75 ವರ್ಷದೊಳಗೆ ನಾಯಕರು ನಿವೃತ್ತಿ ಹೊಂದಬೇಕು: ಸಂಚಲನ ಸೃಷ್ಟಿಸಿದ ಮೋಹನ್ ಭಾಗವತ್ ಹೇಳಿಕೆ, ಮೋದಿಗೆ ಟಾಂಗ್?
ಮುಂಬೈ, ಜುಲೈ 11: 75 ವರ್ಷ ತುಂಬಿದ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅವರು 75 ವರ್ಷ ತುಂಬಿದ ನಂತರ ನಾಯಕರು ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೋಹನ್ ಭಾಗವತ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಹೇಳಿದ್ದಾರೆ ಎಂದು ವಿಪಕ್ಷಗಳ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಬುಧವಾರ ಸಂಜೆ ನಾಗ್ಪುರದಲ್ಲಿ ದಿವಂಗತ ಆರ್‌ಎಸ್‌ಎಸ್ ಸಿದ್ಧಾಂತವಾದಿ ಮೋರೋಪಂತ ಪಿಂಗಳೆಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ನಿಮಗೆ 75 ವರ್ಷ ತುಂಬಿದಾಗ, ನೀವು ಈಗಲೇ ನಿಲ್ಲಿಸಿ ಇತರರಿಗೆ ದಾರಿ ಮಾಡಿಕೊಡಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಕೆಲವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಯಸ್ಸಿಗೆ ಸಂಬಂಧಿಸಿ ಕೂಡ ವೀಕ್ಷಿಸಿದ್ದಾರೆ, ಏಕೆಂದರೆ ಮೋದಿ ಈ ವರ್ಷದ ಸೆಪ್ಟೆಂಬರ್ ಗೆ 75 ವರ್ಷ ಪೂರೈಸಲಿದ್ದಾರೆ. ಭಾಗವತ್ ಅವರ ಹೇಳಿಕೆ ಬಿಜೆಪಿಯ 75 ವರ್ಷದ ನಿವೃತ್ತಿ ಸೂತ್ರವನ್ನು ಮತ್ತೆ ಚರ್ಚೆಗೆ ತಂದಿದ್ದು, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದನ್ನು ರಾಜಕೀಯವಾಗಿ ಲೇವಡಿ ಮಾಡಿವೆ.

75 ವರ್ಷದೊಳಗೆ ನಾಯಕರು ನಿವೃತ್ತಿ ಹೊಂದಬೇಕು ಎಂಬ ಭಾಗವತ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ ಮತ್ತು ಇದನ್ನು ಪ್ರಧಾನಿ ಮೋದಿ ಅವರ ಭವಿಷ್ಯದ ಬಗ್ಗೆ ಕೂಡ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಮೋಹನ್ ಭಾಗವತ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಹೇಳಿದ್ದಾರೆ ಎಂದು ವಿಪಕ್ಷಗಳು ಹೇಳಿಕೆ ನೀಡಿದೆ. ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಆಂತರಿಕ ಸಂಘರ್ಷ ಇದೀಗ ಬಯಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಧಾನಿ ಮೋದಿಗೆ ನೀಡಿರುವ ಗುಪ್ತ ಸಂದೇಶ ಎಂದು ಹಲವರು ವ್ಯಾಖ್ಯಾನಿಸಿರುವ ಈ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಶಿವಸೇನೆ (ಯುಬಿಟಿ)ಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಪ್ರತಿಕ್ರಿಯಿಸಿ, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಜಸ್ವಂತ್ ಸಿಂಗ್ ಅವರಂತಹ ನಾಯಕರು 75 ವರ್ಷ ತುಂಬಿದ ನಂತರ ಪ್ರಧಾನಿ ಮೋದಿ ಅವರನ್ನು ನಿವೃತ್ತಿ ಹೊಂದುವಂತೆ ಒತ್ತಾಯಿಸಿದರು. ಅವರು ಈಗ ಅದೇ ನಿಯಮವನ್ನು ತನಗೂ ಅನ್ವಯಿಸುತ್ತಾರೆಯೇ ಎಂದು ನೋಡೋಣ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದೆ 2023 ರ ಮೇ ತಿಂಗಳಲ್ಲಿ ಬಿಜೆಪಿಯ ಸಂವಿಧಾನದಲ್ಲಿ ನಿವೃತ್ತಿ ಷರತ್ತು ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಮೋದಿ ಜಿ 2029 ರವರೆಗೆ ಮುನ್ನಡೆಸಲಿದ್ದಾರೆ. ನಿವೃತ್ತಿ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಇಂಡಿಯಾ ಬಣವು ಮುಂಬರುವ ಚುನಾವಣೆಗಳನ್ನು ಸುಳ್ಳಿನಿಂದ ಗೆಲ್ಲುವುದಿಲ್ಲ ಎಂದು ಅವರು ಹೇಳಿದರು.
ಭಾಗವತ್ ಅವರ ಹೇಳಿಕೆಗಳ ದಿನವೇ, ಭಾರತದ ಅತ್ಯಂತ ಸಕ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಅಮಿತ್ ಶಾ ಅವರು ನಿವೃತ್ತಿಯ ನಂತರದ ತಮ್ಮ ಆಕಾಂಕ್ಷೆಗಳ ಬಗ್ಗೆ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದರು. "ವೇದಗಳು, ಉಪನಿಷತ್ತುಗಳು ಮತ್ತು ಸಾವಯವ ಕೃಷಿಗೆ ನನ್ನ ಸಮಯವನ್ನು ಮೀಸಲಿಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದರು, ಆದರೆ ಅವರು ಯಾವಾಗ ನಿವೃತ್ತರಾಗುತ್ತಾರೆ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.
ಕಾಂಗ್ರೆಸ್‌ನ ಜೈರಾಮ್ ರಮೇಶ್ ಅವರು ಮಾತನಾಡಿ, ಮೋಹನ್ ಭಾಗವತ್ ಅವರು ಒಂದೇ ಬಾಣದಿಂದ ಎರಡು ಗುರಿಗಳನ್ನಿಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಕಾಂಗ್ರೆಸ್ ಮತ್ತೋರ್ವ ನಾಯಕ ಒವನ್ ಖೇರಾ ಕೂಡ, ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಗುರಾಣಿಯನ್ನಾಗಿ ಬಳಸಿ, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ವರ್ಷದ ಸೆಪ್ಟೆಂಬರ್ 17ರಂದು 75ನೇ ವರ್ಷಕ್ಕೆ ಕಾಲಿಡಲಿರುವ ಹಿನ್ನೆಲೆಯಲ್ಲಿ, ಮೋಹನ್ ಭಾಗವತ್ ಅವರ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ. ಮೋದಿ ಅವರಿಗೆ ಈ ವರ್ಷ ಸೆಪ್ಟೆಂಬರ್ ಗೆ 75 ವರ್ಷಕ್ಕೆ ಕಾಲಿಡಲಿರುವ ಹಿನ್ನೆಲೆ ಮೋಹನ್ ಭಾಗವತ್ ಅವರ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications