'ವಿಜಯ್ ಮಲ್ಯ ಲಂಡನ್ ಅರಮನೆಯಲ್ಲಿ ಚಿನ್ನದ ಕಮೋಡ್'

ಸಾವಿರಾರು ಕೋಟಿ ರುಪಾಯಿ ಭಾರತದಲ್ಲಿ ಸಾಲ ಉಳಿಸಿಕೊಂಡು, ಸದ್ಯಕ್ಕೆ ಲಂಡನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಬಗ್ಗೆ ಲೇಖಕರೊಬ್ಬರು ಕುತೂಹಲಕರ ಹಾಗೂ ಅಚ್ಚರಿ ಹುಟ್ಟಿಸುವ ಸಂಗತಿಯನ್ನು ಬಯಲು ಮಾಡಿದ್ದಾರೆ. ಲೇಖಕ ಜೇಮ್ಸ್ ಕ್ರಾಬ್ ಟ್ರೀ ಈ ಸಂಗತಿ ಹೊರಗೆಡವಿದ್ದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ.

ಅಂದಹಾಗೆ, ಕ್ರಾಬ್ ಟ್ರೀ ಅವರು ಲೀಕ್ವಾನ್ ಯಿವ್ ನಲ್ಲಿ ಸಹ ಪ್ರಾಧ್ಯಾಪಕರು ಕೂಡ ಹೌದು. ಲಂಡನ್ ನಲ್ಲಿರುವ ವಿಜಯ್ ಮಲ್ಯ ನಿವಾಸಕ್ಕೆ ತಾವು ಭೇಟಿ ನೀಡಿದ್ದ ಸಂದರ್ಭದ ಅನುಭವವನ್ನು ಹಂಚಿಕೊಂಡಿರುವ ಅವರು, ಲಂಡನ್ ನಲ್ಲಿರುವ ಅವರ ಅರಮನೆಯಲ್ಲಿ ನಾಲ್ಕು ಗಂಟೆ ಮಲ್ಯ ಜತೆಗಿದ್ದೆ. ಅಂದು ಅವರ ಮನಸ್ಸು ಬಹಳ ಬೇಸರದಲ್ಲಿತ್ತು ಎಂದಿದ್ದಾರೆ.

ಏಕೆಂದರೆ ಅದು ಮೊನಾಕೋ ಗ್ರಾಂಡ್ ಪ್ರಿಕ್ಸ್ ನ ಹಿಂದಿನ ದಿನ. ಮೊನಾಕೋಗೆ ಹೋಗಲು ಆಗ್ತಿಲ್ಲ ಎಂಬುದು ಅವರ ಚಡಪಡಿಕೆ ಆಗಿತ್ತು. ಮತ್ತೊಂದು ಅರಮನೆಗೆ ಹೋಗಿ, ಅಲ್ಲಿ ಎಲ್ಲರಂತೆ ಟಿವಿಯಲ್ಲಿ ನೋಡಬೇಕು ಎಂಬುದು ಅವರ ಬೇಸರವಾಗಿತ್ತು. ಆ ಹಂತದಲ್ಲಿ ವ್ಹಿಸ್ಕಿ ಸೇವಿಸುತ್ತಿದ್ದ ಮಲ್ಯ ಬಳಿ ಅಲ್ಲಿನ ಟಾಯ್ಲೆಟ್ ಬಳಸಬಹುದೇ ಎಂದು ಕೇಳಿದರಂತೆ ಕ್ರಾಬ್ ಟ್ರೀ. ಅದಕ್ಕೆ ಒಪ್ಪಿಗೆ ಕೂಡ ಸಿಕ್ಕಿದೆ.

Liquor baron Vijay Mallyas London manor has a gold toilet, reveals an author

"ಅಲ್ಲಿ ಮಿಂಚುವ ಚಿನ್ನವನ್ನು ನೋಡಿದೆ. ಅದು ಚಿನ್ನದ ಕಮೋಡ್ ಆಗಿತ್ತು. ಅದರ ರಿಮ್ ಮತ್ತು ಟಾಪ್ ಎಲ್ಲ ಚಿನ್ನವಾಗಿತ್ತು. ಆದರೆ ಚಿನ್ನದ ಟಾಯ್ಲೆಟ್ ಪೇಪರ್ ಇರಲಿಲ್ಲ ಅಷ್ಟೇ. ಆ ಜಾಗದಲ್ಲಿ ಬಿಳಿ ಟವೆಲ್ ಇತ್ತು" ಎಂದು ಅವರು ಹೇಳಿದ್ದಾರೆ.

ಯಾವುದೇ ಶೌಚಾಲಯವು ಅಲ್ಲಿನ ಸ್ಥಳದ ಬಗ್ಗೆ ತಿಳಿಸುತ್ತದೆ. ಯಾವುದೇ ಸಂಸ್ಥೆ ಶೌಚಾಲಯವನ್ನು ಹೇಗೆ ನಿರ್ವಹಿಸುತ್ತದೆ ಎಂಬುದರ ಮೇಲೆ ಕೂಡ ಬಹಳ ವಿಷಯಗಳು ಗೊತ್ತಾಗುತ್ತವೆ ಎಂದಿದ್ದಾರೆ ಕ್ರಾಬ್ ಟ್ರೀ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಟ್ಟಡದಲ್ಲಿ ಒಂದೊಳ್ಳೆ ಶೌಚಾಲಯ ಹುಡುಕುವುದು ಎಷ್ಟು ಕಷ್ಟವಾಗಿತ್ತು ಎಂದು ರಘುರಾಮ್ ರಾಜನ್ ತಮ್ಮ ಬಳಿ ವಿವರಿಸಿದ್ದಾಗಿ ಕ್ರಾಬ್ ಟ್ರೀ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+