ಆರುಷಿ ಹತ್ಯೆ ಸಿನಿಮಾ ಕಥೆಗೆ 5 ಕೋಟಿ ರೂ!

london-producer-offers-to-pay-rs-5-cr-to-film-on-aarushi-murder-case
ಗಾಜಿಯಾಬಾದ್, ನ. 30: ಲಂಡನ್ ಮೂಲ ಚಿತ್ರ ತಯಾರಕರೊಬ್ಬರು ದಾಸ್ನ ಜೈಲಿಗೆ ತೆರಳಿ, ಜೈಲು ಹಕ್ಕಿಗಳಾಗಿರುವ ವೈದ್ಯ ದಂಪತಿಗಳಾದ ರಾಜೇಶ್ ತಲವಾರ್ ಮತ್ತು ನೂಪರ್ ಅವರನ್ನು ಭೇಟಿಯಾಗಿದ್ದಾರೆ. ಅದೇ ವೇಳೆ ಹೆತ್ತವರಿಂದಲೇ (ಅಂದರೆ ಸದರಿ ವೈದ್ಯ ದಂಪತಿಯಿಂದ) ಹತಳಾದ ಹದಿಹರಯದ ಬಾಲಕಿ ಆರುಷಿಯ ಕಥೆಗಾಗಿ ಭಾರಿ ಮೊತ್ತವನ್ನು ನೀಡಲು ಮುಂದಾಗಿದ್ದಾರೆ.

ಕ್ಲಿಫ್ ಎಫ್ ರುನ್ಯಾರ್ಡ್ ಎಂಬ ಹೆಚ್ಚು ಪರಿಚಿತರಲ್ಲದ ಲಂಡನ್ನಿನ ಸಿನಿ ನಿರ್ಮಾಪಕ ತಲವಾರ್ ದಂಪತಿಯನ್ನು ಭೇಟಿ ಮಾಡಿ, ಹತ್ಯೆಗೀಡಾದ ಅವರ ಮಗಳ ಕುರಿತು ಸಿನಿಮಾ ಮಾಡಲು ಮತ್ತು ಕಥೆಯೊಂದನ್ನು ಬರೆಯಲು ತಮಗೆ ಹಕ್ಕು ನೀಡಿದ್ದೇ ಆದರೆ ಪ್ರತಿಯಾಗಿ ಅವರಿಗೆ ಬರೋಬ್ಬರಿ 5 ಕೋಟಿ ರೂ ಗೌರವಧನ ನೀಡುವುದಾಗಿ ಜೈಲು ಅಧಿಕಾರಿ ವೀರೇಶ್ ರಾಜಶರ್ಮಾ ಬಳಿ ಹೇಳಿ ಕೊಂಡಿದ್ದಾರೆ.

ಇತ್ತ ನಿರ್ಮಾಪಕ ರುನ್ಯಾರ್ಡ್ ವಿಚಿತ್ರ ಬೇಡಿಕೆಯಿಡುತ್ತಿದ್ದರೆ ಅತ್ತ ತಲ್ವಾರ್ ದಂಪತಿಗಳು ಜೈಲಿನೊಳಗೆ ಬಂಧಿಯಾಗಿರುವ ನಿಥಾರಿ ಸರಣಿ ಹತ್ಯೆಕೋರ ಮೊನಿಂದರ್ ಸಿಂಗ್ ಪಾಂಧೇರ್ ಸೇರಿದಂತೆ ನೂರಾರು ಜನರ ದಂತ ಚಿಕಿತ್ಸೆಯಲ್ಲಿ ತೊಡಗಿದ್ದರು.

2008ರ ಮೇನಲ್ಲಿ ತಮ್ಮ 14 ವರ್ಷದ ಪುತ್ರಿ ಆರುಷಿ ಮತ್ತು 45 ವರ್ಷದ ಮನೆಗೆಲಸದ ಹೇಮರಾಜ್ ನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಗಾಜಿಯಾಬಾದಿನ ಸಿಬಿಐ ಕೋರ್ಟ್ ವೈದ್ಯ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಜೈಲಿಗಟ್ಟಿದೆ.

