Get Updates
Get notified of breaking news, exclusive insights, and must-see stories!

Mamata Banerjee: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು

ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ರಾಜಕೀಯ ರೂಪ ಪಡೆದುಕೊಂಡಿದೆ. ಆಡಳಿತಾರೂಡ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಇದೇ ವಿಚಾರವನ್ನು ಇಟ್ಟುಕೊಂಡು ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಈ ಬೆನ್ನಲ್ಲೇ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಾಗಿದೆ.

ಬುಧವಾರ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಯನ್ನು ಆಧರಿಸಿ ವಕೀಲರೊಬ್ಬರು ದೆಹಲಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಪ್ರಚೋದನಾಕಾರಿ ಮತ್ತು ಅಶಾಂತಿಯನ್ನು ಸೃಷ್ಟಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪ ಮಾಡಿದ್ದಾರೆ.

Legal Complaint Filed Against Mamata Banerjee for Controversial Remarks

ತೃಣಮೂಲ ಛಾತ್ರ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ ವಿನೀತ್ ಜಿಂದಾಲ್ ದೂರು ನೀಡಿದ್ದಾರೆ. ನೆನಪಿಡಿ, ಬಂಗಾಳ ಸುಟ್ಟುಹೋದರೆ, ಅಸ್ಸಾಂ, ಬಿಹಾರ, ಜಾರ್ಖಂಡ್, ಒಡಿಶಾ, ಮತ್ತು ದೆಹಲಿಯೂ ಉರಿಯುತ್ತದೆ ಎಂದು ಮಮತಾ ಬ್ಯಾನರ್ಜಿ ಕಾರ್ಯಕ್ರದಲ್ಲಿ ಮಾತನಾಡುವ ಹೇಳಿದ್ದರು.

ಮುಖ್ಯಮಂತ್ರಿಯಾಗಿ ಹೀಗೆ ಮಾತನಾಡಬಾರದು

ಮಮತಾ ಬ್ಯಾನರ್ಜಿಯವರ ಹೇಳಿಕೆ ಪ್ರಚೋದನಕಾರಿಯಾಗಿದೆ. ಪ್ರಾದೇಶಿಕ ದ್ವೇಷವನ್ನು ಅವರ ಹೇಳಿಕೆ ಪ್ರಚೋದಿಸುತ್ತದೆ. ಇದರಿಂದ ದೇಶದ ಸಾಮರಸ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಉಂಟು ಮಾಡುತ್ತದೆ ಎಂದು ವಕೀಲ ಜಿಂದಾಲ್ ವಾದಿಸಿದ್ದಾರೆ. ರಾಜ್ಯವೊಂದರ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಹೇಳಿಕೆ ನೀಡುವ ಕನಿಷ್ಠ ಜವಾಬ್ದಾರಿ ಹೊಂದಿರಬೇಖು. ಇಂತಹ ಹೇಳಿಕೆಗಳು ಗಲಭೆಗೆ ಪ್ರಚೋದನೆ ನೀಡಬಹುದು ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಹೇಳಿಕೆ ಜನಸಾಮಾನ್ಯರ ನಡುವೆ ದ್ವೇಷ ಉಂಟುಮಾಡುವ ಉದ್ದೇಶವನ್ನು ಹೊಂದಿದೆ. ಅವರು ತಮ್ಮ ಭಾಷಣದಲ್ಲಿ ದೆಹಲಿ ಹೆಸರನ್ನು ಉಲ್ಲೇಖಿಸಿದ್ದಾರೆ. ನಾನು ದೆಹಲಿಯ ನಿವಾಸಿಯಾಗಿದ್ದು ಮಮತಾ ಬ್ಯಾನರ್ಜಿ ವಿರುದ್ಧ ಭಾರತ ನ್ಯಾಯ ಸಂಹಿತೆ ಸೆಕ್ಷನ್ 152, 192, 196 ಮತ್ತು 353 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದಿಷ್ಟು

ಬುಧವಾರ ಬಿಜೆಪಿ ಕರೆಕೊಟ್ಟಿದ್ದ 12 ಗಂಟೆಗಳ ಬಂಗಾಳ ಬಂದ್ ಅನ್ನು ಖಂಡಿಸಿದ ಸಿಎಂ ಮಮತಾ ಬ್ಯಾನರ್ಜಿ, ಇದು ರಾಜ್ಯಕ್ಕೆ ಅವಮಾನ ಮಾಡುವ ಪ್ರಯತ್ನ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಶಾಂತಿ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

"ಇದು ಬಾಂಗ್ಲಾದೇಶದ ಪ್ರತಿಭಟನೆಯನ್ನು ಹೋಲುತ್ತದೆ ಎಂದು ಕೆಲವರು ಭಾವಿಸಿದ್ದಾರೆ. ನಾನು ಬಾಂಗ್ಲಾದೇಶವನ್ನು ಪ್ರೀತಿಸುತ್ತೇನೆ, ಅವರೂ ಬಂಗಾಳಿ ಭಾಷೆಯನ್ನು ಮಾತನಾಡುತ್ತಾರೆ. ನಮ್ಮ ಸಂಸ್ಕೃತಿ ಕೂಡ ಅದೇ, ಆದರೂ ಬಾಂಗ್ಲಾದೇಶ ವಿಭಿನ್ನವಾಗಿದೆ" ಎಂದು ಹೇಳಿದರು.

ಮೋದಿಯವರೇ, ನೀವು ನಿಮ್ಮ ಜನರ ಮೂಲಕ ಬಂಗಾಳದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದೀರಿ, ಆದರೆ ನೆನಪಿಡಿ ಬಂಗಾಳ, ಅಸ್ಸಾಂ, ಈಶಾನ್ಯ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ದೆಹಲಿಯನ್ನು ಸುಟ್ಟುಹಾಕಿದರೆ, ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+