ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೇ ಅಥವಾ ಅಂಜನೇರಿಯೇ? ಮೇ 31ಕ್ಕೆ ಸಿಗಲಿದೆ ಉತ್ತರ
ನಾಸಿಕ್, ಮೇ 29: ಅಂಜನಾದ್ರಿ ಪುತ್ರ, ವಾಯು ಪುತ್ರ, ಶ್ರೀ ಹನುಮಾನ್ ಜನ್ಮಸ್ಥಳ ಯಾವುದು ಎನ್ನುವುದರ ಬಗ್ಗೆ ಗೊಂದಲ ಇನ್ನೂ ಮುಂದುವರಿದಿದೆ. ಈ ಹಿನ್ನೆಲೆ ಹನುಮಾನ್ ಜನ್ಮಸ್ಥಳದ ಬಗ್ಗೆ ಚರ್ಚಿಸಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೇ 31ರಂದು ಧರ್ಮ ಸಂಸತ್ತನ್ನು ಆಯೋಜಿಸಲಾಗಿದೆ.
ಮಹಂತ್ ಶ್ರೀ ಮಂಡಲಾಚಾರ್ಯ ಪೀಠಾಧೀಶ್ವರ ಸ್ವಾಮಿ ಅನಿಕೇತ್ ಶಾಸ್ತ್ರಿ ದೇಶಪಾಂಡೆ ಮಹಾರಾಜ್ ಅವರು ಹನುಮಾನ್ ಜನ್ಮಸ್ಥಳದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ದೇಶಾದ್ಯಂತದ ಹಿಂದೂ ಧರ್ಮೀಯರನ್ನು ಆಹ್ವಾನ ನೀಡಿದ್ದಾರೆ. ಶ್ರೀಗಳು ಸಭೆ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು.
ಹನುಮಂತನು ಹುಟ್ಟಿದ್ದು ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂಧೆಯಲ್ಲಿ ಹೊರತು ನಾಸಿಕ್‌ನ ಆಂಜನೇರಿಯಲ್ಲಿ ಅಲ್ಲ ಎಂದು ಕರ್ನಾಟಕದ ದಾರ್ಶನಿಕರು ಹೇಳಿದ್ದಾರೆ. ರಾಮಾಯಣವನ್ನು ಉಲ್ಲೇಖಿಸಿ, ಮಹಂತ್ ಗೋವಿಂದ್ ದಾಸ್ ಅವರು ಹಿಂದೂ ದೇವತೆ ಕಿಷ್ಕಿಂಧಾದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ.

ಅಂಜನೇರಿಯಲ್ಲಿ ಜನಿಸಿರುವ ಬಗ್ಗೆ ಉಲ್ಲೇಖವಿಲ್ಲ:
ಶ್ರೀ ಹನುಮಾನ್ ಮಹಾರಾಷ್ಟ್ರದ ಅಂಜನೇರಿಯಲ್ಲಿ ಜನಿಸಿದರು ಎಂದು ಹೇಳುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ಹಾಗೆಂದು ಎಲ್ಲಿಯೂ ಬರೆದಿಲ್ಲ ಎಂದು ದಾರ್ಶನಿಕರು ಹೇಳಿದ್ದಾರೆ. ಈಗಾಗಲೇ ಅವರು ನಾಸಿಕ್‌ನ ತ್ರಿಯಂಬಕೇಶ್ವರವನ್ನು ತಲುಪಿದ್ದು, ಅಲ್ಲಿ ದಾರ್ಶನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನಾಸಿಕ್ ಪೊಲೀಸರು ಸಂಘಟಕರನ್ನು ಕೇಳಿಕೊಂಡಿದ್ದಾರೆ.

ವಿವಾದದ ಕಿಡಿ ಹೊತ್ತಿಸಿದ್ದ ಟಿಟಿಡಿ
ಕಳೆದ ವರ್ಷ ತಿರುಪತಿ ತಿರುಮಲ ದೇವಸ್ಥಾನವು 16ನೇ ಶತಮಾನದಲ್ಲಿ ದಾಖಲಾಗಿರುವ ಸಾಹಿತ್ಯವನ್ನು ಆಧಾರವಾಗಿ ಇಟ್ಟುಕೊಂಡು ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿ ಎಂದು ಹೇಳಿ ಫೆಬ್ರವರಿ 16ರಂದು ಆಕಾಶ ಗಂಗಾ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ಹಾಗೂ ರಾಜ್ಯದ ಹನುಮನ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಭಾಗದ ಹಂಪಿಯಲ್ಲಿರುವ ಸೀತೆ ಸೆರಗು, ಕಿಷ್ಕಿಂಧೆ ಹಾಗೂ ಪಂಪಾ ಸರೋವರ ಬಳಿಯಲ್ಲಿನ ಶಬರಿ ಗುಹೆ ಹೀಗೆ ಹಲವಾರು ಕುರುಹುಗಳನ್ನು ಈ ಪ್ರದೇಶ ಹೊಂದಿರುವದರಿಂದ ಇಲ್ಲಿಯೇ ಆಂಜನೇಯ ಜನಿಸಿದ್ದಾನೆ ಎಂದು ಹೇಳಿದ್ದರು.

