ನವದೆಹಲಿ, ಏಪ್ರಿಲ್ 11: 17ನೇ ಲೋಕಸಭೆ ಚುನಾವಣೆ ಗುರುವಾರ(ಏ.11) ದಿಂದ ಮತದಾನ ಆರಂಭವಾಗಿದ್ದು, ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. 20 ರಾಜ್ಯಗಳ 1279 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯನ್ನು ಸೇರಲಿದೆ. ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ.
ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಉತ್ತರಾಖಂಡ್, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಮಣಿಪುರ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಅಂದರೆ 20 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ.
ಮಾರ್ಚ್ 10 ರಂದು ಲೋಕಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿತ್ತು. ಅಂದಿನಿಂದಲೂ ನೀತಿಸಂಹಿತೆ ಜಾರಿಯಲ್ಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಏಪ್ರಿಲ್ 11 ರಿಂದ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
17 ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ಲೈವ್ ಬ್ಲಾಗ್ ಮೂಲಕ ನೀಡಲಿದೆ.
Apr 11, 2019, 5:01 pm IST
ನೊಯ್ಡಾದಲ್ಲಿ ಕೆಟ್ಟುನಿಂತ ಇವಿಎಂ, ಮ್ಯಾಜಿಸ್ಟ್ರೇಟ್ ಹೊಸ ಮತಯಂತ್ರದೊಂದಿಗೆ ಆಗಮನ
Maharashtra: Chief Minister Devendra Fadnavis and his wife Amruta Fadnavis cast their vote at a polling station in Nagpur earlier today. #IndiaElections2019pic.twitter.com/7JWLHuPBjv
1 ಗಂಟೆಯವರೆಗೆ ಉತ್ತರಾಖಂಡ್ ನಲ್ಲಿ ಶೇ.41.27ರಷ್ಟು ಮತದಾನ.
Apr 11, 2019, 1:28 pm IST
"ಬುರ್ಖಾ ಧರಿಸಿ ಅಥವಾ ಮುಖಕ್ಕೆ ದುಪ್ಪಟ್ಟ ಮುಚ್ಚಿಕೊಂಡು ಬರುವ ಮಹಿಳೆಯರನ್ನು ಮಹಿಳಾ ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿಯೇ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ."
ಬುರ್ಖಾ ಹಾಕಿಕೊಂಡ ಮಹಿಳೆಯರನ್ನು ತಪಾಸಣೆ ಮಾಡದೆ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಬಿಜೆಪಿ ಮುಖಂಡ ಸಂಜಿವ್ ಬಾಲ್ಯನ್ ಆರೋಪಕ್ಕೆ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಬಿ ಆರ್ ತಿವಾರಿ ಪ್ರತಿಕ್ರಿಯೆ.
Apr 11, 2019, 1:14 pm IST
ಹೈದರಾಬಾದ್: ಟಾಲಿವುಡ್ ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ನಾನಕ್ರಂಗುಡದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು.
Hyderabad: Tollywood actors Naga Chaitanya and Samantha arrive at a polling station in Nanakramguda, Gachibowli to cast their vote for #IndiaElections2019pic.twitter.com/oFLiit6CTj
ಟಿಡಿಪಿಯ ಭಾಸ್ಕರ ರೆಡ್ಡಿ ಮತ್ತು ವೈಎಸ್ ಆರ್ ಸಿಪಿಯ ಪುಲ್ಲಾರೆಡ್ಡಿ ಅವರೇ ಮೃತ ದುರ್ದೈವಿಗಳು
Apr 11, 2019, 1:06 pm IST
ಅನಂತಪುರ ಜಿಲ್ಲೆಯ ಪೀಠಾಪುರ ಎಂಬಲ್ಲಿ ಟಿಡಿಪಿ ಮತ್ತು ವೈಎಸ್ ಆರ್ ಸಿಪಿ ಪಕ್ಷದ ಕಾರ್ಯಕರ್ತರ ನಡುವೆ ಕ್ಷುಲ್ಲಕ ವಿಷಯಕ್ಕಾಗಿ ಗಲಾಟೆ ಆರಂಭವಾಗಿತ್ತು. ಅದೇ ವಿಕೋಪಕ್ಕೆ ತಿರುಗಿದ ಕಾರಣ ಭಾಸ್ಕರ ರೆಡ್ಡಿ ಮತ್ತು ಪುಲ್ಲಾರೆಡ್ಡಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲ್ಲಲಾಗಿದೆ.
