2013ರಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತಗಳು

ರೈಲು ದುರಂತಗಳನ್ನು ತಪ್ಪಿಸಲು ಕೇಂದ್ರ ಸರಕಾರ ಅಧ್ಯಯನ ಸಮಿತಿಯೊಂದನ್ನು ನೇಮಿಸಿ ವರದಿ ನೀಡುವಂತೆ ಆದೇಶ ನೀಡಿತ್ತು. ಅದರಂತೆ 2012ರಲ್ಲಿ ಸಮಿತಿ ರೈಲ್ವೇ ಸಚಿವಲಾಯಕ್ಕೆ ವರದಿ ಒಪ್ಪಿಸಿತ್ತು.

ಸಮಿತಿಯ ವರದಿ ಪ್ರಕಾರ ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಬಾ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ರೈಲು ಹಳಿ ದಾಟುವಾಗ ಸಂಭವಿಸುವ ಅಪಘಾತವೇ ಹೆಚ್ಚು.

ರಸ್ತೆ ಮಾರ್ಗಗಳಲ್ಲಿ ರೈಲು ಹಳಿ ಹಾದು ಹೋಗುವುದು, ನಾಗರಿಕರಿಗೆ ರೈಲು ಹಾದು ಹೋಗುವ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದು, ಹಳಿಗಳ ಗುಣಮಟ್ಟ, ಸಿಗ್ನಲ್ ವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯತನ ಇತ್ಯಾದಿ ಲೋಪದೋಷಗಳನ್ನು ಸರಿ ಪಡಿಸಲು ಅಧಿಕಾರಿಗಳು ರೈಲ್ವೆ ಸಚಿವಾಲಯಕ್ಕೆ ಒತ್ತಡ ಹೇರದೇ ಇರುವುದರಿಂದ ಅಪಘಾತ ಹೆಚ್ಚಾಗಿ ನಡೆಯುತ್ತದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು.

ಅದರಂತೆ, ರೈಲ್ವೆ ಇಲಾಖೆ ಪ್ರಯಾಣಿಕರ ಮತ್ತು ನಾಗರಿಕರ ಸುರಕ್ಷತೆಯ ಬಗ್ಗೆ ಗಮನ ಹರಿಸಲಾರಂಭಿಸಿದರೂ ರೈಲು ಅಪಘಾತಗಳು ನಡೆಯುತ್ತಲೇ ಇರುತ್ತಿವೆ.

2013ರಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತಗಳು

ಫೆಬ್ರವರಿ

ಫೆಬ್ರವರಿ

ದಿನಾಂಕ: 22.02.2013
ರೈಲು: ಮಂಗಳಾ ಲಕ್ಷದ್ವೀಪ ಎಕ್ಸ್ ಪ್ರೆಸ್
ಎಲ್ಲಿಂದ ಎಲ್ಲಿಗೆ : ಹಜರತ್ ನಿಜಾಮುದ್ದೀನ್ - ಎರ್ನಾಕುಲಂ
ರೈಲು ಸಂಖ್ಯೆ: 12618
ಸಾವುನೋವು: ಪೆನ್ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿ, ಸುಮಾರು 34 ಮಂದಿ ಗಾಯಗೊಂಡಿದ್ದರು.

ಎಪ್ರಿಲ್

ಎಪ್ರಿಲ್

ದಿನಾಂಕ: 10.04.2013
ರೈಲು: ಯಶವಂತಪುರ ವೀಕ್ಲಿ ಎಕ್ಸ್ ಪ್ರೆಸ್
ಎಲ್ಲಿಂದ ಎಲ್ಲಿಗೆ : ಮುಜಫರ್ ನಗರ - ಯಶವಂತಪುರ
ರೈಲು ಸಂಖ್ಯೆ: 15228
ಸಾವುನೋವು: ಅರಕೋಣಂ ಬಳಿ ಹನ್ನೊಂದು ಬೋಗಿಗಳು ಹಳಿ ತಪ್ಪಿ, ಇಬ್ಬರು ಸಾವನ್ನಪ್ಪಿ ಸುಮಾರು 11 ಮಂದಿ ಗಾಯಗೊಂಡಿದ್ದರು.

