ಇಂಡಿಯಾ ಟುಡೇ ಸಮೀಕ್ಷೆ: ಭಯೋತ್ಪಾದನೆಗಿಂತ ನಿರುದ್ಯೋಗವೇ ದೊಡ್ಡ ಸಮಸ್ಯೆ
ನವದೆಹಲಿ, ಮಾರ್ಚ್ 10: ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಯಾವ ವಿಷಯ ಮುಖ್ಯವಾಗಲಿದೆ ಎಂಬುದನ್ನು ತಿಳಿಯಲು ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಭಯೋತ್ಪಾದನೆಗಿಂತ ನಿರುದ್ಯೋಗವೇ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ಕಾಡಲಿದೆ ಎಂದು ತಿಳಿದು ಬಂದಿದೆ.
ನಿರುದ್ಯೋಗ ಸಮಸ್ಯೆ ಶೇ 36ರಷ್ಟು ಮತಗಳನ್ನು ಪಡೆದರೆ, ಭಯೋತ್ಪಾದನೆ ಶೇ 23ರಷ್ಟು ಮತಗಳು ಭಯೋತ್ಪದನೆ ಬಗ್ಗೆ ಬಂದಿವೆ. ಶೇ 22ರಷ್ಟು ಮತಗಳು ಕೃಷಿ ಸಮಸ್ಯೆ ಬಗ್ಗೆ ಬಂದಿವೆ. ಶೇ 12ರಷ್ಟು ಮತಗಳು ಭ್ರಷ್ಟಾಚಾರ ಹಾಗೂ ಶೇ 7ರಷ್ಟು ಮತಗಳು ಬೆಲೆ ಏರಿಕೆ ಮುಖ್ಯ ವಿಷಯವಾಗಲಿವೆ ಎಂದು ಇಂಡಿಯಾ ಟುಡೇ ಪಾಲಿಟಿಕಲ್ ಸ್ಟಾಕ್ ಎಕ್ಸ್ ಜೇಂಜ್(ಪಿಎಸ್ ಇ) ಗಾಗಿ ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಕಳೆದ ವಾರದಲ್ಲಿ ಸೆಂಟರ್ ಫಾರ್ ಮಾನಿಟರಿಂಘ್ ಇಂಡಿಯನ್ ಎಕಾನಮಿ(ಸಿಎಂಐಇ) ನೀಡಿದ ಅಂಕಿ ಅಂಶದಂತೆ, ದೇಶದಲ್ಲಿ ನಿರುದ್ಯೋಗ ಪ್ರಮಾಣವು ಫೆಬ್ರವರಿ ತಿಂಗಳಿನಲ್ಲಿ ಶೇ 7.2ರಷ್ಟಾಗಿತ್ತು. ಸೆಪ್ಟೆಂಬರ್ 2016ರಿಂದ ಇಲ್ಲಿ ತನಕ ಇದು ಅತ್ಯಧಿಕ ಪ್ರಮಾಣದ್ದಾಗಿದೆ.

ಇಂಡಿಯಾ ಟುಡೇ 10, 428 ಮಂದಿಯನ್ನು ಫೋನ್ ಕರೆ ಮೂಲಕ ಸಂಪರ್ಕಿಸಿದ್ದು, ಮಾರ್ಚ್ 5 ರಿಂದ 7ರ ಅವಧಿಯಲ್ಲಿ 24 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.












Click it and Unblock the Notifications