್ತು ವರನಿಗೆ 15,000 ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು.

ಆದರೆ ದಿನದ ನಂತರ ವರನ ಮನೆಯವರು ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಹೆಚ್ಚಿನ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ವಧುವಿನ ತಂದೆ ವರನಿಗೆ ತಿಳಿಸಿದ್ದರಿಂದ, ಹುಡುಗಿಯ ಕಳಪೆ ಅಂಕಗಳ ನೆಪದಲ್ಲಿ ವರನು ಮದುವೆಯನ್ನು ಬೇಡವೆಂದನು. ಈಗ ಪೊಲೀಸರು ಈಗ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+