Get Updates
Get notified of breaking news, exclusive insights, and must-see stories!

Holi 2024: ಇಲ್ಲಿನ ಪುರುಷರು ಪರಸ್ಪರ ಬಟ್ಟೆ ಹರಿದುಕೊಂಡು ಹೋಳಿ ಆಚರಿಸುವರು... ಬೇರೆ ರಾಜ್ಯಗಳಲ್ಲಿ ಹೇಗೆ?

ದೇಶಾದ್ಯಂತ ಮಾರ್ಚ್ 24 ಮತ್ತು 25 ರಂದು ಹೋಳಿಯನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬವಾಗಿದ್ದು ಜನ ಒಗ್ಗೂಡಿ ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ. ಈ ಹಬ್ಬವನ್ನು ದೇಶದ ವಿವಿಧ ಸ್ಥಳಗಳಲ್ಲಿ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಮಾತ್ರವಲ್ಲದೆ ಈ ಹಬ್ಬವನ್ನು ಆಚರಿಸುವ ರೀತಿ ಕೂಡ ಬೇರೆ ಬೇರೆಯಾಗಿದೆ. ಹಾಗಾದರೆ ದೇಶದಲ್ಲಿ ಆಚರಿಸಲಾಗುವ ವಿವಿಧ ರೀತಿಯ ಹೋಳಿಗಳ ಬಗ್ಗೆ ತಿಳಿಯೋಣ-

ಹೂಗಳ ಹೋಳಿ, ವೃಂದಾವನ

ವೃಂದಾವನದಲ್ಲಿ ಹೋಳಿಯನ್ನು ಹೂವಿನ ಹಬ್ಬ ಎಂದು ಆಚರಿಸಲಾಗುತ್ತದೆ. ವೃಂದಾವನದ ಬಂಕೆ ಬಿಹಾರಿ ದೇವಸ್ಥಾನದ ಅರ್ಚಕರು ದೇವಸ್ಥಾನದ ಬಾಗಿಲು ತೆರೆದ ತಕ್ಷಣ ಭಕ್ತರ ಮೇಲೆ ಹೂವುಗಳನ್ನು ಎಸೆಯುತ್ತಾರೆ. ಈ ರೀತಿಯಾಗಿ ಜನರು ಹೋಳಿಯನ್ನು ವೃಂದಾವನದಲ್ಲಿ ಆನಂದಿಸುತ್ತಾರೆ.

Learn how different regions celebrate Holi in kannada

ಖಾರಿ ಹೋಲಿ, ಉತ್ತರಾಖಂಡ

ಉತ್ತರಾಖಂಡದ ಕುಮಾವೂನ್‌ನಲ್ಲಿ ಹೋಳಿ ಹಬ್ಬವು ಈ ದಿನಕ್ಕೆ ಒಂದು ತಿಂಗಳು ಮುಂಚಿತವಾಗಿ ಪ್ರಾರಂಭವಾಗುತ್ತದೆ. ಇಲ್ಲಿ ಜಾನಪದ ಹಾಡುಗಳು ಮತ್ತು ಭಕ್ಷ್ಯಗಳ ಋತುವು ಒಂದು ತಿಂಗಳು ಮುಂಚಿತವಾಗಿ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಆಚರಿಸಲು, ಸ್ಥಳೀಯ ಜನರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಸ್ಥಳೀಯ ಸಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಗುಂಪುಗಳಾಗಿ ನೃತ್ಯ ಮಾಡುತ್ತಾರೆ.

ಪಂಜಾಬ್‌ನಲ್ಲಿ ಹೋಲಾ ಮೊಹಲ್ಲಾ

ಪಂಜಾಬ್‌ನಲ್ಲಿ ಹೋಳಿ ಹಬ್ಬವನ್ನು ಹೋಲಾ ಮೊಹಲ್ಲಾ ಎಂದೂ ಕರೆಯುತ್ತಾರೆ. ಇದರಲ್ಲಿ ನಿಹಾಂಗ್ ಸಿಖ್ಖರು ಯುದ್ಧ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಹೋಳಿ ಹಬ್ಬಕ್ಕೆ ಕೆಲವು ದಿನಗಳ ಮೊದಲು ಇದನ್ನು ಆಚರಿಸಲಾಗುತ್ತದೆ.