14 ದಿನಗಳ ನಂತವಷ್ಟೇ : ಆದರೆ ದುಬಾರಿ ಸಿನಿ ನಿರ್ಮಾಪಕ ಕ್ಲಿಫ್ ಎಫ್ ರುನ್ಯಾರ್ಡ್ ಗೆ ಮುಖತಃ ತಲವಾರ್ ದಂಪತಿಯನ್ನು ಭೇಟಿ ಮಾಡಲು ಅವಕಾಶ ಪ್ರಾಪ್ತಿಯಾಗಿಲ್ಲ. ಆದರೆ ಇಬ್ಬರೂ ಸಜಾ ಕೈದಿಗಳನ್ನು ಈಗಾಗಲೇ ಮೂವರು ( ನೂಪುರ್ ಅವರ ಸೋದರ ಸಮೀರ್, ಸೋದರಿ ರಿತು ಹಾಗೂ ಮತ್ತೊಬ್ಬ ಸಂಬಂಧಿ ಶ್ರೀಲೇಖಾ) ಭೇಟಿ ಮಾಡಿದ್ದು, ಇನ್ನು 14 ದಿನಗಳ ನಂತವಷ್ಟೇ ರುನ್ಯಾರ್ಡ್ ಗೆ ಅವರನ್ನು ಭೇಟಿ ಮಾಡಲು ಅವಕಾಶ ಸಿಗುವುದು. ಏಕೆಂದರೆ 14 ದಿನಗಳ ಅಂತರದಲ್ಲಿ ಸಜಾ ಕೈದಿಯನ್ನು ಮೂವರು ಮಾತ್ರವೇ ಭೇಟಿ ಮಾಡಬಹುದಾಗಿದೆ.

ಈ ಮಧ್ಯೆ, ತಲವಾರ್ ದಂಪತಿಯನ್ನು ಆಗ್ರಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಏಕೆಂದರೆ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಯಾವುದೇ ನ್ಯಾಯಾಲಯವು ಅಪರಾಧಿಗೆ 7 ವರ್ಷಕ್ಕಿಂತ ಹೆಚ್ಚು ಜೀವಾವಧಿ ಶಿಕ್ಷೆ ವಿಧಿಸಿದರೆ ಅಂತಹ ಅಪರಾಧಿಯನ್ನು ಆಗ್ರಾ ಕೇಂದ್ರ ಕಾರಾಗೃಹದಲ್ಲಿರಿಸಬೇಕಾಗುತ್ತದೆ.

ಈ ಮಧ್ಯೆ, ಆರುಷಿ ಮತ್ತು ಆಕೆಯ ಪ್ರಿಯಕರ 45 ವರ್ಷದ ಹೇಮರಾಜ್ ಹತ್ಯಾ ಪ್ರಸಂಗವನ್ನು ' ರಹಸ್ಯ ' ಸಿನಿಮಾದಲ್ಲಿ ಬಿಂಬಿಸುವುದಾಗಿ ಬಾಲಿವುಡ್ ನಿರ್ಮಾಪಕ ಮನೀಷ್ ಗುಪ್ತಾ ಹೇಳಿಕೊಂಡಿದ್ದಾರೆ. 'ರಹಸ್ಯ' ಚಿತ್ರದಲ್ಲಿ ಬಾಲ ಕಲಾವಿದೆ ಸಾಕ್ಷಿ ಸೇಮ್, ಆರುಷಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಖ್ಯಾತ ನಟ ಆಶೀಷ್ ವಿದ್ಯಾರ್ಥಿ ಮತ್ತು ತೀಸ್ಕಾ ಛೋಪ್ರಾ ದುರಂತ ದಂಪತಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+