ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವಾರದಿಂದ ಹೊಸ ಕೋವಿಡ್ ಪ್ರಕರಣಗಳು ಶೇ.13ರಷ್ಟು ಇಳಿಕೆ

|
Google Oneindia Kannada News

ವಾಷಿಂಗ್ಟನ್, ಮೇ 19: ಭಾರತದಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕಿತರ ಪ್ರಮಾಣ ಶೇ.13ರಷ್ಟು ಇಳಿಕೆ ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮಾರಕ ಕೊರೊನಾ ಸಾಂಕ್ರಾಮಿಕದ 2ನೇ ಅಲೆಯಲ್ಲಿ ತತ್ತರಿಸಿ ಹೋಗಿದ್ದ ಭಾರತದಲ್ಲಿ ಕಳೆದೊಂದು ವಾರದಲ್ಲಿ ಸೋಂಕು ಪ್ರಮಾಣ ಇಳಿಕೆಯಾಗಿದ್ದು, ಸೋಂಕು ಪ್ರಮಾಣದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ.

ಆದರೆ ಹೊಸ ಸೋಂಕು ಪ್ರಕರಣಗಳ ವಿಚಾರದಲ್ಲಿ ಇನ್ನೂ ವಿಶ್ವಾದ್ಯಂತ ಅತೀ ಹೆಚ್ಚಿದೆ ಎಂದು ಹೇಳಿದೆ. ದೇಶದಲ್ಲಿ ಒಂದೇ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2,67,334 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,89,851 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸಾವಿನ ಅಪಾಯ: ಭಾರತೀಯರ ಉಸಿರು ಕಸಿಯುತ್ತಿರುವ ಕೊರೊನಾವೈರಸ್!ಸಾವಿನ ಅಪಾಯ: ಭಾರತೀಯರ ಉಸಿರು ಕಸಿಯುತ್ತಿರುವ ಕೊರೊನಾವೈರಸ್!

ಭಾರತದಲ್ಲಿ ಒಟ್ಟು 2,54,96,330 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,19,86,363 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,83,248 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 32,26,719 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 20,08,296 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ.

ಭಾರತದಲ್ಲಿ ಭೀತಿ: ಒಂದೇ ದಿನ 4529 ಕೊರೊನಾ ರೋಗಿಗಳು ಸಾವು! ಭಾರತದಲ್ಲಿ ಭೀತಿ: ಒಂದೇ ದಿನ 4529 ಕೊರೊನಾ ರೋಗಿಗಳು ಸಾವು!

ಮೇ 9 ರ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ ರಾಷ್ಟ್ರೀಯ ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಭಾರತವು ಅತಿ ಹೆಚ್ಚು ಹೊಸ ಪ್ರಕರಣಗಳನ್ನು (2,738,957) ಎಂದು ದಾಖಲಿಸಿದೆ, ಇದು ಹಿಂದಿನ ವಾರಕ್ಕಿಂತ 5 ಶೇಕಡಾ ಹೆಚ್ಚಾಗಿದೆ. ಡಬ್ಲ್ಯುಎಚ್‌ಒ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳು ಸಂಖ್ಯೆ ಸುಮಾರು 24.68 ಮಿಲಿಯನ್ ಇದ್ದು, ಮತ್ತು ಒಟ್ಟು ಸಾವುಗಳು ಸುಮಾರು 270,284 ರಷ್ಟಿದೆ.

ರಾಜ್ಯದಲ್ಲಿ ಈವರೆಗೂ ಎಷ್ಟು ತಪಾಸಣೆ ನಡೆದಿದೆ

ರಾಜ್ಯದಲ್ಲಿ ಈವರೆಗೂ ಎಷ್ಟು ತಪಾಸಣೆ ನಡೆದಿದೆ

ದೇಶದಲ್ಲಿ ಈವರೆಗೂ 32,03,01,177 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

