ಮೋದಿ, ಅಂಬಾನಿ-ಅದಾನಿಯ ಬಿಜಿನೆಸ್ ಮ್ಯಾನೇಜರ್: ಸಿಧು ಟೀಕೆ
ನವದೆಹಲಿ, ಮೇ 11: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಕ್ಕೆ ಚುನಾವಣಾ ಆಯೋಗದಿಂದ ನೋಟಿಸ್ ಪಡೆದ ಕೆಲವು ಗಂಟೆಯಲ್ಲಿಯೇ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.
ಮೋದಿ ಅವರು ಕೆಲಸ ಮಾಡುತ್ತಿರುವಂತೆ ನೆರೆಹೊರೆಯವರ ಎದುರು ಮಾತ್ರ ನಾಟಕ ಮಾಡುವ ಆಗಷ್ಟೇ ಮದುವೆಯಾದ ಹೊಸ ಹೆಂಡತಿಯಂತೆ ಎಂದು ಲೇವಡಿ ಮಾಡಿದರು.
'ಮೋದಿ ಅವರು ಕಡಿಮೆ ರೊಟ್ಟಿ ಮಾಡಿದರೂ ಬಳೆ ಸದ್ದನ್ನು ಜೋರಾಗಿ ಮಾಡುವ ನವವಧುವಿನಂತೆ' ಎಂದು ಹೇಳಿದರು.
'ಮೋದಿ ಅವರನ್ನು ಒಬ್ಬ ಸುಳ್ಳುಗಾರರ ಮುಖ್ಯಸ್ಥ. ಉದ್ದಿಮೆದಾರರಾದ ಅನಿಲ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಿಗೆ ಬ್ಯುಸಿನೆಸ್ ಮ್ಯಾನೇಜರ್ ಎಂದು ನಾನು ಕರೆಯುತ್ತೇನೆ' ಎಂದು ಸಿಧು ಹೇಳಿದರು.

ಭೋಪಾಲ್‌ದಲ್ಲಿ ಶುಕ್ರವಾರ ಚುನಾವಣಾ ಪ್ರಚಾರದ ವೇಳೆ ಸಿಧು, ಮೋದಿ 'ರಫೇಲ್ ಕ ದಲಾಲ್' ಮತ್ತು 'ರಾಷ್ಟ್ರ ದ್ರೋಹಿ' ಎಂದು ಟೀಕಿಸಿದ್ದರು. ಇದು ಮೇಲ್ನೋಟಕ್ಕೆ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿದ್ದ ಚುನಾವಣಾ ಆಯೋಗ, ಅವರಿಗೆ 24 ಗಂಟೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ಶೋಕಾಸ್ ನೋಟಿಸ್ ನೀಡಿತ್ತು.
ಇದಕ್ಕೂ ಮುನ್ನ ಕೋಮುಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು 72 ಗಂಟೆ ಕಾಲ ಚುನಾವಣಾ ಪ್ರಚಾರದಿಂದ ನಿರ್ಬಂಧಿಸಲಾಗಿತ್ತು.












Click it and Unblock the Notifications