ಕೇರಳ ಕರಾವಳಿಗೆ ಮಾನ್ಸೂನ್ ಆಗಮನ ಅಲ್ಪ ವಿಳಂಬ: ಐಎಂಡಿ

ತಿರುವನಂತಪುರಂ, ಜೂನ್‌ 3: ಮುಂದಿನ ಐದು ದಿನಗಳಲ್ಲಿ ಪೂರ್ವ ಭಾರತದ ಮೇಲೆ ಮತ್ತೊಂದು ಶಾಖದ ಅಲೆ ಪರಿಣಾಮ ಬೀರುವ ಕಾರಣ ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವುದು ಸ್ವಲ್ಪ ವಿಳಂಬವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಾನ್ಸೂನ್‌ನ ಸಾಮಾನ್ಯ ಆರಂಭದ ದಿನಾಂಕ ಜೂನ್ 1 ಆಗಿತ್ತು. ಆದರೆ ಈ ಬಾರಿ ಮಾನ್ಸೂನ್ ಮೂರು ದಿನಗಳ ನಂತರ - ಜೂನ್ 4 ರಂದು ಮಲಬಾರ್ ಕರಾವಳಿಯನ್ನು ತಲುಪಬಹುದು ಎಂದು ಮೀಟ್ ಏಜೆನ್ಸಿ ಮುನ್ಸೂಚನೆ ನೀಡಿದೆ. ಆದರೆ ಐಎಂಟಿಯ ವಿಜ್ಞಾನಿಗಳು ಈಗ ಸ್ವಲ್ಪ ವಿಳಂಬವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

monsoon to Kerala coast

ಕೇರಳಕ್ಕೆ ಮಾನ್ಸೂನ್‌ ಜೂನ್ 5-7 ರ ನಡುವೆ (ಎರಡನ್ನೂ ಒಳಗೊಂಡಂತೆ) ಸಂಭವಿಸುತ್ತದೆ. ಮೂರು ನಿರ್ದಿಷ್ಟ ಹವಾಮಾನ ವಿದ್ಯಮಾನಗಳು ಮಳೆ ವಿಳಂಬಕ್ಕೆ ಕಾರಣವಾಗಿದೆ ಎಂದು ರೀಡಿಂಗ್ ವಿಶ್ವವಿದ್ಯಾನಿಲಯದ ವಾಯುಮಂಡಲದ ವಿಜ್ಞಾನ ಮತ್ತು ಹವಾಮಾನ ಇಲಾಖೆಯ ರಾಷ್ಟ್ರೀಯ ಕೇಂದ್ರದ ಸಂಶೋಧನಾ ವಿಜ್ಞಾನಿ ಅಕ್ಷಯ್ ಡಿಯೋರಸ್ ತಿಳಿಸಿದ್ದಾರೆ.

ಉಷ್ಣವಲಯದ ಚಂಡಮಾರುತ ಮೋಚಾವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಕ್ಷಿಣ ಭಾಗಗಳಲ್ಲಿ ಮಾನ್ಸೂನ್‌ನ ಸಮಯೋಚಿತ ಆಗಮನಕ್ಕೆ ಸಹಾಯ ಮಾಡಿದರೂ, ಬಳಿಕ ಮಾನ್ಸೂನ್ ಮಾರುತಗಳು ದುರ್ಬಲಗೊಂಡವು. ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಉಷ್ಣವಲಯದ ಚಂಡಮಾರುತ ಫ್ಯಾಬಿಯನ್ ಮಾನ್ಸೂನ್ ಮಾರುತಗಳನ್ನು ಸೆಳೆಯುವ ಮೂಲಕ ದುರ್ಬಲಗೊಳಿಸಿದೆ ಎಂದು ಅವರು ಹೇಳಿದರು.

ಹಿಂದೂ ಮಹಾಸಾಗರದ ಮೇಲೆ ಮ್ಯಾಡೆನ್-ಜೂಲಿಯನ್ ಆಸಿಲೇಷನ್ ಎಂದು ಕರೆಯಲ್ಪಡುವ ಮತ್ತೊಂದು ಹವಾಮಾನ ನಿಯತಾಂಕದ ಕೊರತೆಯಿಂದ ಮೇ ತಿಂಗಳ ಎರಡನೇ ಹದಿನೈದು ದಿನಗಳಲ್ಲಿ ಮಾನ್ಸೂನ್ ಮಾರುತಗಳನ್ನು ಬಲಪಡಿಸಲು ಉತ್ತೇಜನ ನೀಡಲಿಲ್ಲಎಂದು ಡಿಯೋರಸ್ ಹೇಳಿದರು.

ಮಾನ್ಸೂನ್ ಆರಂಭವು ಜೂನ್ 4 ಮತ್ತು ಜೂನ್ 8ರ ನಡುವೆ ಆರಂಭವಾಗಬಹುದು. IMD ಪ್ರಕಾರ ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್, ಕೊಮೊರಿನ್, ದಕ್ಷಿಣ ಬಂಗಾಳ ಕೊಲ್ಲಿ, ಪೂರ್ವ ಮಧ್ಯ ಬಂಗಾಳ ಕೊಲ್ಲಿ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಇದು ಆಗಮಿಸಬಹುದು ಎಂದು ಹಿರಿಯ IMD ವಿಜ್ಞಾನಿ ಡಿ ಎಸ್ ಪೈ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಭಾರೀ ಎಂದರೆ ಜೂನ್‌ 8ರಂದು ಮಾನ್ಸೂನ್ ಆಗಮನವಾಗಿತ್ತು. ಆದರೆ IMD ಯ ಮುನ್ಸೂಚನೆಯ ದಿನಾಂಕವು ಎರಡೂ ಕಡೆಗಳಲ್ಲಿ ನಾಲ್ಕು ದಿನಗಳ ಅಂತರವನ್ನು ಹೊಂದಿರುವುದರಿಂದ ಅಧಿಕೃತ ಮುನ್ಸೂಚನೆಯು ನಿಖರವಾಗಿತ್ತು. ಅದು 2023ರಲ್ಲೂ ಮುಂದುವರೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+