ಹುರ್ರೆ, ಚೆಲುವೆ ಸನ್ನಿ ಲಿಯೋನ್ ಮುನ್ನಡೆ ಕಾದುಕೊಂಡಿದ್ದಾರಂತೆ!
ಲಕ್ನೋ, ಮೇ 23 : "ನಾನು ಎಷ್ಟು ಮತಗಳ ಅಂತರದಿಂದ ಮುಂದಿದ್ದೇನೆ?" ಎಂದು ಪುರಾತನ ನೀಲಿಚಿತ್ರದ ಬೆಡಗಿ, ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಅವರು ಟ್ವೀಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
Leading by How many votes ???? 😜
— Sunny Leone (@SunnyLeone) May 23, 2019
ಅವರು ಯಾವ ಕ್ಷೇತ್ರದಿಂದ ನಿಂತಿದ್ದರು? ಎಷ್ಟು ಮತಗಳನ್ನು ಗಳಿಸಿದ್ದಾರೆ? ಯಾರ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ? ಎಂದು ಅಚ್ಚರಿಗಳ ಮೇಲೆ ಅಚ್ಚರಿ ಪಡುವುದು ಬೇಡ. ಹಾಗಿದ್ರೆ, ಸನ್ನಿ ಲಿಯೋನ್ ಅವರಿಗೆ ಈ ಪ್ರಶ್ನೆ ಮೂಡಿದ್ದಾದರೂ ಹೇಗೆ?
ಎಡೆಬಿಡದ ವರದಿಯನ್ನು ನೀಡುತ್ತಿರುವ, ಸೀಟಲ್ಲಿ ಕೂತರೂ ಕೂತಿಲ್ಲದಂತಿರುವ ರಿಪಬ್ಲಿಕ್ ಟಿವಿಯ ಮುಖ್ಯಸ್ಥ, ಲೀಡಿಂಗ್ ಪತ್ರಕರ್ತ ಅರ್ಣಬ್ ಗೋಸ್ವಾಮಿ ಅವರು, ಗುರುದಾಸ್ ಪುರದ ಕುಸ್ತಿಯ ಬಗ್ಗೆ ವಿವರ ನೀಡುತ್ತ, ಸನ್ನಿ ಡಿಯೋಲ್ ಅನ್ನುವ ಬದಲು ಸನ್ನಿ ಲಿಯೋನ್ ಎಂದಿದ್ದಾರೆ. ತಪ್ಪೇನಿಲ್ಲ ಬಿಡಿ.

ಲೋಕಸಭೆ ಚುನಾವಣೆ ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದ್ದಂತೆ, ಅಭೂತಪೂರ್ವ ಯಶಸ್ಸು ಗಳಿಸುವ ಹಾದಿಯಲ್ಲಿ ಬಿಜೆಪಿ ಪಾಳಯದಲ್ಲಿ ಭಾರೀ ಹರ್ಘೋದ್ಘಾರ ಮೂಡಿದ್ದರೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಪಾಳಯದಲ್ಲಿ ಅಂಧಕಾರ ಮೂಡಿದೆ.
ಸೋಲು-ಗೆಲುವು, ಸಂತೋಷ-ದುಃಖಗಳ ನಡುವೆ ಸನ್ನಿ ಲಿಯೋನ್ ರೂಪದಲ್ಲಿ ತಮಾಷೆಯೂ ತೂರಿಕೊಂಡುಬಂದಿದೆ. ಸನ್ನಿ ಲಿಯೋನ್ ಡಾರ್ಲಿಂಗ್, ನೀವು ಅಷ್ಟಿಷ್ಟು ಮತಗಳ ಅಂತರದಿಂದ ಅಲ್ಲ, 135 ಕೋಟಿ ಜನರ ಹೃದಯವನ್ನು ಗೆದ್ದಿದ್ದೀರಿ ಎಂದು ಅವರ ಅಭಿಮಾನಿಯೊಬ್ಬರು ತಮಾಷೆ ಮಾಡಿದ್ದಾರೆ.












Click it and Unblock the Notifications