ಆಗಸ್ಟ್

ಆಗಸ್ಟ್

ದಿನಾಂಕ: 19.08.2013
ರೈಲು: ರಾಜ್ಯ ರಾಣಿ ಎಕ್ಸ್ ಪ್ರೆಸ್
ಎಲ್ಲಿಂದ ಎಲ್ಲಿಗೆ : ಸಹರ್ಷಾ - ಪಾಟ್ನಾ
ರೈಲು ಸಂಖ್ಯೆ: 12567
ಸಾವುನೋವು: ಧಮಾರಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ರೈಲು ಹರಿದು 35 ಜನ ಸಾವನ್ನಪ್ಪಿದ್ದರು.

ನವೆಂಬರ್

ನವೆಂಬರ್

ದಿನಾಂಕ: 02.11.2013
ರೈಲು: ಅಲಪುಜಾ - ಧನಬಾದ್ ಎಕ್ಸ್ ಪ್ರೆಸ್
ಎಲ್ಲಿಂದ ಎಲ್ಲಿಗೆ : ವಿಜಯವಾಡ - ರಾಯಘಡ
ರೈಲು ಸಂಖ್ಯೆ: 57271
ಸಾವುನೋವು: ಗೋಟ್ಲಂ ರೈಲು ನಿಲ್ದಾಣದಲ್ಲಿ ವಿಜಯವಾಡ - ರಾಯಘಡ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನುವ ಸುಳ್ಳು ಸುದ್ದಿ ಹರಡಿದಾಗ, ಪ್ರಯಾಣಿಕರು ರೈಲಿನಿಂದ ಕೆಳಕ್ಕೆ ಹಾರಿದರು. ಆಗ, ಇನ್ನೊಂದು ಹಳಿಯಲ್ಲಿ ವೇಗವಾಗಿ ಬರುತ್ತಿದ್ದ ಅಲಪುಜಾ - ಧನಬಾದ್ ಎಕ್ಸ್ ಪ್ರೆಸ್ ರೈಲು ಕೆಳಕ್ಕೆ ಹಾರಿದವರ ಮೇಲೆ ಹರಿಯಿತು. ಇದರಿಂದ ಹತ್ತು ಜನ ಸಾವನ್ನಪ್ಪಿ, ಇಪ್ಪತ್ತಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು.

ನವೆಂಬರ್

ನವೆಂಬರ್

ದಿನಾಂಕ: 15.11.2013
ರೈಲು: ಮಂಗಳ ಲಕ್ಷದ್ವೀಪ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್
ಎಲ್ಲಿಂದ ಎಲ್ಲಿಗೆ : ನಿಜಾಮುದ್ದೀನ್ - ಎರ್ನಾಕುಳಂ
ರೈಲು ಸಂಖ್ಯೆ: 12618
ಸಾವುನೋವು: ಘೋಟಿ ಹಳ್ಳಿಯ ಬಳಿ ರೈಲಿನ ಆರು ಬೋಗಿಗಳು ಹಳಿ ತಪ್ಪಿ ಐದು ಜನ ಸಾವನ್ನಪ್ಪಿ, ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಡಿಸೆಂಬರ್

ಡಿಸೆಂಬರ್

ದಿನಾಂಕ: 28.12.2013
ರೈಲು: ಬೆಂಗಳೂರು ಸಿಟಿ -ಹಜೂರ್ ಸಾಹೇಬ್ ನಾಂದೇಡ್ ಎಕ್ಸ್ ಪ್ರೆಸ್
ಎಲ್ಲಿಂದ ಎಲ್ಲಿಗೆ : ಬೆಂಗಳೂರು - ನಾಂದೇಡ್
ರೈಲು ಸಂಖ್ಯೆ: 16594
ಸಾವುನೋವು: ಅನಂತಪುರಂ ಬಳಿ ಹವಾ ನಿಯಂತ್ರಿತ ಕೋಚಿಗೆ ಬೆಂಕಿ ಕಾಣಿಸಿಕೊಂಡು 26 ಪ್ರಯಾಣೀಕರು ಸಜೀವ ದಹನಗೊಂಡು, ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+