Apr 11, 2019, 12:41 pm IST
ಆಂಧ್ರಪ್ರದೇಶದ ಬಂದರ್ಲಾಪಳ್ಳಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಮಾರಾಮಾರಿ
#WATCH: Clash broke out between YSRCP and TDP workers in Puthalapattu Constituency in Bandarlapalli, Andhra Pradesh. Police resorted to lathi-charge pic.twitter.com/q7vxRIR0R8
ಮಹಾರಾಷ್ಟ್ರದ ಗಡ್ಚಿರೋಲಿಯ ಇಟಾಪಳ್ಳಿ ಎಂಬಲ್ಲಿಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟ. ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
Apr 11, 2019, 12:16 pm IST
ನಾನು ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂಬ ನಂಬಿಕೆ ಇದೆ: ನಿತಿನ್ ಗಡ್ಕರಿ, ನಾಗ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
Apr 11, 2019, 12:11 pm IST
"ನಾವು ಈ ರೇಸ್ ನಲ್ಲಿ ಗೆಲ್ಲುತ್ತೇವೆ. ನಾನು ಆಶಾವಾದಿಯಾಗಿದ್ದೇನೆ"- ಮತದಾನದ ನಂತರ ತೆಲಂಗಾಣದ ಖಾಮ್ಮಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಚೌಧರಿ ಹೇಳಿಕೆ
Apr 11, 2019, 12:01 pm IST
ತೆಲಂಗಾಣ ರಾಷ್ಟ್ರ ಸಮಿತಿ ಸಂಸದೆ ಕೆ ಕವಿತಾ ಅವರು ನಿಜಾಮಾಬಾದ್ ಕ್ಷೇತ್ರದ ಪೊತಂಗಲ್ ನಲ್ಲಿ ಮತಚಲಾಯಿಸಿದರು.
Apr 11, 2019, 11:58 am IST
11 ಗಂಟೆಯವರೆಗೆ ತೆಲಂಗಾಣದಲ್ಲಿ 22.84%, ಉತ್ತರಾಖಂಡ್ ದಲ್ಲಿ 23.78% , ಲಕ್ಷದ್ವೀಪ ದಲ್ಲಿ 23.10% , ಮಹಾರಾಷ್ಟ್ರದಲ್ಲಿ 13.7% ರಷ್ಟು ಮತದಾನ ದಾಖಲು.
Apr 11, 2019, 11:54 am IST
"2 ಕೋಟಿ ಉದ್ಯೋಗವಿಲ್ಲ, 15 ಲಕ್ಷ ನಿಮ್ಮ ಖಾತೆಗೆ ಬರಲಿಲ್ಲ, ಅಚ್ಚೇದಿನ(ಒಳ್ಳೆಯದಿನ)ವೂ ಬರಲಿಲ್ಲ! ಅದರ ಬದಲು, ನಿರುದ್ಯೋಗ, ಅಪನಗದೀಕರಣ, ರೈತರ ನೋವು, ಗಬ್ಬರ್ ಸಿಂಗ್ ಟ್ಯಾಕ್ಸ್, ಸೂಟ್ ಬೂಟ್ ಸರ್ಕಾರ, ರಫೇಲ್, ಸುಳ್ಳು, ಸುಳ್ಳು, ಸುಳ್ಳು, ಅಪನಂಬಿಕೆ, ಹಿಂಸೆ, ದ್ವೇಷ, ಭಯ... ನೀವು ಇಂದು ಭಾರತದ ಆತ್ಮಕ್ಕೆ ಮತಹಾಕುತ್ತಿದ್ದೀರಿ. ಅದರ ಭವಿಷ್ಯಕ್ಕೆ ಮತಹಾಕುತ್ತಿದ್ದೀರಿ, ಯೋಚಿಸಿ ಮತಚಲಾಯಿಸಿ" - ರಾಹುಲ್ ಗಾಂಧಿ
No 2 Crore JOBS. No 15 Lakhs in Bank A/C. No ACCHE DIN.
Instead:
No JOBS. DEMONETISATION. Farmers in Pain. GABBAR SINGH TAX. Suit Boot Sarkar. RAFALE. Lies. Lies. Lies. Distrust. Violence. HATE. Fear.
