ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶವನ್ನೇ ಬೆಚ್ಚಿಬೀಳಿಸಿದ್ದ ಅತ್ಯಾಚಾರ ಪ್ರಕರಣಗಳು ,ಪ್ರಸ್ತುತ ಸ್ಥಿತಿಗತಿ

|
Google Oneindia Kannada News

ನವದೆಹಲಿ,ಫೆಬ್ರವರಿ 11: ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಕ್ಕೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಆದರೆ ಇನ್ನೂ ಹಲವು ಅತ್ಯಾಚಾರ ಪ್ರಕರಣಗಳು ಇದೇ ರೀತಿ ದೇಶಾದ್ಯಂತ ತಲ್ಲಣ ಮೂಡಿಸಿದ್ದವು. ಆ ಪ್ರಕರಣಗಳ ಸ್ಥಿತಿಇಗಳ ಬಗ್ಗೆ ವಿವರವನ್ನು ಇಲ್ಲಿ ನೀಡಲಾಗಿದೆ. ಪೊಲೀಸರ ಈ ತೀರ್ಮಾನದಿಂದಾಗಿ ಸಂತ್ರಸ್ತೆಯ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

2017ರಲ್ಲಿ ಪ್ರತಿದಿನಕ್ಕೆ 90 ರಂತೆ 32,500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು ಎಂಬುದನ್ನು ಸರ್ಕಾರದ ಡೇಟಾ ಬಹಿರಂಗಗೊಳಿಸಿದೆ.

Legal Status Of Recent Rape Cases In India

ಆ ವರ್ಷ ನ್ಯಾಯಾಲಯವು ಕೇವಲ 18,300 ಪ್ರಕರಣವನ್ನು ಮಾತ್ರ ಇತ್ಯರ್ಥಗೊಳಿಸಿತ್ತು. 2017ರ ಅಂತ್ಯದ ಹೊತ್ತಿಗೆ ನ್ಯಾಯಾಲಯದ ಮುಂದೆ 1,27,800 ಪ್ರಕರಣಗಳಿದ್ದವು. ಕೆಲವು ಅತ್ಯಾಚಾರ ಪ್ರಕರಣಗಳ ವಿವರ ಇಲ್ಲಿದೆ

ನವೆಂಬರ್ 1973: ಅರುಣಾ ಶಾನ್‌ಬಾಗ್, 26 ವರ್ಷದ ನರ್ಸ್ ಆಗಿದ್ದು, ಮುಂಬೈ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುವಾಗ ವಾರ್ಡ್ ಅಟೆಂಡೆಂಟ್‌ನಿಂದ ಅತ್ಯಾಚಾರಕ್ಕೊಳಗಾಗಿದ್ದರು. ಆರೋಪಿ ಸೋಹನ್‌ಲಾಲ್ ಭಾರತ ವಾಲ್ಮೀಕಿಯನ್ನು ಜೈಲಿಗಟ್ಟಲಾಗಿತ್ತು. ಆತ ಅತ್ಯಾಚಾರವೆಸಗಿದ್ದಷ್ಟೇ ಅಲ್ಲದೆ ಆಕೆ ಆಸ್ಪತ್ರೆಯಲ್ಲಿರುವಾಗ ಆಕ್ಸಿಜನ್ ಸಪ್ಲೈಯನ್ನು ನಿಲ್ಲಿಸಿ ಆಕೆ ಕೋಮಾಕ್ಕೆ ಹೋಗುವಂತೆ ಮಾಡಿದ್ದ. 40 ವರ್ಷಗಳ ಕಾಲ ಅದೇ ಸ್ಥಿತಿಯಲ್ಲಿದ್ದ ನರ್ಸ್ 2015ರಲ್ಲಿ ಮೃತಪಟ್ಟಿದ್ದರು.

1990: ಹೀತಲ್ ಪ್ರಕಾಶ್, 14 ವರ್ಷದ ಬಾಲಕಿ ಕೋಲ್ಕತ್ತದಲ್ಲಿ ಧನಂಜಯ್ ಛಟರ್ಜಿ ಅವರಿಂದ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. 2004ರಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. 13 ವರ್ಷಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಅದಾಗಿತ್ತು.

1995:ರಾಜಸ್ಥಾನದಲ್ಲಿ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಐವರು ಆರೋಪಿಗಳನ್ನು ಪ್ರಕರಣದಿಂದ ಕೈಬಿಡಲಾಗಿತ್ತು. ಘಟನೆ 1992ರಲ್ಲಿ ನಡೆದಿತ್ತು.

