
ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವ ವಿಚಾರ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ನವೆಂಬರ್ 25: ವಿಶೇಷ ವಿವಾಹ ಕಾಯ್ದೆಯಡಿ ಭಾರತದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪರಿಶೀಲಿಸಲು ಭಾರತದ ಸುಪ್ರೀಂ ಕೋರ್ಟ್ ನಿರ್ಧರಿಸಿದೆ. LGBTIQ+ ಸಮುದಾಯದ ಸದಸ್ಯರ ನಡುವೆ ಸಲಿಂಗ ವಿವಾಹಗಳು ಮತ್ತು ಮೈತ್ರಿಗಳನ್ನು ಕಾನೂನುಬದ್ಧಗೊಳಿಸುವಂತೆ ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಸಲಿಂಗ ವಿವಾಹಕ್ಕೂ ಮಾನ್ಯತೆ ನೀಡುವಂತೆ ಸಲಿಂಗಕಾಮಿ ದಂಪತಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಬಗ್ಗೆ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ಅರ್ಜಿಯ ಕುರಿತು ಕೇಂದ್ರ ಮತ್ತು ಅಟಾರ್ನಿ ಜನರಲ್‌ಗೆ ನೋಟಿಸ್ ಜಾರಿ ಮಾಡಿದೆ.
ಹೈದರಾಬಾದ್ ಮೂಲದ ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್ ಈ ಅರ್ಜಿ ಸಲ್ಲಿಸಿದ್ದು, ಒಬ್ಬರ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು LGBTIQ+ ನಾಗರಿಗಕರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. ಹತ್ತು ವರ್ಷದ ಇವರು ಹಿಂದೆ ಅಧಿಕೃತ ಮದುವೆ ನಡೆದಿದ್ದರು. ಈವರೆಗೂ ಅವರು ವಿವಾಹಿತ ದಂಪತಿ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ದಂಪತಿ ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಕೋರ್ಟ್ ಹೇಗೆ ರಕ್ಷಿಸುತ್ತದೆಯೋ ಅದರಂತೆ ಸಲಿಂಗ ವಿವಾಹವು ಈ ಸಂವಿಧಾನಿಕವಾಗಿ ಅಧಿಕೃತಗೊಳಿಸಲು ಮನವಿ ಮಾಡಿದೆ. ದಂಪತಿಗಳು ಈ ತಿಂಗಳು ಸಲ್ಲಿಸಿದ ಅರ್ಜಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಭಾರತದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದು ಹಲವಾರು ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಸಿಂಗಾಪುರವು ಸಲಿಂಗಕಾಮಿಗಾಗಿ ಕ್ರಿಮಿನಲ್ ಪೆನಾಲ್ಟಿಗಳನ್ನು ರದ್ದುಗೊಳಿಸಿತು. ಆದರೆ ಮದುವೆಗೆ ಅವಕಾಶ ನೀಡಲಿಲ್ಲ.