ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಟರಿ ಹಗರಣ : ಕರ್ನಾಟಕಕ್ಕೂ ಬೆಂಗಾಲಕ್ಕೂ 4,500 ಕೋಟಿ ರು ಲಿಂಕ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅ.01: ಕರ್ನಾಟಕದ ಬಹುಕೋಟಿ ಲಾಟರಿ ಹಗರಣದ ತನಿಖೆ ಸಿಬಿಐ ಮುಂದುವರೆಸಿದೆ. ಇತ್ತೀಚೆಗೆ ಪಶ್ಚಿಮ ಬಂಗಾಲದಲ್ಲಿ ಇತ್ತೀಚೆಗೆ ಸಿಕ್ಕ 70 ಕೋಟಿ ರು ಮೊತ್ತದ ಜಾಡು ಹಿಡಿದು ಹೊರಟ ಸಿಬಿಐಗೆ ಈ ಹಗರಣದ ಮೊತ್ತ 4,500 ಕೋಟಿ ರು ಮೌಲ್ಯ ದಾಟುತ್ತಿದೆ ಎಂದು ತಿಳಿದು ಬಂದಿದೆ.

ತಮಿಳುನಾಡು ಮೂಲದ ಸ್ಯಾಂಟಿಯಾಗೊ ಮಾರ್ಟಿನ್ ದೇಶದ ಇತರೆಡೆ ನಡೆದಿರುವ ಲಾಟರಿ ಹಗರಣಗಳನ್ನು ನಿಯಂತ್ರಿಸುತ್ತಿದ್ದಾನೆ ಎಂದು ಮಾರ್ಟಿನ್ ನ ಬಲಗೈ ಬಂಟ ಎಸ್ ನಾಗರಾಜನ್ ಬಾಯ್ಬಿಟ್ಟಿದ್ದಾನೆ. [ಲಾಟರಿ ಸಾಮ್ರಾಜ್ಯಕ್ಕೆ ಈತನೇ ಕಿಂಗ್]

ಮೊದಲಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಸಿಕ್ಕಿದ್ದುಯ್ 30 ಕೋಟಿ ರು ಎನ್ನಲಾಗಿತ್ತು, ಅದರೆ, ನಂತರ 70 ಕೋಟಿ ರು ಲಭ್ಯವಾಯಿತು ಎಂದು ಜಂಟಿ ಕಾರ್ಯಾಚರಣೆ ನಂತರ ಜಾರಿ ನಿರ್ದೇಶನಾಲಯ ಪ್ರಕಟಿಸಿತ್ತು. ದಾಳಿ ವೇಳೆ ಸಿಕ್ಕ ಮೊತ್ತಕ್ಕೂ ಕರ್ನಾಟಕದ ಲಾಟರಿ ಹಗರಣಕ್ಕೂ ಲಿಂಕ್ ಇರುವುದನ್ನು ನಾಗರಾಜನ್ ಒಪ್ಪಿಕೊಂಡಿದ್ದಾನೆ.

Santiago Martin's aide spills the beans

ಕಿಂಗ್ ಪಿನ್ ಮಾರ್ಟಿನ್ ಬಳಿ ಹಲವಾರು ದೇಶಗಳ ನಕಲಿ ಪಾಸ್ ಪೋರ್ಟ್ ಗಳಿದ್ದು, ಸೌದಿ ಅರೇಬಿಯಾ ಹಾಗೂ ಯುಎಇ ಗಳಿಗೆ ಹೆಚ್ಚು ಬಾರಿ ಹೋಗಿ ಬಂದು ಮಾಡುತ್ತಾನೆ. ಸೌದಿಯಲ್ಲಿ ಈ ಹಗರಣದ ಮೊತ್ತವನ್ನು ಶೇಖರಿಸಲಾಗಿದೆ. ಇದಕ್ಕೆ ಮಧ್ಯವರ್ತಿಗಳಾಗಿ ಪಶ್ಚಿಮ ಬಂಗಾಲದ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಎಂದು ನಾಗರಾಜನ್ ಹೇಳಿದ್ದಾನೆ.[ಲಾಟರಿ ಕಿಂಗ್ ಪಿನ್ ಕೈ ಹಿಡಿದ ಪುಢಾರಿಗಳ ಗೆಳೆತನ]

2015ರ ಮೇ 26ರಂದು ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದೆ. ಕಿಂಗ್ ಪಿನ್ ಮಾರ್ಟಿನ್ ಅಲ್ಲದೆ ಪಾರಿರಾಜನ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದೆ. ಪಾರಿರಾಜನ್ ನ್ಯಾಯಾಂಗ ಬಂಧನದಲ್ಲಿದ್ದರೆ, ಮಾರ್ಟಿನ್ ಸುಳಿವಿಲ್ಲ, ತನಿಖೆ ಮುಂದುವರೆದಿದೆ.

ಸುಮಾರು 7,000 ಕೋಟಿ ರು ಗೂ ಅಧಿಕ ಮೌಲ್ಯ ಲಾಟರಿ ಹಗರಣದಲ್ಲಿ ಸಿಕ್ಕಿಂ ಸರ್ಕಾರಕ್ಕೆ ಸುಮಾರು 4,500 ಕೋಟಿ ರು ನಷ್ಟವಾಗಿದೆ ಎಂದು ಸಿಬಿಐ ಹೇಳಿದೆ. ಕರ್ನಾಟಕದ ಸಿಬಿಐ ತನಿಖೆ ಈಗ ಮತ್ತೊಮ್ಮೆ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳ ಲಾಟರಿ ದಂಧೆ ಕಿಂಗ್ ಪಿನ್ ಗಳತ್ತ ಕೂಡಾ ಕ್ಷ ಕಿರಣ ಬೀರುವ ಸಾಧ್ಯತೆ ನಿಚ್ಚಳವಾಗಿದೆ.

English summary
Two key points have emerged following the mammoth raid at West Bengal in which Rs 70 crore in cash was seized. While this money is directly linked to the lottery scam, the officials are also checking the extent of the role played by the underworld.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X