ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಅಭ್ಯರ್ಥಿ ಪ್ರಕಟಕ್ಕೆ ಕಾಂಗ್ರೆಸ್ ಹಿಂದೇಟು

By Srinath
|
Google Oneindia Kannada News

ನವದೆಹಲಿ, ಜ.17- ಮೊನ್ನೆಯಷ್ಟೇ ಪ್ರಧಾನಿ ಅಭ್ಯರ್ಥಿ ಸೇರಿದಂತೆ ಪಕ್ಷವು ಯಾವುದೇ ಪ್ರಮುಖ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸಲು ತಾನು ಸಿದ್ಧವಿರುವುದಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಘೋಷಿಸಿಕೊಂಡಿದ್ದರು. ಆದರೆ ಅದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಕಿವಿಗೆ ಬಿದ್ದಂತಿಲ್ಲ. ಅಥವಾ ಪಕ್ಷದ ಕಾರ್ಯತಂತ್ರವೇ ಹಾಗಿದೆಯೋ, ಅಂತೂ ರಾಹುಲ್ ಗಾಂಧಿಯನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ ಮುಂದಾಗಿಲ್ಲ.

'ಚುನಾವಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದು ಪಕ್ಷದ ಸಂಪ್ರದಾಯ ಅಲ್ಲ' ಎಂದು ಕಾಂಗ್ರೆಸ್ ಅನುಕೂಲಸಿಂಧು ನಿಲುವಿಗೆ ಅಂಡಿಕೊಂಡಿದೆಯಾದರೂ ಮಹತ್ವದ ಮಹಾಸಮರದಲ್ಲಿ ಪ್ರಧಾನಿ ಅಭ್ಯರ್ಥಿಯ ಘೋಷಣೆ ಮಾಡದಿರುವುದು ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬುದು ರಾಜಕೀಯ ಪಂಡಿತರ ಅನಿಸಿಕೆ.

Lok Sabha Election 2014 - Congress not ready to announce AICC Vice President Rahul Gandhi Prime Minister candidate

ಇಂದು ಜ.17ರಂದು ಶುಕ್ರವಾರ ನವದೆಹಲಿಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ನಡೆಯಲಿದೆ. ಆ ಸಂದರ್ಭದಲ್ಲಿ ರಾಹುಲ್‌ ಗಾಂಧಿಗೆ ಪಟ್ಟ ಕಟ್ಟುವುದು ನಿಶ್ಚಿತ ಎಂದೇ ಪರಿಭಾವಿಸಲಾಗಿತ್ತು. ಆದರೆ ಪಕ್ಷವು ರಾಹುಲ್ ಗೆ ನಾಯಕತ್ವ ವಹಿಸಲು ಆಸಕ್ತಿ ತೋರಿಲ್ಲ. ಬದಲಿಗೆ ಲೋಕಸಭಾ ಚುನಾವಣೆಯಗೆ ಪಕ್ಷದ ಸಾರಥ್ಯ ವಹಿಸುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೋರುವ ಸಾಧ್ಯತೆಯಿದೆ.

ಇದರಿಂದ ಕಾಂಗ್ರೆಸ್ ಗೆದ್ದರೆ ರಾಹುಲ್ ಗೆ ಪಟ್ಟ ಇಲ್ಲಾಂದ್ರೆ ಈಗಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿ ಮುಖಭಂಗಕ್ಕೀಡಾಗುವುದು ಬೇಡವೆಂಬುದು ಪಕ್ಷದ ಇರಾದೆಯಾಗಿದೆ ಎನ್ನಲಾಗಿದೆ. ಏನೇ ಆಗಲಿ ಇಂದಿನ ನಡೆಯುವ ಮಹಾಧಿವೇಶನ ಕುತೂಹಲದ ಗೂಡಾಗಿದೆ. ( ಪ್ರಧಾನಿ ಹುದ್ದೆಗೆ ಮೋದಿ ಅರ್ಹ: ನಟ ಸಲ್ಮಾನ್ ಖಾನ್ )

ರಾಹುಲ್‌ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಹೆಸರಿಸುವುದನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಻ವರೇ ವಿರೋಧಿಸಿದ್ದಾರೆ. ಪ್ರತಿಪಕ್ಷವು ತನ್ನ ಪ್ರಧಾನಿ ಅಭ್ಯರ್ಥಿಯನ್ನು ಹೆಸರಿಸಿದ ಕಾರಣಕ್ಕೆ ತಾವೂ ಅದನ್ನು ಮಾಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ( ಪ್ರಧಾನಿ ಅಭ್ಯರ್ಥಿಯಾಗಲು ಸಿದ್ದ: ರಾಹುಲ್ ಘೋಷಣೆ )

ಸ್ವತಃ ರಾಹುಲ್‌ ಸಹ ತಮ್ಮನ್ನು ಪ್ರಧಾನಿ ಅಭ್ಯರ್ಥಿಯಾಗಿ ಹೆಸರಿಸುವುದನ್ನು ಬಯಸುತ್ತಿಲ್ಲ. ಬದಲಿಗೆ, ಪಕ್ಷಕ್ಕಾಗಿ ಕೆಲಸ ಮಾಡುವುದಕ್ಕೆ ಇಚ್ಛಿಸಿದ್ದಾರೆ. ಅವರು ಕಾಂಗ್ರೆಸ್ಸಿನ ಭವಿಷ್ಯದ ನಾಯಕ. ಮುಂದಿನ ಚುನಾವಣೆಯಲ್ಲಿ ರಾಹುಲ್‌ ನಾಯಕತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಸೋನಿಯಾ ಹೇಳಿದ್ದಾರೆಂದು ಪಕ್ಷದ ವಕ್ತಾರ ಜನಾರ್ದನ ದ್ವಿವೇದಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ರಾಹುಲ್ ಮೋದಿಯ ಎದುರಿಸುವುದನ್ನು ಕಾಂಗ್ರೆಸ್ ಬಯಸುತ್ತಿಲ್ಲ!
ಈ ಮಧ್ಯೆ, ನಮ್ಮ ನರೇಂದ್ರ ಮೋದಿಯ ವಿರುದ್ಧ ಆಘಾತಕಾರಿ ಸೋಲಿನಿಂದ ರಾಹುಲ್‌ ಅವರನ್ನು ರಕ್ಷಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆಯೆಂದು ಬಿಜೆಪಿ ಟೀಕಿಸಿದೆ. 'ರಾಹುಲ್ ಮೋದಿಯ ಎದುರಿಸುವುದನ್ನು ಕಾಂಗ್ರೆಸ್ ಬಯಸುತ್ತಿಲ್ಲ. ಆದ್ದರಿಂದ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುತ್ತಿಲ್ಲ. ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆಯಲ್ಲಿ ದಯನೀಯ ಸೋಲುಂಟಾಗುವುದೆಂದು ಈಗಾಗಲೇ ತಿಳಿದಿದೆ. ರಾಹುಲ್ ಗಾಂಧಿ ನರೇಂದ್ರ ಮೋದಿಗೆ ಸರಿಸಾಟಿಯೂ ಅಲ್ಲ' ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

English summary
Lok Sabha Election 2014 - Congress not ready to announce AICC Vice President Rahul Gandhi Prime Minister candidate. It seems Cong has no inclination to announce Rahul Gandhi as its PM candidate in today's Congress general session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X