You vote today for the soul of India. For her future.
ಇವಿಎಂ ದೋಷದಿಂದಾಗಿ ಹಲವೆಡೆ 9:30 ರವರೆಗೂ ಮತದಾನ ಆರಂಭವಾಗಲಿಲ್ಲ. ನಂತರ ಮತದಾರರು ಮತ್ತೆ ಮತಗಟ್ಟೆಗೆ ಬಂದಿಲ್ಲ. ಆದ್ದರಿಂದ ಈ ಎಲ್ಲ ಮತಗಟ್ಟೆಗಳಲ್ಲಿ ಮರುಮತದಾನ ಮಾಡಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
Apr 11, 2019, 11:02 am IST
ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದ ಉಧಾಂಪುರದ ಕಾಶ್ಮೀರಿ ಪಂಡಿತರು ಬಾರಾಮುಲ್ಲಾ ಕ್ಷೇತ್ರಕ್ಕಾಗಿ ವಿಶೇಷ ಮತಗಟ್ಟೆಯಲ್ಲಿ ಮತಚಲಾಯಿಸಿದರು.
Apr 11, 2019, 10:48 am IST
ಗುರ್ಜಾಲಾ ಮತಕ್ಷೇತ್ರದಲ್ಲಿ ಟಿಡಿಪಿ-ವೈಸಿಪಿ ಪಕ್ಷದ ಸಸದಸ್ಯರ ನಡುವೆ ಮಾರಾಮಾರಿ
Apr 11, 2019, 10:31 am IST
ಪಶ್ಚಿಮಬಂಗಾಳ
ಪಶ್ಚಿಮಬಂಗಾಳದಲ್ಲಿ 9 ಗಂಟೆಯ ವೇಳೆಗೆ ಶೇ.18.12 ರಷ್ಟು ಮತದಾನ
READ MORE
4:38 AM, 11 Apr
ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗಳಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ.
4:40 AM, 11 Apr
ಮೊದಲ ಹಂತದ 1279 ಅಭ್ಯರ್ಥಿಗಳಲ್ಲಿ ಕೇವಲ 89 ಅಭ್ಯರ್ಥಿಗಳಷ್ಟೇ ಮಹಿಳೆಯರಾಗಿದ್ದಾರೆ.
4:42 AM, 11 Apr
14 ಕೋಟಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
4:43 AM, 11 Apr
ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ.
4:49 AM, 11 Apr
ಛತ್ತೀಸ್ ಗಢ
ಛತ್ತೀಸ್ ಗಢದ ಬಾಸ್ಟರ್ ಪ್ರದೇಶದಲ್ಲಿ ಇಂದು ಮತದಾನ ನಡೆಯಲಿದ್ದು, ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ. 80,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
4:57 AM, 11 Apr
ಏಪ್ರಿಲ್ 11 ರಿಂದ ಮೇ 19ರ ತನಕ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, 543 ಕ್ಷೇತ್ರಗಳ ಚುನಾವಣಾ ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.
4:59 AM, 11 Apr
ಉತ್ತರ ಪ್ರದೇಶ
ಉತ್ತರ ಪ್ರದೇಶದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿಯು ಎಸ್ಪಿ-ಬಿಎಸ್ಪಿ ಮೈತ್ರಿಪಕ್ಷದ ವಿರುದ್ಧ ತೀವ್ರ ಪೈಪೋಟಿಯ ಹೋರಾಟ ನಡೆಸಲಿದೆ.
5:00 AM, 11 Apr
ಯಾವ್ಯಾವ ರಾಜ್ಯಗಳಲ್ಲಿ?
ಮೊದಲ ಹಂತದಲ್ಲಿ ಅಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಡ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಲ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಚುನಾವಣಾ ಆಯೋಗ ಸಜ್ಜಾಗಿದೆ.