ಆಂಜನೇಯನ ಜನ್ಮಸ್ಥಳವೇ ಅಂಜನಾದ್ರಿ
ಕಳೆದ ಕ್ರಿಸ್ತ ಪೂರ್ವ 5000 ವರ್ಷಗಳ ಹಿಂದಿನ ರಾಮಾಯಣದಲ್ಲಿಯೂ ಕಿಷ್ಕಿಂಧಾ ಕಾಂಡ ಹಾಗೂ ಸುಂದರ ಕಾಂಡದಲ್ಲಿ ಈ ಭಾಗದಲ್ಲಿರುವ ಕುರುಹುಗಳನ್ನು ಹೊಲುವಂತಿರುವ ಇದೇ ಭಾಗ ಕಿಷ್ಕಿಂಧೆ ಎಂದು ಹೇಳಿದೆ. ಅಲ್ಲದೆ ಬೇರೆ ಬೇರೆ ಸಾಹಿತ್ಯ, ಶಾಸನಗಳಲ್ಲಿಯೂ ಈ ಕುರಿತು ದಾಖಲಾಗಿದೆ. ಇಲ್ಲಿನ ಇತಿಹಾಸ ತಜ್ಞರು ಸಹ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಹೇಳುತ್ತಿದ್ದಾರೆ.
ಮುಂಬರುವ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, 13 ಎಕರೆ ಪ್ರದೇಶದಲ್ಲಿ ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಅನುದಾನ ಘೋಷಿಸುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಎಂದು ಅಧಿಕೃತವಾಗಿ ಘೋಷಣೆ ಮಾಡಿದರೆ, ಹನುಮನ ಭಕ್ತರು ಹರ್ಷಗೊಳ್ಳಲಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಟಿಟಿಡಿ ಯಾವ ರೀತಿ ವಿವಾದ ಶುರು ಮಾಡಲಿದೆ ಕಾದು ನೋಡಬೇಕಿದೆ.

ಕರ್ನಾಟಕ ಸರ್ಕಾರದಿಂದ ಅಧಿಕೃತ ಘೋಷಣೆ ಬಾಕಿ
ಕರ್ನಾಟಕ ಸರ್ಕಾರ ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಎಂದು ಘೋಷಣೆ ಮಾಡಲು ಮುಂದಾಗಿದೆ. ಬಜೆಟ್‌ನಲ್ಲಿ ರಾಮ ಮಂದಿರದ ಮಾದರಿಯಲ್ಲೇ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಹಣ ಮೀಸಲಿಡುವುದಕ್ಕೂ ಮುಂದಾಗಿದೆ. ಅದಕ್ಕಾಗಿ ಮುಜರಾಯಿ ಇಲಾಖೆಯು ಸಹ ಆಂಜನೇಯನ ಜನ್ಮಸ್ಥಳ ಕೊಪ್ಪಳ ಜಿಲ್ಲೆ ಎಂಬುವುದನ್ನು ದಾಖಲೆಗಳನ್ನು ಸಂಗ್ರಹಿಸಿ ಕಳುಹಿಸಲು ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಮುಂಬರುವ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, 13 ಎಕರೆ ಪ್ರದೇಶದಲ್ಲಿ ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಅನುದಾನ ಘೋಷಿಸುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಎಂದು ಅಧಿಕೃತವಾಗಿ ಘೋಷಣೆ ಮಾಡಿದರೆ, ಹನುಮನ ಭಕ್ತರು ಹರ್ಷಗೊಳ್ಳಲಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಟಿಟಿಡಿ ಯಾವ ರೀತಿ ವಿವಾದ ಶುರು ಮಾಡಲಿದೆ ಕಾದು ನೋಡಬೇಕಿದೆ.












Click it and Unblock the Notifications