ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Liquor price : ಕೇರಳದಲ್ಲಿ ಮದ್ಯದ ಬೆಲೆ ಏರಿಕೆ ಸಾಧ್ಯತೆ

|
Google Oneindia Kannada News

ತಿರುವನಂತಪುರಂ, ನವೆಂಬರ್‌ 23: ಕೇರಳ ಸರ್ಕಾರವು ಮದ್ಯದ ಮೇಲಿನ ಮಾರಾಟ ತೆರಿಗೆಯನ್ನು ಶೇ. 4ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿರುವುದರಿಂದ ಭಾರತೀಯ ನಿರ್ಮಿತ ವಿದೇಶಿ ಮದ್ಯದ (ಐಎಂಎಫ್‌ಎಲ್) ಬೆಲೆ ಮುಂಬರುವ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸಚಿವ ಸಂಪುಟ ಸಭೆಯಲ್ಲಿ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕೇರಳದೊಳಗೆ ವಿದೇಶಿ ಮದ್ಯವನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಡಿಸ್ಟಿಲರ್‌ಗಳ ಮೇಲೆ ವಿಧಿಸಲಾದ 5% ವಹಿವಾಟು ತೆರಿಗೆಯನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ.

ಮದ್ಯ ಕುಡಿದು ಮಲಗಿದ 24 ಆನೆಗಳ ಹಿಂಡು: ಅರಣ್ಯದೊಳಗೆ ಗಂಟೆಗಟ್ಟಲೆ ನಿದ್ದೆಮದ್ಯ ಕುಡಿದು ಮಲಗಿದ 24 ಆನೆಗಳ ಹಿಂಡು: ಅರಣ್ಯದೊಳಗೆ ಗಂಟೆಗಟ್ಟಲೆ ನಿದ್ದೆ

ಆದರೆ ಪ್ರಸ್ತುತ ಕಾರ್ಪೊರೇಷನ್ ಡಿಸ್ಟಿಲರಿಗಳಿಂದ ಖರೀದಿಸುವ ವಿದೇಶಿ ಮದ್ಯದ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ. ಮದ್ಯದ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸುವ ನಿರ್ಧಾರವನ್ನು ಕೇರಳ ಜನರಲ್ ಸೇಲ್ಸ್ ಟ್ಯಾಕ್ಸ್ ಆಕ್ಟ್, 1963 ರ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆಯಲ್ಲಿ ವೇರ್‌ಹೌಸ್‌ ಮಾರ್ಜಿನ್‌ಗಳನ್ನು 1% ರಷ್ಟು ಹೆಚ್ಚಿಸಲು ಕೇರಳ ರಾಜ್ಯ ಪಾನೀಯಗಳ ನಿಗಮಕ್ಕೆ ಅನುಮೋದನೆ ನೀಡಿದೆ. ಹೀಗಾಗಿ ವಿದೇಶಿ ಮದ್ಯದ ಬೆಲೆ ಶೇ.2ರಷ್ಟು ಏರಿಕೆಯಾಗಲಿದೆ.

Liquor prices likely to rise in Kerala

ವಹಿವಾಟು ತೆರಿಗೆಯನ್ನು ಮನ್ನಾ ಮಾಡುವ ನಿರ್ಧಾರವು ರಾಜ್ಯಕ್ಕೆ ಆದಾಯದ ನಷ್ಟವನ್ನು ಉಂಟು ಮಾಡುತ್ತದೆ. ಪ್ರಸ್ತುತ ಕೇರಳದ ಸಾಮಾನ್ಯ ಮಾರಾಟವನ್ನು ಹೆಚ್ಚಿಸುವ ಮೂಲಕ ಶೇ. 4ರಷ್ಟು ಹೆಚ್ಚಳವಾಗುವ ತೆರಿಗೆ ದರ ಸರಿದೂಗಿಸಲು ಪ್ರಯತ್ನಿಸುತ್ತದೆ. ಅದಕ್ಕಾಗಿ ಕೇರಳದ ಸಾಮಾನ್ಯ ಮಾರಾಟ ತೆರಿಗೆ ಕಾಯ್ದೆ 1963ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Breaking: ದೆಹಲಿ ಮದ್ಯ ನೀತಿ- ಫಾರ್ಮಾ ಕಂಪನಿ ಮ್ಯಾನೇಜರ್ ಬಂಧನBreaking: ದೆಹಲಿ ಮದ್ಯ ನೀತಿ- ಫಾರ್ಮಾ ಕಂಪನಿ ಮ್ಯಾನೇಜರ್ ಬಂಧನ

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಹಣಕಾಸು ನಿಗಮದಿಂದ ಹಣವನ್ನು ಪಡೆಯಲು ಅವಕಾಶ ನೀಡಲು ಹಾಗೂ ಕೇರಳ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂಪಾಯಿ ಹೆಚ್ಚುವರಿ ಸರ್ಕಾರಿ ಗ್ಯಾರಂಟಿ ನೀಡಲು ಕೇರಳ ಕ್ಯಾಬಿನೆಟ್ ನಿರ್ಧರಿಸಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ಖೈದಿಗಳಿಗೆ ವಿಶೇಷ ರಿಯಾಯಿತಿ ನೀಡುವ ಮಾನದಂಡಗಳನ್ನು ಪರಿಷ್ಕರಿಸಲಾಗುವುದು ಅಲ್ಲದೆ ಪೊಲೀಸ್, ಅಬಕಾರಿ ಮತ್ತು ಫಿಂಗರ್‌ಪ್ರಿಂಟ್ ಬ್ಯೂರೋಗಳು ಹೊಸ ಮಹೀಂದ್ರ ಬೊಲೆರೊ ವಾಹನಗಳನ್ನು ಪಡೆಯುತ್ತವೆ ಎಂದು ಸರ್ಕಾರ ಘೋಷಿಸಿದೆ.

English summary
The Kerala government has increased the sales tax on liquor by 10%. The price of Indian Made Foreign Liquor (IMFL) is expected to increase in the coming days as it is set to increase by 4 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X