6:24 AM, 11 Apr
ಮಹಾರಾಷ್ಟ್ರ
ಮಹಾರಾಷ್ಟ್ರದ ಗೊಂಡಿಯಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 284ರಲ್ಲಿ ಮತದಾನಕ್ಕೆ ತಯಾರಿ
ಪಶ್ಚಿಮ ಬಂಗಾಳದ ಕೂಚ್ ಬೆಹರ್ ನಲ್ಲ ಮತಗಟ್ಟೆ ಸಂಖ್ಯೆ 173,174 ಮತ್ತು 175 ರಲ್ಲಿ ಮತದಾನಕ್ಕೆ ಸಿದ್ಧತೆ. ಬಿಗಿಬಂದೋಬಸ್ತ್ ಆಯೋಜನೆ
7:01 AM, 11 Apr
ಮೊದಲ ಹಂತದ 91 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು, ಮತದಾರರು ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದಾರೆ.
7:10 AM, 11 Apr
ಮಹಾರಾಷ್ಟ್ರ
ಮಹಾರಾಷ್ಟ್ರದ ನಾಗ್ಪುರದಲ್ಲಿ ಮತಚಲಾಯಿಸುವ ಸಲುವಾಗಿ ಮತಗಟ್ಟೆ ಸಂಖ್ಯೆ 216 ರಲ್ಲಿ ಕಾದು ಕುಳಿತಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
Maharashtra: RSS Chief Mohan Bhagwat present at polling booth number 216 in Nagpur, to cast his vote for #LokSabhaElections2019 . Voting on 7 parliamentary constituencies in the state will be held today. pic.twitter.com/EAcsBoi3Mp
ಮತದಾನ ನಮ್ಮ ಹಕ್ಕು, ಪ್ರತಿಯೊಬ್ಬರೂ ಮತದಾನ ಮಾಡಬೇಕು- ಮತದಾನದ ನಂತರ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
7:32 AM, 11 Apr
"ಮೊದಲ ಹಂತಕ್ಕೆ ಮತದಾನ ಮಾಡುತ್ತಿರುವ ಎಲ್ಲರಲ್ಲೂ ನನ್ನ ವಿನಂತಿ. ಎಲ್ಲರೂ ಮತಚಲಾಯಿಸಿ, ಮತದಾನದ ಪ್ರಮಾಣ ಹೆಚ್ಚಿಸುವಂತೆ ಮಾಡಿ. ಯುವ ಮತ್ತು ಮೊದಲ ಬಾರಿಯ ಮತದಾರರಲ್ಲಿ ಇದು ನನ್ನ ವಿಶೇಷ ಕಳಕಳಿ"- ನರೇಂದ್ರ ಮೋದಿ, ಪ್ರಧಾನಿ
2019 Lok Sabha elections commence today.
I call upon all those whose constituencies are voting in the first phase today to turn out in record numbers and exercise their franchise.
I specially urge young and first-time voters to vote in large numbers.
— Chowkidar Narendra Modi (@narendramodi) April 11, 2019
8:13 AM, 11 Apr
ಮತದಾನಕ್ಕೂ ಮೊದಲು ಇವಿಎಂನಲ್ಲಿ ದೋಷ, ಉತ್ತರ ಪ್ರದೇಶದಲ್ಲಿ ಇನ್ನೂ ಮತದಾನ ಆರಂಭವಾಗಿಲ್ಲ, ಗ್ರೇಟರ್ ನೊಯ್ಡಾ ಸೆಕ್ಟರ್ಮತ್ತು ಮುಜಾಫರ್ನಗರದಲ್ಲಿ ಮತದಾನ ಆರಂಭವಾಗಿಲ್ಲ
8:25 AM, 11 Apr
ಆಂಧ್ರಪ್ರದೇಶ
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಮತ ಚಲಾವಣೆ, ಅಮರಾವತಿಯಲ್ಲಿ ಕುಟುಂಬದವರ ಜೊತೆ ತೆರಳಿ ಮತದಾನ
8:39 AM, 11 Apr
ಆಂಧ್ರಪ್ರದೇಶದ ಕಡಪದಲ್ಲಿ ಮತಚಲಾಯಿಸಿದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ
8:40 AM, 11 Apr
"ಜನರು ಬದಲಾವಣೆ ಬಯಸುತ್ತಿದ್ದಾರೆ. ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಹೆದರದೇ ಮತಚಲಾಯಿಸಿ" -ಜಗನ್ ಮೋಹನ್ ರೆಡ್ಡಿ, ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ
8:51 AM, 11 Apr
ಛತ್ತೀಸ್ ಗಢದ ನಾರಾಯಣಪುರದಲ್ಲಿ ನಕ್ಸಲರು ಐಇಡಿ(ಸುಧಾರಿತ ಸ್ಫೋಟಕ) ಸ್ಫೋಟಿಸಿದ ಘಟನೆ ವರದಿಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
8:52 AM, 11 Apr
ಆಂಧ್ರಪ್ರದೇಶದಲ್ಲಿ ಇವಿಎಂ ಅನ್ನು ನಾಶಪಡಿಸಿದ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಅಭ್ಯರ್ಥಿ ಬಂಧನ
9:03 AM, 11 Apr
ಇವಿಎಂನಲ್ಲಿ ದೋಷವಿದೆ ಎಂಬ ಕಾರಣಕ್ಕೆ ಮತಯಂತ್ರವನ್ನೇ ಎಸೆದು ನಾಶ ಮಾಡಿದ್ದ ಜನಸೇನಾ ಪಕ್ಷದ ಮಧುಸೂದನ್ ರನ್ನು ಬಂಧಿಸಿದ ಪೊಲೀಸರು.