9ವಾರಗಳ ಬಳಿಕ ಸೋಂಕು ಕಡಿಮೆ

9ವಾರಗಳ ಬಳಿಕ ಸೋಂಕು ಕಡಿಮೆ

ಸತತ ಒಂಬತ್ತು ವಾರಗಳ ಹೆಚ್ಚಳದ ನಂತರ ದೈನಂದಿನ ಸೋಂಕು ಪ್ರಕರಣದ ಪ್ರಮಾಣವು ಕಡಿಮೆಯಾಗಿದೆ. ಆದರೆ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಸಂಪೂರ್ಣ ಸಂಖ್ಯೆ ಅದರ ಗರಿಷ್ಠ ಮಟ್ಟದಲ್ಲೇ ಉಳಿದಿದೆ. ಅಂತೆಯೇ ಸತತ ಒಂಬತ್ತನೇ ವಾರದಲ್ಲೂ ಕೂಡ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇನ್ನು ಜಾಗತಿಕವಾಗಿಯೂ ಸೋಂಕು ಪ್ರಮಾಣ ಕುಸಿತವಾಗುತ್ತಿದ್ದು, ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಈ ವಾರ ಹೊಸ ಪ್ರಕರಣಗಳಲ್ಲಿ ಅತಿದೊಡ್ಡ ಕುಸಿತ ಕಂಡಿದೆ.

ಯಾವ ದೇಶಗಳಲ್ಲಿ ಎಷ್ಟು ಹೆಚ್ಚಳ

ಯಾವ ದೇಶಗಳಲ್ಲಿ ಎಷ್ಟು ಹೆಚ್ಚಳ

ಭಾರತದ ಬಳಿಕ ಬ್ರೆಜಿಲ್ (437,076 ಹೊಸ ಪ್ರಕರಣಗಳು; ಶೇ3 ರಷ್ಟು ಹೆಚ್ಚಳ), ಅಮೆರಿಕ (235,638 ಹೊಸ ಪ್ರಕರಣಗಳು; ಶೇ.21 ರಷ್ಟು ಕಡಿಮೆಯಾಗಿದೆ), ಅರ್ಜೆಂಟೀನಾ (151,332 ಹೊಸ ಪ್ರಕರಣಗಳು; ಶೇ.8 ರಷ್ಟು ಹೆಚ್ಚಳ) ಮತ್ತು ಕೊಲಂಬಿಯಾ (115,834 ಹೊಸ ಪ್ರಕರಣಗಳು; ಶೇ.6 ರಷ್ಟು ಹೆಚ್ಚಳ). ಭಾರತದಿಂದ ಅತಿ ಹೆಚ್ಚು ಹೊಸ ಸಾವುಗಳು ವರದಿಯಾಗಿವೆ (27,922 ಹೊಸ ಸಾವುಗಳು; 100,000 ಕ್ಕೆ 2.0 ಹೊಸ ಸಾವುಗಳು; 4 ಶೇಕಡಾ ಹೆಚ್ಚಳ), ನೇಪಾಳ ಮತ್ತು ಇಂಡೋನೇಷ್ಯಾ ಇದೆ.

ಜಗತ್ತಿನಾದ್ಯಂತ ದಾಖಲಾಗಿರುವ ಪ್ರಕರಣಗಳು

ಜಗತ್ತಿನಾದ್ಯಂತ ದಾಖಲಾಗಿರುವ ಪ್ರಕರಣಗಳು

ಜಗತ್ತಿನಾದ್ಯಂತ 4.8 ಮಿಲಿಯನ್ ಹೊಸ ಪ್ರಕರಣಗಳು ದಾಖಲಾಗಿದ್ದು, 86,000 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಹಿಂದಿನ ವಾರಕ್ಕೆ ಹೋಲಿಸಿದರೆ ಸೋಂಕು ಪ್ರಮಾಣ ಶೇಕಡಾ 12 ರಷ್ಟು ಮತ್ತು ಸಾವಿನ ಸಂಖ್ಯೆ 5 ರಷ್ಟು ಕಡಿಮೆಯಾಗಿದೆ.

English summary
India registered a 13 percent decrease in new COVID-19 cases in the past week but the number of fresh infections was still the highest around the world, the WHO has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X