ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಂದು ಚಂಡಮಾರುತ, ಚಂಡಿ ಮಳೆಗೆ ಸಿದ್ಧರಾಗಿ

By Mahesh
|
Google Oneindia Kannada News

ಹೈದರಾಬಾದ್, ನ.28: ವಿನಾಶಕಾರಿ ಲೆಹರ್ ಚಂಡ ಮಾರುತ ಇದೀಗ ಬಂಗಾಳಕೊಲ್ಲಿಯಿಂದ ಆಂಧ್ರ ಪ್ರದೇಶದತ್ತ ಧಾವಿಸುತ್ತಿದೆ. ಆದರೆ, ಫೈಲಿನ್ ನಷ್ಟು ಪ್ರಬಲವಾಗಿಲ್ಲ ಯಾವುದೇ ಆತಂಕ ಬೇಡ, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಭಾರಿ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತೀವ್ರ ಸ್ವರೂಪದ ಲೆಹರ್ ಚಂಡ ಮಾರುತ ಆಂಧ್ರಪ್ರದೇಶ ರಾಜ್ಯವನ್ನು ಪ್ರವೇಶಿಸಿದ್ದು, ಆಂಧ್ರದ ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಅಲೆಗಳನ್ನು ಸೃಷ್ಠಿಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಲೆಹರ್ ಚಂಡ ಮಾರುತ ಪ್ರಸ್ತುತ ಗಂಟೆಗೆ 15 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದು, ಸಂಜೆ ವೇಳೆಗೆ ಅದರ ವೇಗ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ಲೆಹರ್ ಚಂಡಮಾರುತ ಆಂಧ್ರದ ಕರಾವಳಿ ತೀರ ಪ್ರದೇಶ ಮಚಲೀಪಟ್ಟಣಂನಿಂದ ಸುಮಾರು 650 ಕಿಮೀ ದೂರದಲ್ಲಿ ಆಂಧ್ರ ಪ್ರದೇಶದತ್ತ ಧಾವಿಸುತ್ತಿದ್ದು, ಆಂಧ್ರಪ್ರದೇಶ ಕರಾವಳಿ ಮತ್ತು ಪುದುಚೇರಿಯಲ್ಲಿ ಬುಧವಾರ ರಾತ್ರಿ ಮಳೆಯಾಗಿದೆ.

ತಜ್ಞರ ಪ್ರಕಾರ ಲೆಹರ್ ಚಂಡ ಮಾರುತದಿಂದ ಆಂಧ್ರ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡು ಸೇರಿದಂತೆ ಕರ್ನಾಟಕ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.ಲೆಹರ್ ಆರ್ಭಟ ಭೀತಿ ಇಲ್ಲದಿದ್ದರೂ ಮಳೆ ತೊಂದರೆಗೆ ಸಿದ್ದರಾಗಬೇಕಾಗಿದೆ..

ತಜ್ಞರ ಎಚ್ಚರಿಕೆ

ತಜ್ಞರ ಎಚ್ಚರಿಕೆ

ಅಲ್ಲದೆ ಭಾರಿ ಬೆಳ ನಾಶ, ವಿದ್ಯುತ್ ಕಡಿತ ಮತ್ತು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಆಂಧ್ರ ಪ್ರದೇಶದ ಕರಾವಳಿ ತೀರ ಪ್ರದೇಶಗಳಲ್ಲಿ ಎಚ್ಚರಿಕೆ ರವಾನಿಸಿರುವ ಆಂಧ್ರ ಸರ್ಕಾರ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸೂಕ್ತ ಪ್ರದೇಶಗಳಿಗೆ ಸ್ಥಳಾಂತರಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಅಲ್ಲದೆ ಕರಾವಳಿ ತೀರದುದ್ದಕ್ಕೂ ಎಚ್ಚರಿಕೆ ವಹಿಸುವಂತೆ ಕರಾವಳಿ ಪೊಲೀಸರಿಗೆ ಸೂಚಿಸಿದೆ. ಇತ್ತೀಚೆಗಷ್ಟೇ ದಾಳಿ ಮಾಡಿದ್ದ ಹೆಲೆನ್ ಚಂಡ ಮಾರುತದ ಬೆನ್ನಲ್ಲಿಯೇ ಲೆಹರ್ ದಾಳಿ ಮಾಡುತ್ತಿದ್ದು, ಆಂಧ್ರ ಪ್ರದೇಶ ಸರ್ಕಾರಕ್ಕೆ ಮತ್ತೊಂದು ತಲೆನೋವು ತಂದೊಡ್ಡಿದೆ.

ಕರ್ನಾಟಕಕ್ಕೆ ಭೀತಿ

ಕರ್ನಾಟಕಕ್ಕೆ ಭೀತಿ

ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ.

ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು ಗುರುವಾರದಿಂದ ವಾರಾಂತ್ಯದ ತನಕ ಕೆಲವು ಪ್ರದೇಶಗಳಲ್ಲಿ ಗುಡುಗು-ಸಿಡಿಲಿನಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

ಕರಾವಳಿ ತೀರದಲ್ಲಿ

ಕರಾವಳಿ ತೀರದಲ್ಲಿ

ಲೆಹರ್ ಮಾರುತದಿಂದ ಮಳೆ ಭೀತಿ

English summary
Relief to coastal Andhra: Cyclone Leher, before the landfall, has reduced to a depression, confirm weather experts.Ahead of heavy rains, 30 National Disaster Response Force teams and six columns of the Army have been called in to assist in the rescue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X