ರಾಮ್ ರಹೀಮ್ ಪುತ್ರಿ ಹನಿಪ್ರೀತ್ ಸಿಂಗ್ ವಿರುದ್ಧ ಲುಕ್‌ಔಟ್ ನೋಟಿಸ್
ಚಂಡೀಗಢ, ಸೆಪ್ಟೆಂಬರ್ 1: ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ವಿರುದ್ಧ ಹರಿಯಾಣ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದ ಶುಕ್ರವಾರ ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿತ್ತು. ಈ ಸಂದರ್ಭ ಬಂಧನದಿಂದ ತಪ್ಪಿಸಿಕೊಳ್ಳಲು ಹನಿಪ್ರೀತ್ ಸಿಂಗ್ ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆದರೆ ಹನಿಪ್ರೀತ್ ತಲೆ ಮರೆಸಿಕೊಂಡಿದ್ದು ಇದೀಗ ಅವರ ಪತ್ತೆಗೆ ಹರಿಯಾಣ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಹನಿಪ್ರೀತ್ ವಿರುದ್ಧ ದೇಶದ್ರೋಹ ಹಾಗೂ ಸಂಚು ಪ್ರಕರಣಗಳನ್ನು ಹರಿಯಾಣ ಪೊಲೀಸರು ದಾಖಲಿಸಿದ್ದಾರೆ.

ಇನ್ನು ಗುರ್ಮೀತ್ ನನ್ನು ಪಂಚಕುಲಾದಿಂದ ರೋಹ್ಟಕ್‌ಗೆ ಹೆಲಿಕಾಪ್ಟರ್‌ನಲ್ಲಿ ಹನಿಪ್ರೀತ್ ಕೂಡ ಜತೆಗಿದ್ದರು. ಆದರೆ ಆ ನಂತರ ಅವರು ನಾಪತ್ತೆಯಾಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಗುರ್ಮೀತ್ ಜತೆ ಪ್ರಯಾಣ ಮಾಡಲು ಹನಿಪ್ರೀತ್ ಗೆ ಅವಕಾಶ ಕೊಟ್ಟ ಕುರಿತೂ ಹರಿಯಾಣ ಸರ್ಕಾರ ತನಿಖೆ ನಡೆಸುತ್ತಿದೆ.












Click it and Unblock the Notifications