1996: ಕಾನೂನು ವಿದ್ಯಾರ್ಥಿ ಪ್ರಿಯದರ್ಶಿನಿ ಅವರ ದೆಹಲಿಯ ಫ್ಲಾಟ್‌ನಲ್ಲಿ ಅತ್ಯಾಚಾರಕ್ಕೊಳಗಾಗಿದ್ದರು, ಸಂತೋಷ್ ಸಿಂಗ್ ಎಂಬುವವರು ಅತ್ಯಾಚಾರವೆಸಗಿದ್ದರು. ಆತ ಕೂಡ ಕಾನೂನು ವಿದ್ಯಾರ್ಥಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿ ಮಗನಾಗಿದ್ದ. ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಸರಿಯಾದ ಪುರಾವೆಯಿಲ್ಲದ ಕಾರಣ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು.

2012 ಡಿಸೆಂಬರ್: 2012ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅತ್ಯಾಚಾರದಿಂದಾಗಿ ಗಾಯಗಳ ತೀವ್ರತೆಗೆ ಯುವತಿ ಮೃತಪಟ್ಟಿದ್ದಳು. ದೇಶಾದ್ಯಂತ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದ ಸಂತ್ರಸ್ತೆಗೆ ನಿರ್ಭಯಾ ಎಂದೇ ನಾಮಕರಣ ಮಾಡಲಾಯಿತು.ಪ್ರಕರಣದ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ.

ಓರ್ವ ವಿಚಾರಣೆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ, ಓರ್ವ ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದು ನಂತರ ಬಿಡುಗಡೆಗೊಂಡಿದ್ದ, ಮತ್ತೆ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

2018 ಜನವರಿ: ಜಮ್ಮುವಿನ ಕತುವಾ ಗ್ರಾಮದಲ್ಲಿ ಮುಸ್ಲಿಂ ಅಲೆಮಾರಿ ಜನಾಂಗದ 8 ವರ್ಷದ ಬಾಲಕಿಯನ್ನು ದೇವಾಲಯವೊಂದರಲ್ಲಿ ಒಂದು ವಾರ ಕೂಡಿ ಹಾಕಿ ಅತ್ಯಾಚಾರ ನಡೆಸಲಾಗಿತ್ತು. ನಂತರ ಕೊಲೆ ಮಾಡಲಾಗಿತ್ತು. ಮುಸ್ಲಿಂ ಅಲೆಮಾರಿ ಜನರನ್ನು ಆ ಪ್ರದೇಶದಿಂದ ಓಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿದ್ದರು. ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಮತ್ತು ಇನ್ನೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

2018 ಜುಲೈ: ಏಳು ತಿಂಗಳುಗಳ ಕಾಲ 12 ವರ್ಷದ ವಿದ್ಯಾರ್ಥಿನಿಗೆ ಡ್ರಗ್ ನೀಡಿ, 18 ಮಂದಿ ಕಾಮುಕರು ಅತ್ಯಾಚಾರ ನಡೆಸಿದ್ದರು.

2018 ಅಕ್ಟೋಬರ್: ದಾದಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಕೇರಳದ ಬಿಷಪ್ ಫ್ರಾಂಕೋವನ್ನು ಬಂಧಿಸಲಾಗಿತ್ತು. ಆದರೆ ಅತ್ಯಾಚಾರ ಆರೋಪವನ್ನು ಆತ ಅಲ್ಲಗಳೆದಿದ್ದ.

2019 ಜುಲೈ: ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗರ್ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ, ಈ ಬಗ್ಗೆ ದೂರು ನೀಡಲು ತೆರಳಿದ್ದ ಸಂತ್ರಸ್ತ ಬಾಲಕಿಯ ತಂದೆಯನ್ನು ಪೊಲೀಸರು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟಿದ್ದರು. ಆರೋಪಿ ಶಾಸಕನ ಸಂಬಂಧಿಗಳು ಸಂತ್ರಸ್ತೆಯ ಚಿಕ್ಕಪನ್ನನನ್ನು ಕೊಲೆಮಾಡಿದ್ದರು. ಸಾರ್ವಜನಿಕರ ತೀವ್ರ ಆಕ್ರೋಶದ ನಂತರ ಬಿಜೆಪಿ ತನ್ನ ಶಾಸಕನನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು.

2019 ನವೆಂಬರ್ 28: ಹೈದರಾಬಾದಿನಲ್ಲಿ ನಾಲ್ವರು ಪಶುವೈದ್ಯೆ ಮೇಲೆ ಅತ್ಯಚಾರವಸಗಿ ಆಕೆಯನ್ನು ಸುಟ್ಟಿದ್ದರು. ಬಳಿಕ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಪೊಲೀಸರು ಹತ್ಯೆ ಮಾಡಿದ್ದರು.

English summary
Indian police shot dead four men on Friday who were suspected of raping and killing a 27-year-old veterinarian in the city of Hyderabad, a police official told Reuters, drawing applause from her family and citizens outraged over crimes against women.More than 32,500 cases of rape were registered with the police in 2017, about 90 a day, according to the most recent government data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X