#WATCH Jana Sena MLA candidate Madhusudhan Gupta smashes an Electronic Voting Machine (EVM) at a polling booth in Gooty, in Anantapur district. He has been arrested by police. #AndhraPradeshpic.twitter.com/VoAFNdA6Jo
ನಾಗಾಲ್ಯಾಂಡ್ ನಲ್ಲಿ 9 ಗಂಟೆಯವರೆಗೆ ಶೇ.21 ರಷ್ಟು ಮತದಾನ ಪ್ರಮಾಣ ದಾಖಲು
9:32 AM, 11 Apr
ಛತ್ತೀಸ್ ಗಢದ ಬಾಸ್ಟರ್ ಲೋಕಸಭಾ ಕ್ಷೇತ್ರದಲ್ಲಿ ನಕ್ಸಲ್ ಅಟ್ಟಹಾಸ ತಡೆಯಲು 80,000 ಭದ್ರತಾ ಸಿಬ್ಬಂದಿ ನಿಯೋಜನೆ
9:44 AM, 11 Apr
ಉತ್ತರಾಖಂಡ್
ಉತ್ತರಾಖಂಡದ ಡೆಹ್ರಾಡೂನ್ ನ ಮತಗಟ್ಟೆ ಸಂಖ್ಯೆ 124 ರಲ್ಲಿ ಮತಚಲಾಯಿಸಿದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್
9:50 AM, 11 Apr
ಉತ್ತರ ಪ್ರದೇಶ
"ಬುರ್ಖಾ ಧರಿಸಿದ ಮಹಿಳೆಯರನ್ನು ಸರಿಯಾಗಿ ತಪಾಸಣೆ ಮಾಡಲಾಗಿಲ್ಲ. ಇದರಿಂದ ನಕಲಿ ಮತ ಚಲಾವಣೆಯಾಗುವ ಸಾಧ್ಯತೆ ಇದೆ ಎಂದು ನಾನು ಹೇಳುತ್ತಿದ್ದೇನೆ. ಅಕಸ್ಮಾತ್ ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳದಿದ್ದಲ್ಲಿ ನಾನು ಮರುಚುನಾವಣೆಗೆ ಬೇಡಿಕೆ ಇಡುತ್ತೇನೆ "- ಡಾ.ಸಂಜಯ್ ಬಲ್ಯನ್, ಕೇಂದ್ರ ಸಚಿವ, ಮುಜಾಪುರ್ ನಗರ ಬಿಜೆಪಿ ಅಭ್ಯರ್ಥಿ
9:58 AM, 11 Apr
9 ಗಂಟೆಯವರೆಗೆ ತೆಲಂಗಾಣದಲ್ಲಿ 10.6%, ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ 5.83%, ಅಸ್ಸಾಂನಲ್ಲಿ 10.2%, ಮತ್ತು ಅರುಣಾಚಲ ಪ್ರದೇಶದಲ್ಲಿ 13.3% ಮತದಾನ ದಾಖಲಾಗಿದೆ.
Lok Sabha Elections 2019 Phase 1 Polling Live Updates in Kannada on 91 Constituencies.Including Maharashtra, Andhra Pradesh, Telangana, Arunachal Pradesh, Uttar Pradesh, West Bengal 20 states will go to voting today(April 1st).Results will be on May 23rd. Lok Sabha elections overall India will happen in 7 phases.