ರಾಜಸ್ಥಾನದಲ್ಲಿ ಹೋಳಿ

ರಾಜಸ್ಥಾನದಲ್ಲಿ ಹೋಳಿಯ ವಿವಿಧ ರೂಪಗಳನ್ನು ಕಾಣಬಹುದು. ಕೆಲವೆಡೆ ಲಾಠ್‌ಮಾರ್‌ ಸಂಪ್ರದಾಯವಿದ್ದು, ಕೆಲವೆಡೆ ಬೇಟಮಾರ್‌ ಹೋಳಿ ಆಚರಣೆ ಮಾಡಲಾಗುತ್ತದೆ. ಅಜ್ಮೀರ್‌ನ ಪುಷ್ಕರ್‌ನಲ್ಲಿ ಬಟ್ಟೆ ಹರಿದು ಹೋಳಿ ಆಡಲಾಗುತ್ತದೆ. ಪಶ್ಚಿಮ ರಾಜಸ್ಥಾನದಲ್ಲಿ ಗೈರ್ ನೃತ್ಯವನ್ನು ಆಯೋಜಿಸಲಾದರೆ ಶೇಖಾವತ್‌ನಲ್ಲಿ ಹೋಳಿ ಸಂದರ್ಭದಲ್ಲಿ ಗಿಂಡಾಡ್ ನೃತ್ಯವನ್ನು ಆಯೋಜಿಸಲಾಗುತ್ತದೆ. ಇಲ್ಲಿ ಹೋಳಿ ಹಬ್ಬವು ಹೋಳಿಗೆ 21 ದಿನಗಳ ಮೊದಲು ಪ್ರಾರಂಭವಾಗುತ್ತದೆ. ಅಲ್ಲಿ ಪುರುಷರ ಗುಂಪು ಜಾನಪದ ಹಾಡುಗಳನ್ನು ಹಾಡುತ್ತಾರೆ ಮತ್ತು ಬಣ್ಣಗಳನ್ನು ಪರಸ್ಪರ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ.

Learn how different regions celebrate Holi in kannada

ಗೋವಾದ ಶಿಮ್ಗೋ

ಗೋವಾದಲ್ಲಿ ಕೊಂಕಣಿ ಜನರು ಹೋಳಿಯನ್ನು ಶಿಮ್ಗೋ ಅಥವಾ ಶಿಮ್ಗೋತ್ಸವ್ ಎಂದು ಆಚರಿಸುತ್ತಾರೆ. ಈ ಜನರು ವಸಂತವನ್ನು ಸ್ವಾಗತಿಸಲು ಬಣ್ಣ ಎರಚಿ ಆಡುತ್ತಾರೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಆಹಾರವೆಂದರೆ ಮಸಾಲೆಯುಕ್ತ ಚಿಕನ್ ಅಥವಾ ಮಟನ್ ಕರಿ ಇದನ್ನು ಕೊಂಕಣಿಯಲ್ಲಿ ಶಾಗೋಟಿ ಎಂದು ಕರೆಯಲಾಗುತ್ತದೆ. ಗೋವಾದಲ್ಲಿ ಶಿಮ್ಗೋತ್ಸವದ ಸಂದರ್ಭದಲ್ಲಿ ಬೃಹತ್ ಮೆರವಣಿಗೆಯನ್ನು ಮಾಡಲಾಗುತ್ತದೆ.

ದೋಲ್ ಜಾತ್ರೆ, ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ಹೋಳಿಯನ್ನು 'ಡೋಲ್ ಜಾತ್ರೆ' ಎಂದು ಕರೆಯಲಾಗುತ್ತದೆ. ಈ ದಿನ ಇಲ್ಲಿನ ಜನರು ಕೃಷ್ಣ ಮತ್ತು ರಾಧೆಯರ ವಿಗ್ರಹಗಳನ್ನು ಪಲ್ಲಕ್ಕಿಯ ಮೇಲೆ ಇಟ್ಟು ಗುಲಾಲ್‌ನೊಂದಿಗೆ (ಬಣ್ಣ) ಹೋಳಿ ಆಡುತ್ತಾರೆ. ಯುವಕರು ಹಿರಿಯರ ಕಾಲಿಗೆ ತಲೆ ಹಚ್ಚಿ ಆಶೀರ್ವಾದ ಪಡೆಯುತ್ತಾರೆ. ಜಾನಪದ ಹಾಡುಗಳು ಮತ್ತು ಜಾನಪದ ನೃತ್ಯಗಳನ್ನು ಆಯೋಜಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+